ಸ್ಕೂಟಿ ಮೇಲೆ ವೇಗವಾಗಿ ಹೋಗುತ್ತಿರುವ ಯುವತಿ… ಸಡನ್ ಆಗಿ ನಿಲ್ಲಿಸಿದಳು.! ಆಕೆ ಕೊಟ್ಟ ಕಾರಣಕ್ಕೆ ನಗು ತಡ್ಕೊಳಕ್ಕಾಗಲ್ಲ!

ಒಂದು ತುರ್ತು ಕೆಲಸದ ನಿಮಿತ್ತ ಸೆಕ್ರೆಟರಿಯೇಟ್‌ಗೆ ಹೋಗುತ್ತಿದ್ದೇನೆ. ವಸಂತನಗರದಿಂದ ಬೈಕ್ ಸ್ಟಾರ್ಟ್ ಮಾಡಿದೆ. ಸಮಯ 9.30 ಆಗುತ್ತಿದೆ. ಕಚೇರಿಗೆ ಹೋಗುವವರಿಂದ ರಸ್ತೆಯೆಲ್ಲಾ ತುಂಬಿ ತುಳುಕುತ್ತಿದೆ. ಹೆವಿ ಟ್ರಾಫಿಕ್. ಬೆಂಗಳೂರಿನಲ್ಲಿ ಸಿಗ್ನಲ್ಸ್ ಕಥೆ ಮಾಮೂಲಿ.. ಸ್ಲ್ಪೆಂಡರ್ ಮೇಲೆ ಸುಮಾರು 60 ಕಿ.ಮೀ ವೇಗದಲ್ಲಿ ಹೋಗುತ್ತಿದ್ದ ನನ್ನನ್ನು.. ಸ್ಕೂಟಿ ಮೇಲೆ ಹೋಗುತ್ತಿದ್ದ ಯುವತಿಯೊಬ್ಬಳು ಕ್ರಾಸ್ ಮಾಡಿದಳು. ಸಿಕ್ಕಾಪಟ್ಟೆ ಜೋಷನಲ್ಲಿದ್ದಳು.. ಬಹುಶಃ ಒಂದು 20 ವರ್ಷ ಇರುತ್ತದೆ. ತರಾತುರಿಯಲ್ಲಿ ಓಡಿಸುತ್ತಿರುವ ತನ್ನ ಸ್ಕೂಟಿಯನ್ನು… ಅಷ್ಟೆಲ್ಲಾ ಅರ್ಜೆಂಟ್ ಏನಿದೆಯೋ ಏನೋ ಎಂದುಕೊಂಡೆ ಮನಸ್ಸಿನಲ್ಲಿ… ಮುಂದೆ ಬಂದ ಒಂದು ಸಿಗ್ನಲ್ ಸಹ ನೋಡದೆ ಜಂಪ್ ಮಾಡಿದಳು, ಜರ್ ಎಂದು ನುಗ್ಗಿಸಿಕೊಂಡು ಹೋದಳು.

 

 

ಆಕೆ ಸಿಗ್ನಲ್ ಜಂಪ್ ಮಾಡಿದ 5 ಸೆಕೆಂಡ್‌ಗೆಲ್ಲಾ ಗ್ರೀನ್ ಸಿಗ್ನಲ್ ಬಿದ್ದ ಕಾರಣ ನಾನು ಮೂವ್ ಆದೆ. ಅಷ್ಟರಲ್ಲಿ…. ಆ ಯುವತಿ ಮುಂದೆ ಬ್ರಿಡ್ಜ್ ಒಂದರ ಬಳಿ ತನ್ನ ಸ್ಕೂಟಿಯನ್ನು ಆನ್‌ನಲ್ಲೇ ನಿಲ್ಲಿಸಿ ನಿಂತಿದ್ದಳು. ವೇಗವಾಗಿ ಬಂದ ಬಹಳಷ್ಟು ಮಂದಿ ಆಕೆ ಹಿಂದೆ ಸಡನ್ ಆಗಿ ಬ್ರೇಕ್ ಹಾಕಿ ನಿಂತರು… ಎಲ್ಲವೂ ಅಯೋಮಯವಾಗಿದೆ. ಏನಿರಬಹುದು ಎಂದು ಕಾರುಗಳ ನಡುವೆ ನುಗ್ಗಿಸಿಕೊಳ್ಳುತ್ತಾ ನಾನು ಬೈಕ್ ಮೇಲೆ ಆ ಯುವತಿ ಬಳಿಗೆ ಹೋದೆ..! ಎಲ್ಲರೂ ಆಕೆಯನ್ನೇ ಕೇಳುತ್ತಿದ್ದಾರೆ..? ಯಾಕೆ ನಿಲ್ಲಿಸಿದಿರಿ? ಏನಾಯಿತು. ಸಿಗ್ನಲ್ ಸಹ ಇಲ್ಲ ಎಂದು..!

ಅದಕ್ಕೆ ಆಕೆ ಕೊಟ್ಟ ಉತ್ತರ… ಮೇಲೆ ರೈಲುಗಳು ಹೋಗುತ್ತಿವೆ. ಈಗ ನಾವು ಆ ಬ್ರಿಡ್ಜನ್ನು ದಾಟಿಕೊಂಡು ಹೋಗಬೇಕು. ಆ ಸಮಯದಲ್ಲಿ ಟ್ರೈನ್‌ನಿಂದ ಒನ್… ಟೂ ಏನಾದರೂ ಮೇಲೆ ಬಿದ್ದರೆ… ಛೇ ಛೇ ಮತ್ತೆ ನಾನು ಮನೆಗೆ ಹೋಗಿ ರೆಡಿ ಆಗಿ ಕಚೇರಿಗೆ ಹೋಗಬೇಕು… ಸೋ ರಿಸ್ಕ್ ಎಂದು ಹೇಳಿ ಮುಗಿಸಿದಳು ಆ ಮೇಡಂ… ಅಷ್ಟರಲ್ಲಿ ಪಕ್ಕದಲ್ಲಿದ್ದ ಓರ್ವ 50 ವರ್ಷದ ಹಿರಿಯ… ಅಯ್ಯೋ ನಿನ್ನ ಮಕಾ ಮುಚ್ಚಾ… ಮೇಲೆ ಹೋಗುತ್ತಿರುವುದು ಲೋಕಲ್ ಟ್ರೈನ್ ಎಂದು ಹೇಳಿ ಗೇರೆ ಬದಲಾಯಿಸಿಕೊಂಡು ಹೊರಟು ಹೋದ..! ಆಕೆಯ ಪಕ್ಕದಲ್ಲಿದ್ದವರೆಲ್ಲಾ ಎದ್ದೂ ಬಿದ್ದು ನಗುವಂತಾಯಿತು. ನಾನೂ ಸಹ. 🙂

 

(ಲೋಕಲ್ ರೈಲುಗಳಲ್ಲಿ ಟಾಯ್ಲೆಟ್ಸ್ ಇರಲ್ಲ)

 

Share this post

Post Comment