ಮೇಡ್ ಫಾರ್ ಈಚ್ ಅದರ್ ಎಂಬ ಮಾತಿಗೆ ಸರಿಯಾದ ಅರ್ಥ ಈ ಜೋಡಿ… ಇವರ ಕಥೆ ಕೇಳಿದರೆ ಅಚ್ಚರಿಯಾಗುತ್ತದೆ. ರಿಯಲ್ ಸ್ಟೋರಿ…!

“ನಮ್ಮದು ತುಂಬಾ ಬಡತನದ ಕುಟುಂಬ. ಅದರ ಜತೆಗೆ ಅವರು ಯಾವಾಗಲೂ ಆತಂಕಪಡುತ್ತಿದ್ದರು. ಅದೂ ಸಹ ನನ್ನ ಬಗ್ಗೆಯೇ. ನಾನು ವಯಸ್ಸಿಗೆ ಬಂದ ಮೇಲೆ ಎಲ್ಲರೂ ನನ್ನನ್ನು ನೋಡಿ ಬೇಗ ಮದುವೆಯಾಗಿ ಸೆಟ್ಲ್ ಆಗು ಎನ್ನುತ್ತಿದ್ದರು. ಯಾಕೆಂದರೆ ನಾನು ಸ್ವಲ್ಪ ಕುಳ್ಳಗೆ, ಕಪ್ಪಗೆ ಇರುತ್ತೇನೆ. ಹಾಗಾಗಿ ಅವರು ಆ ರೀತಿ ಹೇಳುತ್ತಿದ್ದರು. ನನ್ನ ತಂದೆತಾಯಿ ಮದುವೆ ಸಂಬಂಧಗಳನ್ನು ನೋಡುತ್ತಿದ್ದರು. ಯಾರಾದರೂ ಯುವಕ ಹೆಣ್ಣು ನೋಡಲು ಬಂದರೆ ನನ್ನ ಮುಖ ಬೆಳ್ಳಗೆ ಇರಬೇಕು ಎಂದು ಪೌಡರ್ ಹಾಕಿಕೊಳ್ಳುತ್ತಿದ್ದೆ. ಎತ್ತರವಾಗಿ ಕಾಣಿಸಬೇಕೆಂದು ಹೈ ಹೀಲ್ಸ್ ಹಾಕಿಕೊಳ್ಳುತ್ತಿದ್ದೆ. ಅವನ್ನು ಹಾಕಿಕೊಂಡರೆ ನನಗೆ ನಡೆಯಲು ಆಗುತ್ತಿರಲಿಲ್ಲ. ಇದರಿಂದ ನನ್ನನ್ನು ನೋಡಲು ಬಂದವರಿಗೆ ಅನುಮಾನ ಬರುತ್ತದೆ. ನಾನು ಸರಿಯಾಗಿ ನಡೆಯುತ್ತೀನಾ, ನನ್ನ ಕಾಲುಗಳು ಚೆನ್ನಾಗಿವೆಯೇ, ಎಂದು ಅವರು ಚೆಕ್ ಮಾಡಿಕೊಳ್ಳುತ್ತಿದ್ದರು.

“ನನ್ನ ಜಡೆ, ದೇಹ ಎಲ್ಲವೂ ಸರಿಯಾಗಿ ಇದೆಯೇ, ಇಲ್ಲವೇ ಎಂದು ಪರಿಶೀಲಿಸುತ್ತಿದ್ದರು. ಆದರೂ ನನಗೆ ಅಷ್ಟಾಗಿ ನೋವಾಗುತ್ತಿರಲಿಲ್ಲ. ಆ ರೀತಿ ಇರಬೇಕಾದರೆ ಒಬ್ಬ ಯುವಕ ನನ್ನನ್ನು ನೋಡಲು ಬಂದ. ಇದೂ ಅಷ್ಟೇ ಬಿಡು ಎಂದುಕೊಂಡು ಆತನನ್ನು ನೋಡಲು ಹೋದೆ. ತೀರಾ ಆತನನ್ನು ನೋಡಿದ ಬಳಿಕ ಆತ ನನಗೆ ಕರೆಕ್ಟ್ ಅಲ್ಲ ಅನ್ನಿಸಿತು. ಯಾಕೆಂದರೆ ಆತ ಬೆಳ್ಳಗೆ, ಎತ್ತರವಾಗಿ ಇದ್ದ, ಆತನ ಬಳಿಗೆ ಹೋಗಲು ಮನಸ್ಸು ಬರಲಿಲ್ಲ. ಕುಟುಂಬಿಕರ ಬಲವಂತದ ಕಾರಣ ಆತನೊಂದಿಗೆ ಒಂಟಿಯಾಗಿ ಮಾತನಾಡಲು ಹೋದೆ.

