ಹಿಂದೂಗಳಿಗೆ ಇಷ್ಟು ಮಂದಿ ದೇವರುಗಳು ಯಾಕೆ? ಮನೆಯ ಮುಂದೆ ರಂಗೋಲಿ ಹಾಕುವುದು ಯಾಕೆ? Answers:▼

ಮನೆಯ ಮುಂದೆ ರಂಗೋಲಿ ಹಾಕುವುದು ಯಾಕೆ? :  ಬೆಳಿಗ್ಗೆ ಎದ್ದು ಮನೆಯ ಮುಂದೆ ರಮಗೋಲಿ ಹಾಕುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಹಿಂದೂಗಳೆಲ್ಲರೂ ಬೆಳಿಗ್ಗೆ ತಮ್ಮ ಮನೆಗಳ ಮುಂದೆ ರಂಗೋಲಿ ಹಾಕುತ್ತಾರೆ. ರಂಗೋಲಿ ಹಾಕಲು ಹಲವು ಪದಾರ್ಥಗಳನ್ನು ಬಳಸುತ್ತಾರೆ. ಅವುಗಳಲ್ಲಿ ಸುಣ್ಣದಕಲ್ಲು, ಸೀಮೆಸುಣ್ಣ, ಅಕ್ಕಿಹಿಟ್ಟು ಪ್ರಮುಖವಾದುವು. ಕೆಲವರು ಅಕ್ಕಿ ಹಿಟ್ಟು ಹಾಗು ಸುಣ್ಣ ಎರಡನ್ನೂ ಬೆರಸಿ ರಂಗೋಲಿಯನ್ನು ಬಿಡಿಸುವರು. ಸುಣ್ಣದಕಲ್ಲಿನ ವಾಸನೆಗೆ ಚೇಳು, ಹಾವು ಮೊದಲಾದ ವಿಷ ಜಂತುಗಳು ಮನೆಯೊಳಗೆ ಬರುವುದಿಲ್ಲ. ಅಕ್ಕಿಹಿಟ್ಟಿನಿಂದ ರಂಗೋಲಿ ಬಿಡಿಸಿದರೆ, ಆ ಹಿಟ್ಟನ್ನು ತಿನ್ನಲು ಇರುವೆಗಳು ಬಂದು, ಅವು ಈ ವಿಷಜಂತುಗಳನ್ನು ತಿನ್ನುತ್ತವೆೆ. ಯಾವುದೇ ರಂಗೋಲಿ ಪುಡಿಯನ್ನು ಉಪಯೋಗಿಸಿದರೂ ಪರಿಣಾಮ ಒಂದೇ. ಹೆಣ್ಣುಮಕ್ಕಳು ರಂಗೋಲಿಯನ್ನು ಹಾಕುವುದರಲ್ಲಿ ವೈಜ್ಞಾ ನಿಕ ಕಾರಣವೂ ಅಡಗಿದೆ. ಪುರುಷರಿಗೆ ಮಾಲೆಯಿಂದ ಜಪ ಮಾಡಲು ಸಮಯ ಸಿಗುತ್ತದೆ. ಆದರೆ ಮಹಿಳೆಯರಿಗೆ ಸಮಯ ಇರುವುದಿಲ್ಲ. ತೋರುಬೆರಳು, ಹೆಬ್ಬೆರಳುಗಳನ್ನು ಬಳಸಿ ರಂಗೋಲಿ ಬಿಡಿಸುವುದರಿಂದ ಜ್ಞಾನಮುದ್ರೆಯಿಂದ ಆಗುವ ಉಪಯೋಗವು ದೊರೆಯುತ್ತದೆ. ಒಂದು ದಿನ ರಂಗೋಲಿ ಹಾಕದಿದ್ದರೆ.ಆ ಮಹಿಳೆಗೆ ಆರೋಗ್ಯ ಸರಿಯಿಲ್ಲವೆಂದು / ಆಕೆಯ ಮನಸು ಚೆನ್ನಾಗಿಲ್ಲವೆಂದು / ಏನೋ ಗಲಾಟೆ ನಡೆದಿದೆಯೆಂದು / ಕೆಲಸದ ಒತ್ತಡ ಇರಬಹುದೆಂದು ತಿಳಿದು ಅಕ್ಕಪಕ್ಕದವರು ಸಹಾಯ ಮಾಡುತ್ತಿದ್ದರು, ಹಿರಿಯರಾದರೆ (ಮಹಿಳೆಯರು) ತಮ್ಮ ಅನುಭವದಿಂದ ಆ ಮಹಿಳೆ ಬಿಡಿಸಿದ ರಂಗೋಲೆ ನೋಡಿ ಆಕೆಯ ಸ್ವಭಾವ ಹಾಗೂ ಮಾನಸಿಕ ಸ್ಥಿತಿ ಹೇಗಿದೆ ಎಂದು ತಿಳಿಯುತ್ತಿದ್ದರು. ಮಾನಸಿಕವಾಗಿ ಒತ್ತಡಕ್ಕೆ ಗುರಿಯಾದ ಮಹಿಳೆಯರಿಗೆ ರಂಗೋಲೆ ಹಾಕುವುದರಿಂದ ಮಾನಸಿಕ ಶಾಂತಿಯೂ ಸಹ ಲಭಿಸುತ್ತದೆ.

