ರೇಪ್ ಕೇಸ್ ಅಪರಾಧಿಗೆ ಗಿಡ ನೆಡಬೇಕು ಎಂಬ ಶಿಕ್ಷೆ ಏನು ಜಡ್ಜ್ ಸಾಹೇಬರೇ… ಸಾರ್ ಸ್ವಲ್ಪ ಆಲೋಚಿಸಿ

ದೇಶದಲ್ಲಿ ರೇಪ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ ಪ್ರಕರಣದಲ್ಲಿ ಶಿಕ್ಶೆ ಆಗುತ್ತಿರುವವರ ಸಂಖ್ಯೆ ಮಾತ್ರ ಒಂಡೆರಡು ಇವೆ. ದೇಶದಾದ್ಯಂತ ನಿತ್ಯ 50 ರೇಪ್ ಕೇಸ್‌ಗಳು ದಾಖಲಾಗುತ್ತಿದ್ದರೆ ಕನಿಷ್ಠ ಒಂದೆರಡು ರೇಪ್ ಪ್ರಕರಣಗಳ ಅಂತಿಮ ತೀರ್ಪು ಸಹ ಬರುತ್ತಿಲ್ಲ. ಇದೇ ರೀತಿ ರೇಪ್ ಕೇಸ್‌ಗಳು ಹೆಚ್ಚಾಗುತ್ತಾ ಹೋದರೆ ಆ ಬಳಿಕ ಕೆಲವು ದಿನಗಳಿಗೆ ಸಾವಿರ, ಲಕ್ಷಾಂತರ ಪ್ರಕರಣಗಳು ಪೆಂಡಿಂಗ್‌ನಲ್ಲಿ ಇರುತ್ತವೆ. ಹತ್ಯೆ ಕೇಸ್‌ಗಳು ಪೆಂಡಿಂಗ್‌ನಲ್ಲಿ ಇದ್ದರೂ ಪರ್ವಾಗಿಲ್ಲ, ಆದರೆ ರೇಪ್ ಪೆಂಡಿಂಗ್‌ನಲ್ಲಿ ಇದ್ದರೆ ಆ ರೇಪ್ ಮಾಡಿದ ವ್ಯಕ್ತಿ ಮತ್ತೆ ಹೊರ ಜಗತ್ತಿನಲ್ಲಿ ಓಡಾಡುತ್ತಾ ಇನ್ನಷ್ಟು ಸಮಾಜ ಘಾತುಕ ಕೆಲಸಗಳಿಗೆ ಮುಂದಾಗುವ ಅವಕಾಶ ಇದೆ ಎಂದು ಮಹಿಳಾ ಸಂಘಟನೆಗಳು ಆತಂಕ ವ್ಯಕ್ತಪಡಿಸುತ್ತಿವೆ. ಆದರೂ ಸಹ ಕೋರ್ಟ್ ಮಾತ್ರ ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳುತ್ತಿಲ್ಲ.

 

 

ಇತ್ತೀಚೆಗೆ ಒಂದು ರೇಪ್ ಪ್ರಕರಣದ ವಿಚಾರಣೆಯಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದೆ. ರಾಜು ಎಂಬ ವ್ಯಕ್ತಿ ವಿರುದ್ಧ ರೇಪ್ ಪ್ರಕರಣ ದಾಖಲಾಯಿತು. ನಾಲ್ಕು ವರ್ಷಗಳಿಂದ ಆ ರೇಪ್ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಪ್ರತಿ ವಾರ ರಾಜು ಕೋರ್ಟ್‌ಗೆ ಹಾಜರಾಗಬೇಕಾಗುತ್ತದೆ. ಆದರೆ ಆರು ತಿಂಗಳಿಂದ ರಾಜು ಕೋರ್ಟ್‌ಗೆ ಹಾಜರಾಗಿಲ್ಲ. ಕೋರ್ಟ್ ಹಲವು ಸಲ ಎಚ್ಚರಿಸಿದ್ದರೂ ಸಹ ಆತ ಕೋರ್ಟ್‌ಗೆ ಹಾಜರಾಗಲಿಲ್ಲ. ಇದರಿಂದಾಗಿ ಕೋರ್ಟ್ ರಾಜು ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ ಮಾಡಿತು. ಇದರಿಂದ ಕೋರ್ಟ್ ಮುಂದೆ ರಾಜು ತನ್ನ ತಪ್ಪಿಗೆ ಕ್ಷಮಾಪಣೆ ಕೇಳಿ ತನ್ನ ವಿರುದ್ಧ ಹೊರಡಿಸಿರುವ ಅರೆಸ್ಟ್ ವಾರೆಂಟನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದ.

 

ರಾಜು ಕ್ಷಮಾಪಣೆಯನ್ನು ಅಂಗೀಕರಿಸಿದ ಜಡ್ಜ್, ಇನ್ನು ಮುಂದೆ ಕಡ್ಡಾಯವಾಗಿ ಕೋರ್ಟ್ ವಿಚಾರಣೆಗೆ ಬರುತ್ತೇನೆ ಎಂದು ಮಾತು ತೆಗೆದುಕೊಂಡು, ಅರೆಸ್ಟ್ ವಾರೆಂಟ್ ರದ್ದು ಮಾಡಲು ಐದು ಗಿಡ ನೆಡಬೇಕೆಂದು, ಅವುಗಳ ಆರೈಕೆ ನೋಡಿಕೊಳ್ಳಬೇಕೆಂದು ಕೋರ್ಟ್ ಸೂಚಿಸಿತು. ಐದು ಗಿಡಗಳನ್ನು ರಾಜು ಬೆಳೆಸುವಂತೆ ಪೊಲೀಸರು ನೋಡಿಕೊಳ್ಳಬೇಕೆಂದು ಆದೇಶಿಸಿತು.

 

ಒಟ್ಟಾರೆ ರೇಪ್ ಕೇಸ್‌ ಅಪರಾಧಿಗೆ ಕೋರ್ಟ್‌ಗೆ ಬಾರದೆ ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದು ಚೆನ್ನಾಗಿಯೇ ಇದೆ, ಅದನ್ನು ರದ್ದು ಮಾಡಲು ಐದು ಗಿಡ ನೆಡುವಂತೆ ಶಿಕ್ಷೆ ವಿಧಿಸಿದ್ದು ಏನು ಜಡ್ಜ್ ಸಾಹೇಬರೇ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಕಾಮೆಂಟ್ಸ್ ಕೇಳಿಬರುತ್ತಿವೆ. ಆದರೆ ನಮ್ಮ ನ್ಯಾಯ ವ್ಯವಸ್ಥೆ ಮೇಲೆ ನಾವು ಯಾವುದೇ ಕಾಮೆಂಟ್ಸ್ ಮಾಡಬಾರದು. ಆ ರೀತಿ ಕಾಮೆಂಟ್ಸ್ ಮಾಡಿದರೆ ಕಾನೂನು ರೀತಿ ಅಪರಾಧ ಆಗುತ್ತದೆ. ಆಗ ಕಾಮೆಂಟ್ಸ್ ಮಾಡಿದವರಿಗೂ ಸಹ ಗಿಡ ನೆಡವುದೋ, ಕಸ ಗುಡಿಸುವುದೋ ಶಿಕ್ಷೆ ಬೀಳುವ ಸಾಧ್ಯತೆಗಳಿವೆ ಹುಷಾರ್.

 

 

Share this post

Post Comment