ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಲವ್ ಸಾಂಗ್ ಶೂಟಿಂಗ್ ; ಸ್ಥಳೀಯ ಜನರು ಗರಂ

ಫತೇಹಾಬಾದ್: ಹರಿಯಾಣದ ಫತೇಹಾಬಾದ್‍ನ ಭಟ್ಟೂಕಲಾ ಗ್ರಾಮದ ಸರಕಾರಿ ಶಾಲೆಯಲ್ಲಿ ಪ್ರೇಮ ಪ್ರಸಂಗದ ಹಾಡು ಶೂಟಿಂಗ್ ಮಾಡಿದ್ದಕ್ಕಾಗಿ ಶಿಕ್ಷಣ ಇಲಾಖೆ ಒಂಬತ್ತು ತಿಂಗಳ ಬಳಿಕ ನಿದ್ದೆಯಿಂದ ಎಚ್ಚೆತ್ತುಕೊಂಡಿದೆ. ಸರಕಾರಿ ಶಾಲೆಯಲ್ಲಿ ಅನುಮತಿ ಪಡೆಯದೆ ಹಾಡು ಶೂಟಿಂಗ್ ಮಾಡಲಾಗಿತ್ತು. ಈಗ ಒಂಬತ್ತು ತಿಂಗಳ ಬಳಿಕ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ಶಿಕ್ಷಣ ನಿರ್ದೇಶಾನಾಲಯದ ಆದೇಶದ ಬಳಿಕ ಹಾಡು ಚಿತ್ರೀಕರಿಸಿದತಂಡದವಿರುದ್ಧ ಕ್ರಮ ಜರಿಗಿಸಲು ನಿರ್ಧರಿಸಲಾಗಿದೆ.

ಹಾಡು ಚಿತ್ರೀಕರಣದ ವೇಳೆ ಸ್ಥಳೀಯ ಜನರು ವಿರೋಧವನ್ನು ವ್ಯಕ್ತಪಡಿಸಿದ್ದರು. 2018 ಮಾರ್ಚ್ ತಿಂಗಳಲ್ಲಿ ಸರಕಾರಿ ಶಾಲೆಯಲ್ಲಿ ಹಾಡು ಚಿತ್ರೀಕರಣ ನಡೆದಿತ್ತು. ಶಾಲೆಯ ಮಕ್ಕಳು , ಅಧ್ಯಾಪಕರ ಉಪಸ್ಥಿತಿಯಲ್ಲಿ ಚಿತ್ರ ತಂಡ ಹಾಡಿನ ಶೂಟಿಂಗ್ ನಡೆಸಿತ್ತು. ಶಿಕ್ಷಣ ನಿರ್ದೇಶನಾಲಯ ಈಗ ಜಿಲ್ಲಾ ಶಿಕ್ಷಣಾಧಿಕಾರಿಗೆ ಪತ್ರ ಬರೆದು ಚಿತ್ರ ತಯಾರಿಕಾ ಕಂಪೆನಿಯ ವಿರುದ್ಧ ಪ್ರಕರಣ ದಾಖಲಿಸಲು ಆದೇಶಿಸಿದೆ.ಹಾಡಿನಲ್ಲಿ ಮುಖ್ಯಪಾತ್ರದಲ್ಲಿರುವ ಹುಡುಗ ಬಟ್ಟೂಕಲಾದ ಸರಕಾರಿ ಶಾಲೆಯೊಂದರ ಒಂಬತ್ತನೆ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ಗ್ರಾಮಸ್ಥರು ಇದರ ಕುರಿತು ಫತೇಹಾ ಬಾದ್ ಜಿಲ್ಲಾಧಿಕಾರಿಗೆ ದೂರು ನೀಡಿ ಶಾಲಾ ಸಿಬ್ಬಂದಿಗಳ ವಿರುದ್ಧ ಕ್ರಮ ಜರಗಿಸಲು ಆಗ್ರಹಿಸಿದ್ದರು. ಜಿಲ್ಲಾಧಿಕಾರಿ ನಂತರ ಮೂವರು ಸದಸ್ಯರ ಸಮಿತಿ ರಚಿಸಿ ತನಿಖೆಗೆ ಆದೇಶಿಸಿದ್ದರು.

 

ಮಕ್ಕಳ ಪ್ರೇಮ ಪ್ರಸಂಗವನ್ನು ಶಾಲೆಯಲ್ಲಿ ಚಿತ್ರೀಕರಿಸಲಾಗಿದ್ದು ಶಾಲೆಯಲ್ಲಿ ಇಂತಹ ಹಾಡು ಚಿತ್ರೀಕರಿಸಿದ್ದು ಇದು ಮಕ್ಕಳಲ್ಲಿ ಕೆಟ್ಟ ಪ್ರಭಾವ ಬೀರಬಹುದು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಶಾಲೆಯ ಪ್ರಿನ್ಸಿಪಾಲ್ ಅನುಮತಿಯಿಲ್ಲದೆ ಶಾಲೆಯಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದು ತಿಳಿಸಿದರು. ಚಿತ್ರೀಕರಣ ತಂಡ ಬಂದ ವೇಳೆ ಅವರು ಶಾಲೆಯಲ್ಲಿರಲಿಲ್ಲ ಎಂದು ಹೇಳಿದ್ದಾರೆ ಅವರ ಅನುಪಸ್ಥಿತಿಯಲ್ಲಿ ಶಾಲೆಯ ಸ್ಟಾಫ್‍ಗಳೊಂದಿಗೆ ಸೇರಿ ಹಾಡಿನ ಚಿತ್ರೀಕರಣ ನಡೆಸಲಾಗಿದೆ ಎಂದು ಪ್ರಿನ್ಸಿಪಾಲ್ ತಿಳಿಸಿದ್ದಾರೆ

Share this post

Post Comment