ಸಾವಿನ ದವಡೆಯಲ್ಲಿದ್ದ ಆತ ತನ್ನ ಪ್ರೇಯಸಿಗೆ ಬರೆದ ಪತ್ರವನ್ನು ಓದಿದರೆ ತಪ್ಪದೇ ಕಣ್ಣೀರಿಡಬೇಕಾಗುತ್ತದೆ.!

ಪ್ರೀತಿ ಅನಿರ್ವಚನೀಯವಾದದ್ದು . ಯಾರ ನಡುವೆ, ಯಾವಾಗ ಹುಟ್ಟುತ್ತದೆ ಎಂದು ತಿಳಿಯುವುದಿಲ್ಲ. ಎಷ್ಟೋ ವರ್ಷಗಳಿಂದ ಪರಿಚಯವಿದ್ದರೂ ಕೆಲವರಲ್ಲಿ ಪ್ರೀತಿ ಹುಟ್ಟುವುದಿಲ್ಲ. ಕೆಲವರಲ್ಲಿ ಮೊದಲನೇ ನೋಟದಲ್ಲೇ ಪ್ರೀತಿ ಹುಟ್ಟುಬಹುದು. ಒಬ್ಬ ವ್ಯಕ್ತಿಯನ್ನು ಇಷ್ಟಪಡದಿರಲು ಕಾರಣಗಳಿರುತ್ತವೆ. ಆದರೆ ಎಲ್ಲಿಯವರೆಗೆ ನಿಲ್ಲುತ್ತದೆ ಎಂಬ ಮಾತನ್ನು ಬದಿಗಿರಿಸಿದರೆ ಕಾರಣ ಇಲ್ಲದೆಯೇ ಪ್ರೀತಿ ಹುಟ್ಟುತ್ತದೆ. ಇತ್ತೀಚೆಗೆ ಯುಟ್ಯೂಬ್ ನಲ್ಲಿ ಬಂದ ಕಿರುಚಿತ್ರ (ಶಾರ್ಟ್ ಫಿಲಿಂ) ‘ಸಹೇಲಿ’. ಹೆಸರಿನಲ್ಲೇ ಆಕರ್ಷಣೆೆ ಇರುವ ಈ ಚಿತ್ರವನ್ನು ಬಿಡುಗಡೆಯಾದ 10 ದಿನಗಳಲ್ಲೇ ಸುಮಾರು ಲಕ್ಷ ಮಂದಿ ನೋಡಿದ್ದಾರೆ. ಆ ಚಿತ್ರದಲ್ಲಿ ಹೇಳಿಕೊಳ್ಳುವಂತಹ ವಿಷಯವೇನಿದೆ ಎಂದರೆ.

“ನಾನು ಮರಣ ಹೊಂದಿದಲ್ಲಿ ನನ್ನ ಪ್ರೀತಿಯನ್ನು ನೆನಪಾಗಿಟ್ಟುಕೊ….ಮರಳಿ ಬಂದಲ್ಲಿ ನಿನ್ನ ಪ್ರೇಮವನ್ನು ನೆನಪಾಗಿ ನೀಡು” ಎಂಬ ಡೈಲಾಗ್ ಕೇಳಿದರೆ ಸಾಕು ಸಿನಿಮಾ ಹೇಗಿರುತ್ತದೆ ಎಂಬುದನ್ನು ತಿಳಿಯಬಹುದು. ನಿಜ ಜೀವನದಲ್ಲೂ ಯಾರಿಗಾದರೂ ಈ ರೀತಿ ನಡೆದಿರಬಹುದೇನೋ ಎನಿಸುತ್ತದೆ. ಈ ಸಿನಿಮಾದಲ್ಲಿ ಹೀರೋ ಹಾಗೂ ಹೀರೋಯಿನ್ ನ ಪರಿಚಯವೇ ವಿಭಿನ್ನವಾಗಿರುತ್ತದೆ. ನೂರು ರೂಪಾಯಿಯ ನೋಟಿನ ಮೇಲೆ ಆಂಗ್ಲ ಅಕ್ಷರಗಳಲ್ಲಿ ಬರೆದಿರುವ  HEADDEACHE   ಎಂಬ ಪದವೇ ಇವರ ಪರಿಚಯಕ್ಕೆ ಕಾರಣವಾಯಿತು. ಈ ಪದದ ಅರ್ಥವನ್ನು ಸಿನಿಮಾ ನೋಡಿದರೆ ಮಾತ್ರ ಹೇಳಲಾಗುತ್ತದೆ. ಆದರೆ ಹೀರೋಯಿನ್ ಆ ಅಕ್ಷರಗಳಲ್ಲಿರುವುದು ಹೀರೋನ ದೂರವಾಣಿ ಸಂಖ್ಯೆ ಎಂಬುದನ್ನು ಕಂಡುಹಿಡಿದು ಅವರು ಯಾರಾಗಿರಬಹುದು. ಎಲ್ಲಿರಬಹುದು ಎಂದು ತಿಳಿದುಕೊಳ್ಳಲು ಸವಾಲು ಹಾಕುತ್ತಾಳೆ. ಈ ದೃಶ್ಯವನ್ನು ನೋಡಿದಾಗ ಯಂಡಮೂರಿ ವೀರೇಂದ್ರನಾಥ್ ರವರ ಒಂದು ಸಿನಿಮಾ ನೆನಪಾಗುತ್ತದೆ. ಕೊನೆಗೂ ಹೀರೋ ಯಾರೆಂದು ಕಂಡುಹಿಡಿದಳು. ತಕ್ಷಣವೇ ಹೀರೋ ತನ್ನ ಮುಂದೆ ಬಂದು ಒಂದು ದಿನ ಗರ್ಲ್ ಫ್ರೆಂಡ್ ನಂತೆ ಇರುವಂತೆ ಕೇಳುವುದು, ಅದಕ್ಕೆ ಹೀರೋಯಿನ್ ಒಪ್ಪಿಗೆ ಕೊಡುವುದು ಎಲ್ಲವೂ ಒಂದು ಕ್ಷಣದಲ್ಲಿ ನಡೆದುಹೋಗುತ್ತವೆ. ಒಂದು ದಿನ ಮುಗಿಯುತ್ತಲೇ ಹೀರೊ ಯು.ಎಸ್. ಗೆ ಹೊರಟುಹೋಗುತ್ತಾನೆ. ಕೇವಲ ಅರ್ಧ ಗಂಟೆ ಸಮಯದ ಈ ಸಿನಿಮಾ ನೋಡುತ್ತಿದ್ದರೆ 3 ಗಂಟೆಯ ಸಿನಿಮಾದಂತೆ ಅನಿಸುತ್ತದೆ.

