ವಾವ್: ಡಾಕ್ಟರ್, ರೋಗಿ ನಡುವೆ 3 ಸಾವಿರ ಕಿಲೋ ಮೀಟರ್ ಅಂತರ… ಆದರೂ ನಡೆದ ಆಪರೇಷನ್ ಸೂಪರ್ ಸಕ್ಸಸ್

ಬದಲಾಗುತ್ತಿರುವ ಟೆಕ್ನಾಲಜಿ ಎಲ್ಲಾ ಕ್ಷೇತ್ರಗಳಿಗೂ ವಿಸ್ತರಿಸುತ್ತಿದೆ. ಎಷ್ಟೇ ತಂತ್ರಜ್ಞಾನ ಬದಲಾದರೂ ಕೆಲವು ಮಾತ್ರ ಹಾಗೆಯೇ ಇವೆ. ಮುಖ್ಯವಾಗಿ ಒಬ್ಬ ರೋಗಿಗೆ ಶಸ್ತ್ರಚಿಕಿತ್ಸೆ ಮಾಡುವ ವಿಧಾನ ಮಾತ್ರ ಬದಲಾಗಲಿಲ್ಲ. ಆಪರೇಷನ್‌ಗೆ ಬಳಸುವ ಟೆಕ್ನಾಲಜಿ ಬದಲಾಗುವ ಅವಕಾಶ ಇದ್ದರೂ ಆಪರೇಷನ್ ಮಾಡುವ ವೈದ್ಯರು ಮಾತ್ರ ಅದೇ ಎಚ್ಚರಿಕೆ ತೆಗೆದುಕೊಳ್ಳುತ್ತಾ ಆಪರೇಷನ್ ಮಾಡುತ್ತಾರೆ. ಆದರೆ ಜಗತ್ತಿನಲ್ಲೇ ಮೊದಲ ಸಲ ಓರ್ವ ಡಾಕ್ಟರ್ ಪೇಷಂಟ್ ಬಳಿ ಇಲ್ಲದೆ ಆಪರೇಷನ್ ಮಾಡಿದರು. ಒಂದು 5ಜಿ ಟೆಕ್ನಾಲಜಿ ಹ್ಯಾಂಡ್ ಬಳಸಿ ರೋಗಿಯ ಮಿದುಳಿನ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಈ ಮೂಲಕ ವೈದ್ಯಕೀಯ ಶಾಸ್ತ್ರದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ.

 

 

ಎಲ್ಲೋ ಮೂರು ಸಾವಿರ ಕಿಲೋ ಮೀಟರ್ ದೂರದಲ್ಲಿ ಇದ್ದ ಒಬ್ಬ ವೈದ್ಯ ರೋಗಿಗೆ ಆಪರೇಷನ್ ಮಾಡುವುದು ಎಂದರೆ ಸಾಮಾನ್ಯ ಸಂಗತಿ ಅಲ್ಲ. ಅದು ಹವಾಯಿ ಸಂಸ್ಥೆ ತಯಾರಿಸಿದ 5ಜಿ ಟೆಕ್ನಾಲಜಿ ಕಂಪ್ಯೂಟರ್, ರೋಬೋಟಿಕ್ ಹ್ಯಾಂಡ್‍ನಿಂದ ಈ ಶಸ್ತ್ರಚಿಕಿತ್ಸೆ ಸಾಧ್ಯವಾಗಿದೆ. ಆ ಪರಿಜ್ಞಾನವನ್ನು ಬಳಸಿ ಮಾಡಲಾದ ಮೊದಲ ಶಸ್ತ್ರಚಿಕಿತ್ಸೆ ಇದು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಸದ್ಯಕ್ಕೆ ಜಗತ್ತಿನಲ್ಲಿ ಎಲ್ಲರೂ ಈ ಶಸ್ತ್ರಚಿಕಿತ್ಸೆ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ. ಆಪರೇಷನ್‌ಗೆ ಸಂಬಂಧಿಸಿದ ವಿಷಯಗಳು ಸದ್ಯಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

 

ಸಂಪೂರ್ಣ ವಿವರಗಳನ್ನು ನೋಡುವುದಾದರೆ… ಚೀನಾ ದೇಶದ ಬೀಜಿಂಗ್‌ನಲ್ಲಿ ಒಂದು ಖಾಸಗಿ ಆಸ್ಪತ್ರೆಯಲ್ಲಿ ರೋಗಿ ಮಿದುಳಿಗೆ ಸಂಬಂಧಿಸಿದ ಖಾಯಿಲೆಯಿಂದ ನರಳುತ್ತಿದ್ದ. ಅವರಿಗೆ ಶಸ್ತ್ರಚಿಕಿತ್ಸೆ ಮಾಡಲು ಸಿದ್ಧತೆ ಮಾಡಿದರು. ಆದರೆ ವೈದ್ಯರು ಮಾತ್ರ ಎಲ್ಲೋ ಮೂರು ಸಾವಿರ ಕಿಲೋ ಮೀಟರ್ ದೂರದಲ್ಲಿ ಮತ್ತೊಂದು ಜಾಗದಲ್ಲಿದ್ದರು. ಲಿಂಗ್ ಜಿಪಿ ಎಂಬ ಆ ವೈದ್ಯರು ಆದರೂ ಆ ಬ್ರೈನ್ ಆಪರೇಷನ್ ಮಾಡಲು ಸಿದ್ಧವಾದರು. 5ಜಿ ಟೆಕ್ನಾಲಜಿ ಸಹಾಯದಿಂದ ಅವರು ಬ್ರೈನ್ ಫೇಸ್ ಮೇಕರನ್ನು ಅಳವಡಿಸಿದ್ದಾರೆ. ಪಾರ್ಕಿಸನ್ಸ್ ಖಾಯಿಲೆಯಿಂದ ನರಳುತ್ತಿದ್ದ ಆ ವ್ಯಕ್ತಿ ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಇದು ವೈದ್ಯಕೀಯ ಲೋಕದಲ್ಲಿ ಒಂದು ಅದ್ಭುತ ಎನ್ನಲಾಗಿದೆ.

 

Filed in: OMG

Share this post

Post Comment