ಪುರುಷಾಂಗಗಳ ಹಬ್ಬ… ಅಲ್ಲಿನ ಜನಕ್ಕೆ ಅದೇ ದೈವ, ಯಾಕೆ ಗೊತ್ತಾ?

ಜಪಾನ್‌ನಲ್ಲಿ ತುಂಬಾ ಅದ್ದೂರಿಯಾಗಿ ನಡೆಯುವ ಹಬ್ಬ ’ಹನೆಸ್ ಸಾಯ್’. ಅಂದರೆ ಪುರುಷಾಂಗಗಳ ಹಬ್ಬ ಎಂದು ಅರ್ಥ. ಆ ದಿನ ಅಲ್ಲಿ ಯಾವ ವಸ್ತುವನ್ನು ನೋಡಿದರೂ ಪುರುಷಾಂಗಗಳನ್ನೇ ಹೋಲುತ್ತವೆ. ತಿನ್ನುವ ಆಹಾರದಿಂದ ಹಿಡಿದು ಅವರು ಧರಿಸುವ ಟೋಪಿಗಳವರೆಗೆ ಪ್ರತಿಯೊಂದು ಪುರುಷಾಂಗಗಳ ರೂಪದಲ್ಲಿ ಇರುತ್ತವೆ. ಪ್ರತಿ ವರ್ಷ ಮಾರ್ಚ್ ತಿಂಗಳು ಬಂದ ಕೂಡಲೆ ಜಪಾನ್‌ನಲಿ ಹೆನ್ಷು ಐಲ್ಯಾಂಡ್ ಪ್ರವಾಸಿಗರಿಂದ ತುಂಬಿ ತುಳುಕುತ್ತದೆ.

 

 

ಅಲ್ಲಿ ನೋಯಗಾ ನಗರದಲ್ಲಿನ ಐಚಿ ಪ್ರದೇಶದಲ್ಲಿ ಮರದಿಂದ ತಯಾರು ಮಾಡಿದ ಎರಡು ಮೀಟರ್ ಉದ್ದದ ಪುರುಷಾಂಗ ಪ್ರತಿಮೆಯನ್ನು ಮೆರವಣಿಗೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಎಲ್ಲರೂ ಸಾಂಪ್ರದಾಯಿಕ ಉಡುಗೆ ಧರಿಸಿ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಸಂತಾನಕ್ಕಾಗಿ ಪ್ರಾರ್ಥಿಸುವವರು ಆ ಪುರುಷಾಂಗವನ್ನು ಚುಂಬಿಸುತ್ತಾರೆ. ಈ ಸಂಪ್ರದಾಯವನ್ನು ಪ್ರಾರಂಭಿಸಿದ ಹೊಸದರಲ್ಲಿ ಪುರುಷಾಂಗ ಪ್ರತಿಮೆ ತುಂಬಾ ಚಿಕ್ಕದಾಗಿತ್ತು. ಆದರೆ ಪ್ರತಿ ವರ್ಷ ಅದರ ಆಕಾರವನ್ನು ದೊಡ್ಡದು ಮಾಡುತ್ತಾ ಮೆರವಣಿಗೆ ಮಾಡುವುದು ಇಲ್ಲಿನ ಸಂಪ್ರದಾಯದಂತೆ ಬದಲಾಯಿತು.

 

ಈ ಸಂಭ್ರಮದ ಭಾಗವಾಗಿ ಅಲ್ಲಿ ಆಹಾರವನ್ನು ಸಹಿತ ಪುರುಷಾಂಗ ರೂಪದಲ್ಲಿ ತಯಾರಿಸುತ್ತಾರೆ. ಬಾಳೆಹಣ್ಣನ್ನು ಚಾಕೋಲೇಟ್ ರಸದಲ್ಲಿ ಮುಳುಗಿಸಿ ಮಾರುತ್ತಾರೆ. ಯುವತಿಯರು ಸಹ ಚಿಕ್ಕ ಚಿಕ್ಕ ಪುರುಷಾಂಗಗಳ ಪ್ರತಿಮೆಗಳನ್ನು ಚಿಕ್ಕ ಮಕ್ಕಳಂತೆ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಜಪಾನ್‌ನಲ್ಲಿ ಸಂತಾನ ಸಮಸ್ಯೆಗಳು ಜಾಸ್ತಿ. ಮಕ್ಕಳು ಇಲ್ಲದವರು ಈ ಸಂಭ್ರಮದಲ್ಲಿ ಭಾಗಿಯಾಗಿ ಪ್ರತಿಮೆಗಳನ್ನು ತಾಕಿದರೆ ಖಂಡಿತ ಅವರ ಕನಸು ನೆರವೇರುತ್ತದೆ ಎಂದು ನಂಬುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಮಾರ್ಚ್ 15ರಂದು ತಗಟ ಪುಣ್ಯಕ್ಷೇತ್ರದಲ್ಲಿ ಈ ಹನೆ ಸಾಯ್ ಹಬ್ಬ ಆಚರಿಸಲಾಗುತ್ತದೆ.

 

 

Filed in: OMG

Share this post

Post Comment