ಶೃಂಗಾರದ ಜತೆಗೆ ಬೆಡ್ ರೂಮ್ ಹೇಗೆ ಇರಬೇಕೆಂದು ಹೇಳುತ್ತಿರುವ ಐಕಿಯಾ ಕಂಪೆನಿ!!

ಶೃಂಗಾರ ಎಂದರೆ ಎಲ್ಲರೂ ಒಂದೇ ರೀತಿ ಭಾವಿಸುತ್ತಾರೆ. ಆದರೆ ಅದರಲ್ಲೂ ಕೂಡ ಬಹಳಷ್ಟು ರೀತಿಯ ಶೃಂಗಾರ, ಭಂಗಿಗಳು ಇರುತ್ತವೆ ಎಂಬುದು ಕೆಲವರಿಗಷ್ಟೇ ಗೊತ್ತು. ಹಾಗಾಗಿ ಶೃಂಗಾರವನ್ನು ಸರಿಯಾಗಿ ಅನುಭವಿಸದೆ ಕೆಲವರು ಕಡೆಗಣಿಸುತ್ತಿರುತ್ತಾರೆ. ಆದರೆ ಅಂತಹವರಿಗಾಗಿ ಅದೆಷ್ಟೋ ಪುಸ್ತಕಗಳು ಇವೆ ಎಂಬುದು ನಮಗೆ ಗೊತ್ತು. ಆದರೆ ಈಗ ಐಕಿಯಾ ಕಂಪೆನಿ ಒಂದು ಹೊಸ ಪುಸ್ತಕ ಹೊರ ತಂದಿದೆ. ಬುಕ್ ಅಲ್ಲದೆ ಆ ಭಂಗಿಗಳಿಗೆ ತಕ್ಕಂತೆ ಬೆಡ್ ರೂಮನ್ನು ಹೇಗೆ ಬದಲಾಯಿಸಿಕೊಳ್ಳಬೇಕು ಎಂಬುದು ಪುಸ್ತಕದಲ್ಲಿ ಫೋಟೋ ಸಮೇತ ಪ್ರಕಟಿಸಿರುವುದು ವಿಶೇಷ.

 

 

ಫರ್ಮಿಚರ್ ಕಂಪೆನಿ ಐಕಿಯಾ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತೇ ಇರುತ್ತದೆ. ಸ್ವೀಡನ್ ಮೂಲದ ಈ ಐಕಿಯಾ ಕಂಪೆನಿ ಹೈದರಾಬಾದಿನಲ್ಲಿ ಇತ್ತೀಚೆಗೆ ಒಂದು ಫರ್ನೀಚರ್ ಶೋ ರೂಮನ್ನು ಆರಂಭಿಸಿತು. ಈಗ ಸೆಕ್ಸ್ ಪುಸ್ತಕವನ್ನು ಐಕಿಯಾ ಬಿಡುಗಡೆ ಮಾಡಿರುವುದು ವಿಶೇಷ. ಆದರೆ ಸೆಕ್ಸ್ ಬಗ್ಗೆ ಅಲ್ಲದೆ, ಬೆಡ್ ರೂಮನ್ನು ಹೇಗೆ ಡಿಸೈನ್ ಮಾಡಿಕೊಳ್ಳಬೇಕು ಎಂಬುದನ್ನು ಈ ಪುಸ್ತಕದಲ್ಲಿ ಫೋಟೋ ಸಮೇತ ಪ್ರಿಂಟ್ ಮಾಡಿದೆ ಐಕಿಯಾ ಕಂಪೆನಿ.

 

ಆದರೆ ಶಯನಗೃಹವನ್ನು ಸ್ವರ್ಗದಂತೆ ಹೇಗೆ ಬದಲಾಯಿಸಿಕೊಳ್ಳಬೇಕು ಎಂಬುದನ್ನು ತಿಳಿಸುತ್ತಾ ಸುಂದರವಾದ ಫೋಟೋಗಳ 44 ಪುಟಗಳ ಪುಸ್ತಕವನ್ನು ಬಿಡುಗಡೆ ಮಾಡಿದೆ. ಆನ್‌ಲೈನ್‌ನಲ್ಲೂ ಈ ಪುಸ್ತಕ ಲಭ್ಯವಿದೆ. ಸೆಕ್ಸ್‌ನಲ್ಲಿ ವಿವಿಧ ಭಂಗಿಗಳು ಇರುವಂತೆ, ಈ ಪುಸ್ತಕದಲ್ಲಿ ಆಯಾ ಭಂಗಿಗಳ ಹೆಸರಿನ ಜೊತೆಗೆ ಭಂಗಿಗಳಿಗೆ ತಕ್ಕಂತೆ ಬೇಡ್ ರೂಮನ್ನು ಡಿಸೈನ್ ಸಹ ಇವೆ.

 

ಈ ಪುಸ್ತಕವನ್ನು ಐಕಿಯಾ ಕಂಪೆನಿ ಎಷ್ಟೆಲ್ಲಾ ಬಳಸುತ್ತಿದೆ ಎಂದರೆ ಕಾಮಸೂತ್ರದಲ್ಲಿ ಇರುವ ಪ್ರತಿ ಭಂಗಿಗೂ ಒಂದು ಹೆಸರಿದೆ. ಅದೇ ರೀತಿ ಈ ಭಂಗಿಗೆ ತಕ್ಕಂತೆ ಬೆಡ್ ರೂ ಡಿಸೈನ್ ಇರುವುದರ ಜತೆಗೆ ಬುಕ್ ಜೊತೆಗೆ ಐಕಿಯಾ ಮಂಚಗಳನ್ನು ಸಹ ಮಾರಾಟವಾಗುತ್ತಿವೆ. ಪ್ರತಿ ಭಂಗಿಯನ್ನು ಉದಾಹರಣೆ ಸಮೇತ ವಿವರಿಸುತ್ತದೆ ಐಕಿಯಾ ಕಂಪೆನಿ. ಈ ಪುಸ್ತಕಕ್ಕೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ.

 

Share this post

Post Comment