ಟೀ ಬಗ್ಗೆ ತಜ್ಞರ ಸಂಶೋಧನೆ… ಟೀ ಕುಡಿಯುವ ಪ್ರತಿಯೊಬ್ಬರೂ ಇದನ್ನು ಕಡ್ಡಾಯವಾಗಿ ಓದಬೇಕು, ಇಲ್ಲದಿದ್ದರೆ ಬಹಳಷ್ಟು ಮಿಸ್ ಆಗುತ್ತೀರ

ಬ್ರಿಟೀಷರು ಭಾರತವನ್ನು ಬಿಟ್ಟು ಹೋಗಿದ್ದು ಯಾಕೆ ಎಂದರೆ ಎಲ್ಲರೂ ಥಟ್ ಅಂತ ಹೇಳುವುದರಲ್ಲಿ ಟೀ ಮತ್ತು ಕಾಫಿ ಮುಂದೆ ಇರುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಚಿಕ್ಕವರು, ದೊಡ್ಡವರು, ವಯಸ್ಸಾದವರು, ಅಜ್ಜ ಅಜ್ಜಿ ಹೀಗೆ ಎಲ್ಲಾ ವಯೋಮಾನದವರು, ಎಲ್ಲಾ ವಯಸ್ಸಿನವರು ಸಹ ಟೀಗೆ ವ್ಯಸನಿಯಾಗಿದ್ದಾರೆ. ಭಾರತೀಯರು ಹಾಲನ್ನು ಹಾಲಿನಂತೆ ಅಲ್ಲದೆ ಅದನ್ನು ಅರ್ಧಂಬರ್ಧ ಮಾಡಿ ನೀಡುವ ಟೀ ಎಂದರೆ ಕುಡಿಯಲ್ಲ ಎಂದು ಬ್ರಿಟೀಷ್‍ನವ ಹೇಳಿ ಜನರ ಆರೋಗ್ಯ ಹಾಳಾಗುವಂತೆ ಮಾಡಿದ ಎಂದು ಕೆಲವರು ವಿರೋಧಿಗಳು ಹೇಳುತ್ತಾರೆ. ಕಪ್ ಹಾಲು ಕುಡಿಯುವುದು ತುಂಬಾ ಆರೋಗ್ಯ, ಅದೇ ಕಪ್ ತೀ ಕುಡಿದರೆ ಏನು ಲಾಭ ಎಂದು ಅವರು ಪ್ರಶ್ನಿಸುತ್ತಾರೆ. ಟೀ ಕುಡಿಯುವುದರಿಂದ ಲಾಭ ಏನು ಎನ್ನುವವರಿಗೆ ಇದನ್ನು ತೋರಿಸಿ.

 

 

ಟೀ ಬಗ್ಗೆ ಈಗಾಗಲೆ ಅದೆಷ್ಟೋ ದೇಶಗಳು ಅದೆಷ್ಟೋ ಪ್ರಯೋಗಗಳನ್ನು, ಸಂಶೋಧನೆಗಳನ್ನು, ಸಮೀಕ್ಷೆಗಳನ್ನು ಮಾಡಿವೆ. ಸುಮಾರು ಶೇ.95ರಷ್ಟು ಪ್ರಯೋಗಗಳಲ್ಲಿ ಟೀ ಆರೋಗ್ಯಕ್ಕೆ ಉತ್ತಮ ಎಂಬುದು ಗೊತ್ತಾಗಿದೆ. ಆದರೆ ಅತಿಯಾಗಿ ಟೀ ಕುಡಿಯುವುದು ಒಳ್ಳೆಯದಲ್ಲ ಎಂದು ಎಲ್ಲರೂ ಹೇಳಿದ್ದಾರೆ. ನಿತ್ಯ ಎರಡು ಅಥವಾ ಮೂರು ಕಪ್ ಟೀ ಆರೋಗ್ಯಕ್ಕೆ ಎಷ್ಟು ಉತ್ತಮವೋ ಅದಕ್ಕೆ ಮೀರಿ ಟೀ ಕುಡಿಯುವುದರಿಂದ ಅಷ್ಟೇ ಅನಾರೋಗ್ಯ ಸಮಸ್ಯೆಗಳು ತಲೆದೋರುತ್ತವೆ ಎಂಬುದೂ ಅಷ್ಟೇ ನಿಜ. ಇತ್ತೀಚೆಗೆ ಚೀನಾದಲ್ಲಿ ಪೆಕಿಂಗ್ ಯೂನಿವರ್ಸಿಟಿ ಮೂಲದ ತಜ್ಞರು ಈ ವಿಷಯದ ಬಗ್ಗೆ ಪ್ರಯೋಗ ಮಾಡಿದರು.

 

ಈ ಪ್ರಯೋಗದಲ್ಲಿ 30 ವರ್ಷಗಳಿಂದ ಟೀ ಕುಡಿಯುತ್ತಿರುವ ಐದು ಲಕ್ಷ ಮಂದಿಯನ್ನು ಆನ್‍ಲೈನ್ ಮೂಲಕ ಪ್ರಶ್ನಿಸಲಾಯಿತು. ಐದು ಲಕ್ಷ ಮಂದಿಯಲ್ಲಿ ಶೇ. 80ರಷ್ಟು ಮಂದಿ ಟೀ ಕುಡಿಯುವವರಿಗೆ ಸಂಧಿ ನೋವು ಮತ್ತು ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಏನೂ ಇರಲಿಲ್ಲ. ಅದೇ ರೀತಿ ಟೀ ಕುಡಿಯದವರಿಗೆ ಸಂಧಿ ನೋವು ಮತ್ತು ಮೂಳೆಗಳಿಗೆ ಸಂಬಂಧಿಸಿದ ದೀರ್ಘಕಾಲದ ಸಮಸ್ಯೆಗಳು ಇರುವುದಾಗಿ ಗೊತ್ತಾಯಿತು. ಈ ಸಮೀಕ್ಷೆಯಲ್ಲಿ ಹಲವು ಅನಾರೋಗ್ಯ ಸಮಸ್ಯೆಗಳ ಬಗ್ಗೆ ವಿಶ್ಲೇಷಿಸಿದ ಸಮಯದಲ್ಲಿ ಹೆಚ್ಚು ಟೀ ಕುಡಿಯದವರಿಗೆ ಅನಾರೋಗ್ಯ ಸಮಸ್ಯೆಗಳು ಇರುವುದು ಗೊತ್ತಾಯಿತು.

 

ಟೀ ಎಂಬುದು ರಿಫ್ರೆಷ್‌ಗೆ ಮಾತ್ರವಷ್ಟೇ ಅಲ್ಲದೆ ಅದ್ಭುತವಾದ ಔಷಧಿಯಾಗಿಯೂ ಕೆಲಸ ಮಾಡುತ್ತದೆ. ಆದರೆ ಹೆಚ್ಚು ಸಿಕ್ಕಾಪಟ್ಟೆ ಟೀ ಕುಡಿಯಬಾರದು ಎಂಬುದು ಒಕ್ಕೊರಲ ಅಭಿಪ್ರಾಯ.

 

 

Share this post

Post Comment