ಕೊನೆಗೆ ಅವರಿಬ್ಬರು ಒಂದಾಗುತ್ತಾರೆಯೇ..ಮೇಲೆ ಹೇಳಿದ ಆ ಡೈಲಾಗ್ ಅನ್ನು ಯಾಕೆ ಹೇಳಿದನು ಎಂಬುದನ್ನು ತಿಳಿದುಕೊಳ್ಳಲು ಸಿನಿಮಾ ನೋಡಲೇ ಬೇಕು.ಸಿನಿಮಾಗೆ ಸಂಬಂಧಿಸಿದಂತೆ ಹೀರೋ ಹಾಗೂ ಹೀರೋಯಿನ್ ನ ನಟನೆ, ನಿರೂಪಣೆ, ಡೈಲಾಗ್ಸ್, ಹಿನ್ನೆಲೆೆ ಸಂಗೀತ ಎಲ್ಲವನ್ನೂ ತುಂಬಾ ಚೆನ್ನಾಗಿ ಚಿತ್ರೀಕರಿಸಿದ್ದಾರೆ. ನೀವೂ ನೋಡಿ ಆನಂದಿಸಿ.

ಒಂದು ಕಾಲದಲ್ಲಿ ಸಿನಿಮಾಗಳಲ್ಲಿ ನಟಿಸಬೇಕೆಂದರೆ ಸ್ಟುಡಿಯೋಗಳ ಮುಂದೆ ದಿನಗಟ್ಟಲೆ ಕಾಯಬೇಕಾಗಿತ್ತು, ಸಿನಿಮಾ ಕಛೇರಿಗಳಿಗೆ ಎಷ್ಟೋ ಸಲ ಓಡಾಡಬೇಕಿತ್ತು. ಆದರೆ ಈಗ ತಮ್ಮಲ್ಲಿರುವ ಪ್ರತಿಭೆಯನ್ನು ನಿರೂಪಿಸಿಕೊಳ್ಳಲು ಚಿಕ್ಕದಾದ ಒಂದು ಕೆಮೆರಾ, ಒಳ್ಳೆಯ ಆಲೋಚನೆಯೊಂದಿದ್ದರೆ ಸಾಕು ಅದನ್ನು ಸಿನಿಮಾ ರೀತಿಯಲ್ಲಿ ಚಿತ್ರೀಕರಿಸಿ ಯುಟ್ಯೂಬ್ ನಲ್ಲಿಡುತ್ತಿದ್ದಾರೆ.ಈ ದೃಶ್ಯವನ್ನು ನೋಡಿದಾಗ ಯಂಡಮೂರಿ ವೀರೇಂದ್ರನಾಥ್ ರವರ ಒಂದು ಸಿನಿಮಾ ನೆನಪಾಗುತ್ತದೆ. ಕೊನೆಗೂ ಹೀರೋ ಯಾರೆಂದು ಕಂಡುಹಿಡಿದಳು. ತಕ್ಷಣವೇ ಹೀರೋ ತನ್ನ ಮುಂದೆ ಬಂದು ಒಂದು ದಿನ ಗರ್ಲ್ ಫ್ರೆಂಡ್ ನಂತೆ ಇರುವಂತೆ ಕೇಳುವುದು, ಅದಕ್ಕೆ ಹೀರೋಯಿನ್ ಒಪ್ಪಿಗೆ ಕೊಡುವುದು ಎಲ್ಲವೂ ಒಂದು ಕ್ಷಣದಲ್ಲಿ ನಡೆದುಹೋಗುತ್ತವೆ. ಒಂದು ದಿನ ಮುಗಿಯುತ್ತಲೇ ಹೀರೊ ಯು.ಎಸ್. ಗೆ ಹೊರಟುಹೋಗುತ್ತಾನೆ. ಕೇವಲ ಅರ್ಧ ಗಂಟೆ ಸಮಯದ ಈ ಸಿನಿಮಾ ನೋಡುತ್ತಿದ್ದರೆ 3 ಗಂಟೆಯ ಸಿನಿಮಾದಂತೆ ಅನಿಸುತ್ತದೆ.

Reply