350ಕ್ಕಿಂತಲೂ ಹೆಚ್ಚು ಬಡ ರೋಗಿಗಳಿಗೆ ಉಚಿತ ಶಸ್ತ್ರ ಚಿಕಿತ್ಸೆ ಮಾಡಿದ ಡಾ. ಡಾ.ಮನೋಜ್ ದುರೈರಾಜ್

ಡಾ.ಮನೋಜ್ ದುರೈ ರಾಜ್ ಹೃದಯ ವೈಶ್ಯಾಲ್ಯ ಇರುವ ಡಾಕ್ಟರ್. ಅವರು ಹೃದಯ ಶಸ್ತ್ರಚಿಕಿತ್ಸೆ ಮಾಡಿ ಕಾಯಿಲೆ ಗುಣ ಪಡಿಸುವುದು ಮಾತ್ರವಲ್ಲ,ರೋಗಿಗೆ ಹೊಸ ಜೀವನವನ್ನೇ ನೀಡುತ್ತಿದ್ದಾರೆ. ಹಣ ಇಲ್ಲದ ಬಡವರನ್ನು ಅವರು ಎಂದೂ ಹಣದ ಕಾರಣದಿಂದ ಹಿಂದೆ ಕಳಿಸಿದ್ದಿಲ್ಲ.ಡಾ.ಮನೋಜ್ ದುರೈರಾಜ್ ತನ್ನ ತಂದೆ ಸ್ಥಾಪಿಸಿದ ಫೌಂಡೇಶನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರ ತಂದೆ 22 ವರ್ಷಗಳ ಮುಂಚೆ ಮರಿಯನ್ ಕಾರ್ಡಿಯಾಕ್ ಸೆಂಟರ್ ಮತ್ತು ಸಂಶೋಧನಾ ಫೌಂಡೇಶನ್ ಸ್ಥಾಪನೆ ಮಾಡಿದ್ದರು. ಡಾ.ಮನೋಜ್ ಈ ಫೌಂಡೇಶನ್ ಗೆ 2005 ರಲ್ಲಿ ಬಂದು ಸೇರಿಕೊಂಡಿದ್ದರು.

 

 

ನಂತರ ದಿನಗಳಲ್ಲಿ ಮೂವತ್ತು ದಾನಿಗಳ ಸಹಾಯದಿಂದ ಡಾ.ಮನೋಜ್ 350ಕ್ಕಿಂತಲೂ ಹೆಚ್ಚು ರೋಗಿಗಳ ಶಸ್ತ್ರ ಚಿಕಿತ್ಸೆ ಉಚಿತವಾಗಿ ಮಾಡಿದ್ದಾರೆ. ಬಹಳಷ್ಟು ಬಡ ರೋಗಿಗಳಿಗೆ ಸರಕಾರದ ಹಲವಾರು ಯೋಜನೆಯ ಮುಖಾಂತರ ಶಸ್ತ್ರ ಚಿಕಿತ್ಸೆಗೆ ವೆಚ್ಚ ಭರಿಸುವ ಕೆಲಸ ಮಾಡಲಾಗುತ್ತದೆ. ಆದರೆ ಬಹಳಷ್ಟು ಜನರಲ್ಲಿ ಬಿಪಿಎಲ್ ಕಾರ್ಡ್ ಲಭ್ಯವಿರುವುದಿಲ್ಲ. ಆಗ ಮಹಾರಾಷ್ಟ್ರದಿಂದ ಹೊರಗೆ ಹೋಗಿಯೂ ಡಾ.ಮನೋಜ್ ಚಿಕಿತ್ಸೆ ನೀಡಿದ ಉದಾಹರಣೆ ಇದೆ.

Share this post

Post Comment