ಮನಸ್ಸಿದ್ದರೆ ಮಾರ್ಗ: ಕುರಿ ಮೇಯಿಸುತ್ತಿದ್ದ ಹುಡುಗಿ ಇಂದು ಫ್ರಾನ್ಸ್​ ಶಿಕ್ಷಣ ಮಂತ್ರಿ

ಫ್ರಾನ್​ ದೇಶದ ಮೊದಲ ಮಹಿಳಾ ಶಿಕ್ಷಣ ಮಂತ್ರಿಯಾಗಿ ನಜತ್ ಬೆಲ್ಕಾಸಮ್ ಆಯ್ಕೆಯಾಗಿದ್ದಾರೆ. ಇಂತಹದೊಂದು ಸ್ಥಾನಕ್ಕೇರಿದ ಮೊದಲ ಫ್ರಾನ್ಸ್ ಮುಸ್ಲಿಂ ಎಂಬ ಕೀರ್ತಿ ಕೂಡ ನಜತ್ ಪಾಲಾಗಿದೆ. ಬಡ ಕುಟುಂಬದಿಂದ ಬಂದಂತಹ ಇವರು ಇಂತಹದೊಂದು ಘಟ್ಟಕ್ಕೆ ತಲುಪಲು ಹಲವಾರು ಕಷ್ಟಕಾರ್ಪಣ್ಯಗಳನ್ನು ಎದುರಿಸಿದ್ದಾರೆ ಎಂದರೆ ನಂಬಲೇಬೇಕು. ಉನ್ನತ ಸ್ಥಾನಕ್ಕೇರಿರುವ ಶಿಕ್ಷಣ ಮಂತ್ರಿಯ ಜೀವನ ಕಥೆಯು ಕೂಡ ರೋಚಕವಾಗಿದ್ದು, ಅದನ್ನು ಇಲ್ಲಿ ತಿಳಿಸಲಾಗಿದೆ.1977ರಲ್ಲಿ ಮೊರಾಕ್ಕೊದ ಮೂಲಭೂತ ಮುಸ್ಲಿಂ ಕುಟುಂಬದಲ್ಲಿ ನಜತ್ ಜನಿಸಿದರು. ಮೇಕೆಗಳನ್ನು ಸಾಕುತ್ತಿದ್ದ ಕುಟುಂಬದ ಆದಾಯದ ಮೂಲ ಕೂಡ ಮೇಕೆ ಹಾಲನ್ನು ಮಾರುವುದಾಗಿತ್ತು.

 

 

ನಜತ್ ತನ್ನ ನಾಲ್ಕನೇ ವಯಸ್ಸಿಗೆ ಕೆಲಸ ಮಾಡಲು ಆರಂಭಿಸಿದ್ದರು. ನೀರಿಗಾಗಿ ದೂರಗಟ್ಟಲೆ ನಡೆದುಕೊಂಡು ಹೋಗಬೇಕಿತ್ತು. ಈ ಜವಾಬ್ದಾರಿಯನ್ನು ಬಾಲ್ಯದಲ್ಲೇ ವಹಿಸಿಕೊಂಡಿದ್ದ ನಜತ್ ಜೀವನವನ್ನು ಹೋರಾಟವಾಗಿ ಕಂಡಿದ್ದರು.1982 ರಲ್ಲಿ ನಜತ್ ಕುಟುಂಬವು ಫ್ರಾನ್ಸ್​ಗೆ ವಲಸೆ ಬಂದರು. ಆದರೆ ಇಲ್ಲಿ ಯಾವುದೇ ಪೌರತ್ವ ಹೊಂದಿರದ ಈ ಕುಟುಂಬದವರಿಗೆ ಫ್ರೆಂಚ್ ಭಾಷೆ ಸವಾಲಾಗಿ ಪರಿಣಮಿಸಿತು. ಇದರಿಂದ ಬಾಲ್ಯದಲ್ಲಿ ನಜತ್ ಎಲ್ಲರೊಂದಿಗೆ ಬೆರೆಯಲುಸಾಧ್ಯವಾಗುತ್ತಿರಲಿಲ್ಲ.ಫ್ರಾನ್ಸ್​ನ ಚಿಕಾರ್ ಗ್ರಾಮದಲ್ಲಿ ವಾಸಿಸಲಿ ತೀರ್ಮಾನಿಸಿದ ಇವರ ಕುಟುಂಬವು ಕುರಿ ಮೇಯಿಸುವುದನ್ನೇ ಇಲ್ಲೂ ಕೂಡ ಮುಖ್ಯ ಕಸುಬನ್ನಾಗಿಸಿಕೊಂಡಿದ್ದರು.

Share this post

One thought on “ಮನಸ್ಸಿದ್ದರೆ ಮಾರ್ಗ: ಕುರಿ ಮೇಯಿಸುತ್ತಿದ್ದ ಹುಡುಗಿ ಇಂದು ಫ್ರಾನ್ಸ್​ ಶಿಕ್ಷಣ ಮಂತ್ರಿ

Post Comment