ಹೊಸ ಅಮ್ಮನಿಗೂ, ಸತ್ತು ಹೋದ ಹಳೆ ಅಮ್ಮನಿಗೂ ಏನು ವ್ಯತ್ಯಾಸ ಎಂದು ತಂದೆ ಕೇಳಿದ.! 8 ವರ್ಷದ ಮಗ ಹೇಳಿದ್ದು ಕೇಳಿದರೆ ಕಣ್ಣು ಒದ್ದೆಯಾಗುತ್ತದೆ..!

ಮಕ್ಕಳು ದೈವ ಸಮಾನ ಎನ್ನುತ್ತಾರೆ. ಅವರ ಮನಸ್ಸಿನಲ್ಲಿ ಯಾವುದೇ ಕೆಟ್ಟ ಭಾವನೆ ಇರಲ್ಲ. ಮುಗ್ಧ ಮನಸ್ಸಿನಲ್ಲಿ ಅದೆಷ್ಟೋ ಆಲೋಚನೆಗಳು ಇರುತ್ತವೆ. ತಾಯಿಗಿಂತ ದೇವರಿಲ್ಲ ಎಂಬ ಮಾತಿಗೆ. ಅಂತಹ ತಾಯಿಯ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಇನ್ನೊಬ್ಬ ತಾಯಿಯನ್ನು ತರಲು ಸಾಧ್ಯವಿಲ್ಲ. ಇದು ಅಂತಹದ್ದೇ ಒಂದು ಘಟನೆ. ಓದಿ ನಿಮ್ಮ ಕಣ್ಣು ಮಂಜಾಗುವುದು ಗ್ಯಾರಂಟಿ.

ಎಂಟು ವರ್ಷದ ಓರ್ವ ಬಾಲಕನ ತಾಯಿ ನಿಧನರಾದರು..
ಅವರ ತಂದೆ ಇನ್ನೊಂದು ಮದುವೆ ಮಾಡಿಕೊಂಡ..

ಒಂದು ದಿನ ಅವರ ತಂದೆ ಬಾಲಕನ ಜತೆಗೆ ಮಗನೇ ನಿನಗೆ ಹೊಸ ಅಮ್ಮ,
ಸತ್ತು ಹೋದ ಹಳೆಯ ಅಮ್ಮನ ನಡುವೆ ಏನು ವ್ಯತ್ಯಾಸ ಅನ್ನಿಸುತ್ತಿದೆ ಎಂದು ಕೇಳಿದ….

ಆಗ ಆ ಬಾಲಕ ಈ ರೀತಿ ಎಂದ…

ಅಪ್ಪಾ ಹೊಸ ಅಮ್ಮ ನಿಜ…ಹಳೆ ಅಮ್ಮ ಸುಳ್ಳು ಎಂದ…

ಅದನ್ನು ಕೇಳಿದ ತಂದೆ ಅವಾಕ್ಕಗಿ…ಇದೇನು ಮಗನೇ ಆ ರೀತಿ ಹೇಳುತ್ತಿದ್ದೀಯಾ ಎಂದರೆ…

ಆಗ ಆ ಬಾಲಕ ಈ ರೀತಿ ಹೇಳಿದ.

ನಾನು ಯಾವಾಗಲಾದರೂ ತುಂಟಾಟ ಮಾಡಿದರೆ ಆಗ ನಮ್ಮ ಅಮ್ಮ ಅನ್ನುತ್ತಿದ್ದಳು ನೀನು ಹೀಗೆಯೇ ಮಾಡುತ್ತಿದ್ದರೆ ನಿನಗೆ ಅನ್ನ ಇಡಲ್ಲ ಎಂದು…

ಆದರೂ ನಾನು ತುಂಟಾಟ ಮಾಡುತ್ತಿದ್ದೆ…ಆ ಅಮ್ಮ ನನ್ನನ್ನು ಕರೆದೊಯ್ದು ತನ್ನ ಬಳಿ ಕೂರಿಸಿಕೊಂಡು ಅನ್ನ ತಿನ್ನಿಸುತ್ತಿದ್ದಳು…

ಅದರೆ ಈಗ ಇರುವ ಹೊಸ ಅಮ್ಮ ಸಹ ತುಂಟಾಟ ಮಾಡಿದರೆ ನಿನಗೆ ಅನ್ನ ಇಡಲ್ಲ ಎನ್ನುತ್ತಾಳೆ

ಆದರೆ ಈ ಹೊಸ ಅಮ್ಮ 3 ದಿನಗಳಿಂದ ನನಗೆ ನಿಜವಾಗಿ ಅನ್ನ ಇಟ್ಟಿಲ್ಲ ಅಪ್ಪಾ…

ಅದಕ್ಕೇ ಆ ಹಳೆ ಅಮ್ಮ ಸುಳ್ಳು… ಈ ಹೊಸ ಅಮ್ಮ ನಿಜ.

ಇದನ್ನು ಕೇಳಿದ ಆ ತಂದೆಗೆ ಮಾತೇ ಬರದಂತಾಯಿತು…!


Reply