ಫುಟ್‌ಪಾತ್ ಮೇಲೆ ಓದಿಕೊಳ್ಳುತ್ತಿದ್ದ ಬಾಲಕ ತನಗೆ ಸಿಎಂ ಕೊಟ್ಟ ರೂ.5 ಲಕ್ಷ ಚೆಕ್ ಬೇಡ ಎಂದ… ಯಾಕೆ ಗೊತ್ತಾ..?

ಇಂದಿನ ಟೆಕ್ ಪ್ರಪಂಚದಲ್ಲಿ ಸಾಮಾಜಿಕ ಮಾಧ್ಯಮ ಪ್ರಭಾವ ಯಾವ ರೀತಿ ಇದೆ ಅಂತ ಎಲ್ಲರಿಗೂ ಗೊತ್ತಿರುವುದೆ. ಯಾವುದಾದರೂ ಒಂದು ವಿಷಯ ವೈರಲ್ ಆಗಲು, ಅದರಿಂದ ಏನಾದರೂ ನಡೀಬೇಕು ಅಂದರೆ ಈಗ ಸರಳವಾಗಿ ಸಾಮಾಜಿಕ ಸೈಟ್‌ಗಳಲ್ಲಿ ಒಂದು ಪೋಸ್ಟ್ ಹಾಕಿದರೆ ಸಾಕು. ಅದು ಎಲ್ಲರನ್ನೂ ಸೆಳೆಯುವುದಾದರೆ ಕ್ಷಣ ಮಾತ್ರದಲ್ಲಿ ಲಕ್ಷಾಂತರ ಮಂದಿ ಬಳಕೆದಾರರಿಗೆ ತಲುಪುತ್ತೆ. ಇದೇ ಸೂತ್ರವನ್ನು ತಿಳಿದುಕೊಂಡ ವಿಕಾಸ್ ಶಾರ್ದಾ ಅನ್ನೋ ವ್ಯಕ್ತಿ ಕೆಲವು ತಿಂಗಳ ಹಿಂದೆ ಫೇಸ್‌ಬುಕ್‍ನಲ್ಲಿ ಹಾಕಿದ ಒಂದು ಪೋಸ್ಟ್ ವೈರಲ್ ಆಗಿ ಒಬ್ಬ ಬಾಲಕನ ಮೇಲೆ ಎಲ್ಲರ ದೃಷ್ಟಿ ಬೀಳುವಂತೆ ಮಾಡಿತು. ಆದರೆ ಆ ಬಾಲಕನ ಪರಿಸ್ಥಿತಿ ಕೊನೆಗೆ ಏಯಾಯಿತು? ತಿಳಿದುಕೊಳ್ಳೋಣ ಬನ್ನಿ!

Kid Studying on road

ಆ ಬಾಲಕನ ಹೆಸರು ಮಹೇಂದ್ರ ಸಿಂಗ್ ಚೌಹಾಣ್. ವಯಸ್ಸು 13 ವರ್ಷ. ನೋಯಿಡಾ ಸಿಟಿಯಲ್ಲಿ ವಾಸ ಮಾಡುತ್ತಿದ್ದಾನೆ. ತನ್ನ ತಂದೆ ಇತ್ತೀಚೆಗೆ ಕೆಲಸ ಕಳೆದುಕೊಂಡ ಮೇಲೆ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಯಿತು. ಇದರಿಂದ ಮಹೇಂದ್ರ ಓದಿಗೆ ತೊಂದರೆಯಾಯಿತು. ಆದರೆ ಮಹೇಂದ್ರ ಮಾತ್ರ ಧೈರ್ಯ ಕಳೆದುಕೊಳ್ಳಲಿಲ್ಲ. ತನ್ನ ಸ್ವಂತ ಶಕ್ತಿಯಿಂದ ಓದಿಕೊಳ್ಳಬೇಕೆಂದು ನಿರ್ಧರಿಸಿದ. ಆ ಪ್ರಕಾರ ನೋಯಿಡಾ ಸಿಟಿ ಸೆಂಟರ್ ಮೆಟ್ರೋ ರೈಲ್ವೇ ಸ್ಟೇಷನ್ ಬಳಿ ಇರುವ ರಸ್ತೆ ಪಕ್ಕ ಒಂದು ವೆಯಿಂಗ್ ಮೆಷಿನ್ ಇಟ್ಟುಕೊಂಡು ಓದಿಕೊಳ್ಳಲು ಆರಂಭಿಸಿದ. ತೂಕ ಚೆಕ್ ಮಾಡಿಕೊಳ್ಳುವವರು ಕೊಡುವ ರೂ.1 ಕಾಯಿನ್‌ಗಳನ್ನು ಸಂಗ್ರಹಿಸಿ ಅದರಿಂದಲೇ ಓದಿಕೊಳ್ಳಬೇಕೆಂದು ನಿರ್ಧರಿಸಿ, ಅದರಂತೆ ಮುನ್ನಡೆದ.

