37 ವರ್ಷಗಳ IPS ಸರ್ವೀಸ್‌ನಲ್ಲಿ ಸಂಪಾದಿಸಿದ್ದು 3 ಬೆಡ್‌ರೂಮ್ ಮನೆ, 2 ಎಕರೆ ಹೊಲ ಮಾತ್ರ..!

ಮೊದಲೇ ಸರಕಾರಿ ಕೆಲಸ ಎಂದರೆ ದೇವರ ಕೆಲಸ. ಅದರಲ್ಲೂ ಭ್ರಷ್ಟಾಚಾರ ಮುಖ್ಯವಾಗಿ ಪೊಲೀಸ್ ಉದ್ಯೋಗ ಎಂದರೆ ಭ್ರಷ್ಟಾಚಾರಕ್ಕೆ ಕೇರಾಪ್ ಅಡ್ರೆಸ್ ಎನ್ನುತ್ತಾರೆ. ಅಂತಹ ಇಲಾಖೆಯಲ್ಲಿ 37 ವರ್ಷಗಳಿಂದ ಐಪಿಎಸ್ ಆಗಿ ಇದ್ದು ಕೇವಲ 3 ಲಕ್ಷ ಬೆಲೆ ಬಾಳುವ 2 ಎಕರೆ ಭೂಮಿ, ಲಕ್ನೋದಲ್ಲಿ ಮೂರು ಬೆಡ್‌ರೂಂ ಮನೆ ಮಾತ್ರ ಸಂಪಾದಿಸಿದ್ದಾರೆ ಎಂದರೆ ಯಾರು ತಾನೆ ನಂಬುತ್ತಾರೆ? ಆದರೆ ಪೊಲೀಸ್ ಪೇದೆ, ಹೋಮ್ ಗಾರ್ಡ್‌ಗಳು ಸಹ ಮಿತಿಮೀರಿ ಸಂಪಾದಿಸುತ್ತಿರುವ ಈ ದಿನಗಳಲ್ಲಿ ಓರ್ವ ಡಿಸಿಜಿ ಕಥೆ ಇದು ಎಂದರೆ ನಂಬುತ್ತೀರಾ..? ಆದರೆ ನಿಜ… ಉತ್ತರ ಪ್ರದೇಶ ರಾಜ್ಯದ ಡಿಜಿಪಿ ಸುಲ್ಖಾನ್ ಸಿಂಗ್… ಅಷ್ಟೇ.. ತನಗೆ ಸರಕಾರ ಕೊಡುವ ಸಂಬಳ ಹೊರತುಪಡಿಸಿ ಇನ್ನೇನು ತೆಗೆದುಕೊಳ್ಳಲ್ಲ… ಡೈ ಹಾರ್ಡ್ ಪ್ರಾಮಾಣಿಕ… ಇಷ್ಟಕ್ಕೂ ಇಂತಹವರು ಈ ದಿನಗಳಲ್ಲೂ ಇಂತಹವರು ಇರುತ್ತಾರಾ ಎಂದು ಮೂಗಿನ ಮೇಲೆ ಬೆರಳಿಡುವಷ್ಟು ನಿರಾಡಂಬರ ಜೀವಿ…!

 

 

ಈ ರೀತಿ ಸರ್ವೀಸ್ ಎಲ್ಲಾ ಪ್ರಾಮಾಣಿಕವಾಗಿ ಇರುವುದು ಎಂದರೆ ಸಾಮಾನ್ಯ ಸಂಗತಿ ಅಲ್ಲ. ಮಿಗಿಲಾಗಿ ಅಪರಾಧಗಳಿಗೆ, ಅಕ್ರಮಗಳಿಗೆ ಕೇಂದ್ರವಾದ ಉತ್ತರ ಪ್ರದೇಶ ರಾಜ್ಯದಲ್ಲಿ, ತನ್ನ 37 ವರ್ಷಗಳ ಸೇವೆಯಲ್ಲಿ ಒಮ್ಮೆಯೂ ಅಕ್ರಮ ಮಾರ್ಗ ಹಿಡಿಯದೆ ಪ್ರಾಮಾಣಿಕವಾಗಿ ಇರುವ ಸುಲ್ಖಾನ್ ಸಿಂಗ್ ವ್ಯಕ್ತಿತ್ವವನ್ನು, ಗುಂಡಿಗೆ ಧೈರ್ಯವನ್ನು ಮೆಚ್ಚಿಕೊಳ್ಳಬೇಕಾದದ್ದೇ. ಇಂತಹ ಪ್ರಾಮಾಣಿಕ ಅಧಿಕಾರಿಯನ್ನು ಗುರುತಿಸಿ ಡಿಜಿಪಿಯಾಗಿ ನೇಮಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನೂ ಸಹ ಮೆಚ್ಚಿಕೊಳ್ಳಬೇಕು.