ಮನೆ ಮಾವಿನ ಎಲೆಯ ತೋರಣವನ್ನು ಯಾಕೆ ಕಟ್ಟುತ್ತಾರೆ?ಹಬ್ಬ ಹರಿದಿನಗಳು ಬಂತೆಂದರೆ ಸಾಕು, ಮನೆಯ ಮುಂದಿನ ಬಾಗಿಲಿಗೆ ಮಾವಿನ ತೊರಣವನ್ನು ಕಟ್ಟಿ ಅಲಂಕರಿಸುತ್ತೇ. ಇದು ನೋಡಲು ಸುಂದರವೂ ಹೌದು ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ.ಎಲೆಗಳಿಂದ ಹೊರಬರುವ ಪರಿಮಳವು ಗಾಳಿಯಲ್ಲಿರುವ ಹಲವು ರೀತಿಯ ವ್ಯಾಧಿಗಳಿಗೆ ಕಾರಣವಾದ ಕ್ರಿಮಿಗಳನ್ನು ನಾಶಪಡಿಸುತ್ತದೆ. ಹೆಚ್ಚಿನ ಜನದಟ್ಟಣೆ ಇರುವ ಸಮಯದಲ್ಲಿ ಮಾವಿನ ಎಲೆಗಳ ತೋರಣ ಕಟ್ಟುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುವ ಖಾಯಿಲೆಗಳನ್ನು ಸ್ವಲ್ಪಮಟ್ಟಿಗಾದರೂ ನಿವಾರಿಸಬಹುದು.

ಯುಗಾದಿಯಂದು ಕಹಿಯಾಗಿರುವಂತಹ ಬೇವು-ಬೆಲ್ಲವನ್ನು ಯಾಕೆ ಸೇವಿಸಬೇಕು?ಯುಗಾದಿ ಬಂತೆಂದರೆ ಸಾಕು ಎಲ್ಲರೂ ಬೇವು ಬೆಲ್ಲವನ್ನು ಪರಸ್ಪರ ಹಮಚಿಕೊಂಡು ಸಂತಸಿಸುತ್ತೇವೆ. ಯುಗಾದಿಯನ್ನು ಬೇವು ಬೆಲ್ಲದ ಹಬ್ಬವೆಂದೇ ಕೆಲವರು ಕರೆಯುತ್ತಾರೆೆ. ಯುಗಾದಿಯಂದು ಬೇವು-ಬೆಲ್ಲವನ್ನು ತಿನ್ನುವುದರಿಂದ ಆ ತಿಂಗಳಿನಲ್ಲಿ ಬರುವಂತಹ ಖಾಯಿಲೆಗಳಿಂದ ನಮಗೆ ರಕ್ಷಣೆ ಸಿಗುತ್ತದೆ.

ಹಿಂದೂಗಳಿಗೆ ಇಷ್ಟು ಮಂದಿ ದೇವರುಗಳು ಯಾಕೆ?ನಮ್ಮನ್ನು ಆಳುವಂತಹ ರಾಜರನ್ನೇ ದೇವರೆಂದು ಪೂಜಿಸುವ ಆಚಾರ / ರೂಢಿ ಮೊದಲಿನಿಂದಲೂ ಬಂದಿದೆ. ಹಾಗೆಯೇ ರಾಜ್ಯಗಳನ್ನು ಆಳಿ ಪರಿಪಾಲಿಸಿದವರನ್ನೂ ದೇವರಂತೆ ಕಾಣುತ್ತೇವೆ. ಸಮಾಜಕ್ಕೆ ದೇಶಕ್ಕೆ ಒಳ್ಳೆಯ ಕೆಲಸ ಮಾಡಿದವರನ್ನೂ ಪೂಜಿಸುವ ಸಂಪ್ರದಾಯವು ನಮ್ಮದಾಗಿದೆ.ಭಾರತ ದೇಶದಲ್ಲಿ ಯಾರಿಗೆ ಇಷ್ಟವಾದ ದೇವರನ್ನು ಅವರು ಸೃಷ್ಟಿಸಿಕೊಳ್ಳುವ / ರೂಪಿಸಿಕೊಳ್ಳುವ ಇಷ್ಟ ದೈವಾರಾಧನೆಯು ಇದೆ. ಪ್ರತಿಯೊಂದು ಗ್ರಾಮದಲ್ಲೂ ಒಬ್ಬ ಗ್ರಾಮದೇವತೆ ಇದ್ದು, ಆ ದೇವತೆಗೆ ಪ್ರತೀ ವರ್ಷ ಜಾತ್ರೆ ಮಾಡುತ್ತಾರೆ. ಇದು ಗ್ರಾಮದ ಜನರೆಲ್ಲರೂ ಒಗ್ಗೂಡಲು ಸಹಾಯವಾಗುತ್ತದೆ. ಸಮಾಜದಲ್ಲಿ ಸೌಹಾರ್ಧತೆ ನೆಲೆಗೊಳ್ಳಲು ಸಹಾಯವಾಗುತ್ತದೆ.

Reply