ಆದರೆ ಮೇಲೆ ತಿಳಿಸಿದ ವಿಕಾಶ್ ಶಾರ್ದಾ ಅನ್ನೋ ವ್ಯಕ್ತಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿರಬೇಕಾದರೆ ಫುಟ್‍ಪಾತ್ ಮೇಲೆ ವೆಯಿಂಗ್ ಮೆಷಿನ್ ಪಕ್ಕದಲ್ಲಿ ಓದಿಕೊಳ್ಳುತ್ತಿರುವ ಮಹೇಂದ್ರ ಕಣ್ಣಿಗೆ ಬಿದ್ದ. ಇದಕ್ಕೆ ಸ್ಪಂದಿಸಿದ ವಿಕಾಸ್ ಆ ಬಾಲಕನಿಗೆ ಸಹಾಯ ಮಾಡಬೇಕೆಂದು ತನ್ನ ಫೇಸ್‍ಬುಕ್ ಖಾತೆಯಲ್ಲಿ ಒಂದು ಪೋಸ್ಟ್ ಹಾಕಿದ. ಕೇವಲ ಕೆಲವೇ ದಿನಗಳ ಕಾಲಾವಧಿಯಲ್ಲಿಈ ವಿಷಯ ಆ ರಾಜ್ಯದ ಸಿಎಂ ಅಖಿಲೇಶ್ ಯಾದವ್‌ವರೆಗೂ ಹೋಯಿತು. ಕೂಡಲೆ ಅಖಿಲೇಶ್ ಆ ಬಾಲಕನ ಸಹಾಯಕ್ಕಾಗಿ ರೂ.5 ಲಕ್ಷ ಚೆಕ್ ಕೊಟ್ಟರು. ಆದರೆ ಮಹೇಂದ್ರ ಮಾತ್ರ ಚೆಕ್ ಸ್ವೀಕರಿಸಲಿಲ್ಲ. ಕಾರಣ ಅದಾಗಲೆ ಅವರ ತಂದೆಗೆ ಇನ್ನೊಂದು ಕೆಲಸ ಸಿಕ್ಕಿತ್ತು. ಹಾಗಾಗಿ ಆ ಚೆಕ್ ಬೇಡ ಎಂದ. ತಾನು ತನ್ನಪ್ಪ ಕೊಡುವ ಹಣದಿಂದಲೇ ಓದಿಕೊಳ್ಳುತ್ತೇನೆಂದು, ತನಗೆ ಯಾರ ಸಹಾಯ ಬೇಡ ಎಂದು ಹೇಳಿದ. ಮಹೇಂದ್ರ ಹೇಳಿದ ಮಾತುಗಳಿಂದ ಕೇವಲ ಸಿಎಂ ಅಖಿಲೇಶ್ ಯಾದವ್ ಅವರಷ್ಟೇ ಅಲ್ಲ, ಆ ಬಾಲಕನಿಗೆ ಸಹಾಯ ಮಾಡಬೇಕೆಂದು ಬಂದಿದ್ದ ಎನ್‌ಜಿಓಗಳನ್ನೂ ಚಕಿತರಾದರು. ಈ ಸಂದರ್ಭದಲ್ಲಿ ಮಹೇಂದ್ರ ದೊಡ್ಡವನಾದ ಮೇಲೆ ತಾನು ಏನಾಗಬೇಕೆಂದುಕೊಂಡಿದ್ದಾನೋ, ಅವರಿಗೆ ಏನ್ ಹೇಳಿದ ಗೊತ್ತಾ? ಆರ್ಮಿ ಆಫೀಸರ್ ಆಗಬೇಕು ಎಂದು. ಹೌದು, ದೊಡ್ಡವನಾದ ಮೇಲೆ ಮಹೇಂದ್ರ ಆರ್ಮಿ ಆಫೀಸರ್ ಆಗಿ ದೇಶಸೇವೆ ಮಾಡ್ತೀನಿ ಎಂದು ಹೇಳಿದ. ಯಾರ ಮೇಲೂ ಆಧಾರಪಡದೆ ಸ್ವಂತ ಶಕ್ತಿಯಿಂದ ಬೆಳೆಯಬೇಕೆಂದು ಹೇಳಿದ ಬಾಲಕ ಮಹೇಂದ್ರನ ಆಲೋಚನಾ ಶಕ್ತಿಗೆ, ಆತ್ಮವಿಶ್ವಾಸಕ್ಕೆ ನಿಜವಾಗಿಯೂ ನಾವು ಹ್ಯಾಟ್ಸಾಫ್ ಹೇಳಲೇಬೇಕು!

Share this post

Post Comment