 

1980ರ ಕೇಡರ್ ಐಪಿಎಸ್ ಅಧಿಕಾರಿಯಾಗಿರುವ ಸುಲ್ಖಾನ ಸಿಂಗ್… 2007ರಲ್ಲಿ ಮುಲಾಯಂ ಸಿಂಗ್ ಸರಕಾರದ ಅವಧಿಯಲ್ಲಿ ನಡೆದ ಭಾರಿ ಪೊಲೀಸ್ ರಿಕ್ರೂಟ್‍ಮೆಂಟ್ ಹಗರಣವನ್ನು ಬಯಲಿಗೆಳೆದರು. ಇಲ್ಲದಿದ್ದರೆ ಎಂದೋ ಡಿಜಿಪಿಯಾಗುತ್ತಿದ್ದರು. ಆ ಬಳಿಕ ಒಟ್ಟಾರೆ ನಾಮಮಾತ್ರದ ಪೋಸ್ಟ್‌ಗಳಲ್ಲಿ ಕರ್ತವ್ಯ ನಿರ್ವಹಿಸಬೇಕಾಯಿತು ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

 

ಅಖಿಲೇಷ್ ಯಾದವ್ ಮುಖ್ಯಮಂತ್ರಿಯಾಗಿದ್ದಾಗ 2012ರಲ್ಲಿ ಸುಲ್ಖಾನ್ ಸಿಂಗ್ ಅವರಿಗಿಂತಲೂ ಎಂಟು ಮೆಟ್ಟಿಲು ಕೆಳಗಿದ್ದ ಜಾವಿದ್ ಅಹ್ಮದ್‍ರನ್ನು ಡಿಜಿಪಿ ಮಾಡಿದರು… ಆಗ ಹೆಚ್ಚುವರಿ ಡಿಜಿಪಿ ರ‍್ಯಾಂಕ್‌ನಲ್ಲಿ ಇದ್ದ ಈ ಸುಲ್ಖಾನ್ ಸಿಂಗ್‌ರನ್ನು ಕರೆದೊಯ್ದು ಓರ್ವ ಡಿಐಜಿ ರ‍್ಯಾಂಕ್ ಅಧಿಕಾರಿಯನ್ನು ನೇಮಿಸುವ ಪೊಲೀಸ್ ಟ್ರೈನಿಂಗ್ ಕಾಲೇಜಿಗೆ ಹಾಕಿದರು. ಇನ್ನು ತನ್ನ ಕರಿಯಲ್ಲೇ ಅಲ್ಲೇ ಮುಗಿದಂತೆ ಎಂದುಕೊಡ ಸ್ಥಿತಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಅವರನ್ನು ಡಿಜಿಪಿಯಾಗಿ ನೇಮಕ ಮಾಡಿದ್ದು ಒಂದು ದೊಡ್ಡ ತಿರುವು.. ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ ಅಲ್ಲವೇ… ಇವರ ಪದವಿ ಕಾಲ ಡಿಸೆಂಬರ್‌ವರೆಗೂ ಇದೆ.. ಶಹಬ್ಬಾಸ್ ಸುಲ್ಖಾನ್ ಸಿಂಗ್… ನಿಮಗೊಂದು ಸೆಲ್ಯೂಟ್.. ಇಂತಹ ಪ್ರಾಮಾಣಿಕ ಅಧಿಕಾರಿಗಳು ಇರಬೇಕು ಬಿಡ್ರಿ. ಇಲ್ಲದಿದ್ದರೆ ಈ ದೇಶ ಉದ್ದಾರ ಆಗುವುದು ದೂರದ ಮಾತು.

 

Share this post

3 thoughts on “37 ವರ್ಷಗಳ IPS ಸರ್ವೀಸ್‌ನಲ್ಲಿ ಸಂಪಾದಿಸಿದ್ದು 3 ಬೆಡ್‌ರೂಮ್ ಮನೆ, 2 ಎಕರೆ ಹೊಲ ಮಾತ್ರ..!

Post Comment