ಇಬ್ಬರೂ ಕುಳಿತುಕೊಂಡೆವು. ಆತ ನನ್ನ ಕಾಲಿನ ಚಪ್ಪಲಿ ನೋಡಿದ. ಯಥಾವಿಧಿಯಾಗಿ ಅವು ಹೈ ಹೀಲ್ಡ್ ಚಪ್ಪಲಿ. ಅವನ್ನು ನೋಡಿ ಆತ ಕೇಳಿದ, ಆ ಚಪ್ಪಲಿ ಹಾಕಿಕೊಂಡು ನೀನು ಹೇಗೆ ನಡೆಯಲು ಸಾಧ್ಯವಾಗುತ್ತಿದೆ ಎಂದು ಕೇಳಿದ. ನಾನು ನಕ್ಕುಬಿಟ್ಟೆ. ಯಾಕೋ ಆತ ಮನಸ್ಫೂರ್ತಿಯಿಂದ ಆ ಪ್ರಶ್ನೆ ಕೇಳಿದ ಎನ್ನಿಸಿತು. ಸ್ವಲ್ಪ ಹೊತ್ತು ಇಬ್ಬರ ನಡುವೆ ಮೌನ. ಬಳಿಕ ನಾನೇ ಕೇಳಿದೆ, ನಿನಗೆ ಯಾವ ರೀತಿಯ ಹುಡುಗಿ ಬೇಕೆಂದು. ಆತ ಹೇಳಿದ, ನಿನ್ನಂತೆ ಸುಂದರವಾಗಿ ನಗುವ ಹುಡುಗಿಯಾದರೆ ಸಾಕು. ಅಚ್ಚರಿ ಅನ್ನಿಸಿತು. ಅಷ್ಟೇ… ಆ ಬಳಿಕ ಮತ್ತೆ ಆಲೋಚಿಸಲಿಲ್ಲ. ಇಬ್ಬರಿಗೂ ಮದುವೆಯಾಯಿತು. ಈಗ ನಮ್ಮ ಮದುವೆಯಾಗಿ 6 ತಿಂಗಳಾಗುತ್ತಿದೆ. ನಾವು ತುಂಬಾ ಸಂತೋಷವಾಗಿ ಇದ್ದೇವೆ. ಇದುವರೆಗೆ ಐ ಲವ್ ಯೂ ಎಂಬ ಮಾತನ್ನೇ ಆಡಿಲ್ಲ. ಆದರೂ ಇಬ್ಬರಿಗೂ ಗೊತ್ತು, ಒಬ್ಬರ ಬಗ್ಗೆ ಇನ್ನೊಬ್ಬರಿಗೆ ತುಂಬಾ ಪ್ರೀತಿ ಇದೆ ಎಂದು. ಇಬ್ಬರೂ ಒಬ್ಬರಿಗೊಬ್ಬರೂ ಇಷ್ಟಪಡುತ್ತಿದ್ದೇವೆ. ಹಾಗಾಗಿಯೇ, ಇಬ್ಬರೂ ಸೇರಿ ನಡೆಯುತ್ತಿದ್ದರೆ.. ಎಷ್ಟು ಹೊತ್ತಾದರೂ ಗೊತ್ತೇ ಆಗಲ್ಲ. ನಿತ್ಯ ಆ ರೀತಿ ಇಬ್ಬರೂ ಕೆಲಸ ಮಾಡಿ ಆಫೀಸಿನಿಂದ ನಡೆದುಕೊಂಡು ಬರುತ್ತಿದ್ದರೆ.. ಅದೊಂದು ರೀತಿ ಮಧುರಾನುಭವ..! ಹೇಳಲಾಗದ ಆನಂದ..! ಇದು ಹೀಗೆಯೇ ಇರಬೇಕು.”

— ಸಹೀನಾ ಬೇಗಂ, ಹೆಮಿನುಲ್ ಇಸ್ಲಾಂ ಎಂಬ ದಂಪತಿಗಳ (ಪ್ರೇಮಿಗಳ) ಸುಂದರವಾದ ಪ್ರೇಮ ಕಥೆ…! ರಿಯಲ್ ಸ್ಟೋರಿ..!

Share this post

Post Comment