ಜ್ವರ ಬಂದವರು ಕೋಳಿ ಮೊಟ್ಟೆ ತಿನ್ನಬಹುದೇ..? ತಿಂದರೆ ಏನಾಗುತ್ತದೆ..?

ಮನೆಯಲ್ಲಿ ಯಾರಿಗಾದರೂ ಜ್ವರ ಬಂದರೆ ಸಾಕು.. ಮನೆಯಲ್ಲಿರುವವರಿಗೆಲ್ಲಾ ಬೇಜಾರಾಗಿರುತ್ತಾರೆ. ಜ್ವರ ಬೇಗ ಕಡಿಮೆಯಾಗಲಿ ಎಂದು ಬೇಡಿಕೊಳ್ಳುತ್ತಾರೆ. ಅದರಲ್ಲೂ ಜ್ವರ ಬಂದವರಿಗೆ ಹಣ್ಣು, ಜ್ಯೂಸು ಇನ್ನಿತರೆ ಆಹಾರ ಹೆಚ್ಚಾಗಿ ನೀಡುತ್ತಿರುತ್ತಾರೆ. ಆದರೆ ಸಾಮಾನ್ಯವಾಗಿ ಜ್ವರ ಯಾರಿಗಾದರೂ ಬಂದರೆ… ಅವರು ತೆಗೆದುಕೊಳ್ಳುವ ಆಹಾರದ ಬಗ್ಗೆ ಅನೇಕ ಅನುಮಾಗಳು ಬರುತ್ತಿರುತ್ತವೆ. ಯಾವ ಆಹಾರ ತಿನ್ನಬೇಕು, ಯಾವ ಆಹಾರ ತಿನ್ನಬಾರದು ಎಂದು ಯೋಚಿಸುತ್ತಾರೆ. ಅದರ ಭಾಗವಗಿ ಜ್ವರ ಬಂದ ಬಹುತೇಕರು ನಾನ್ ವೆಜ್ ತಿನ್ನಲ್ಲ. ತಿಂದರೆ ಜ್ವರ ಇನ್ನೂ ಹೆಚ್ಚಾಗುತ್ತದೆ ಎಂದುಕೊಳ್ಳುತ್ತಾರೆ. ಆದರೆ ನಾನ್ ವೆಜ್‌ನಿಂದಾಗಿ ಜ್ವರ ಹೆಚ್ಚಾಗುತ್ತದೆ ಎಂಬ ಮಾತು ನಿಜವಾದರೂ ಕೋಳಿ ಮೊಟ್ಟೆ ತಿನ್ನುವುದರಿಂದ ಜ್ವರ ಹೆಚ್ಚಾಗಲ್ಲ. ಅದರಿಂದ ನಮಗೆ ಒಳಿತೇ ಆಗುತ್ತದೆ.

 

 

ಜ್ವರ ಬಂದವರು ಮಾಂಸಾಹಾರ ತಿನ್ನಬಾರದು ಅಂತ ಗೊತ್ತು. ಆದರೆ ಕೋಳಿ ಮೊಟ್ಟೆಗೆ ವಿನಾಯಿತಿ ಇದೆ. ಹೌದು ನೀವು ಕೇಳಿದ್ದು ನಿಜ. ಜ್ವರ ಬಂದವರು ಇತರೆ ಮಾಂಸಾಹಾರ ಅಲ್ಲದೆ ಕೋಳಿ ಮೊಟ್ಟೆ ತಿಂದರೆ ಉತ್ತಮ. ಆದರೆ ಅದನ್ನು ಬೇಯಿಸಿ ಮಾತ್ರ ತಿನ್ನಬೇಕೆಂದು ವೈದ್ಯರು ಸೂಚಿಸುತ್ತಿದ್ದಾರೆ. ಕೋಳಿ ಮೊಟ್ಟೆಯಲ್ಲಿ ಇರುವ ಪೋಷಕಾಂಶಗಳು, ಮುಖ್ಯವಾಗಿ ಪ್ರೋಟೀನ್ ಜವರ ಬಂದವರಿಗೆ ಶಕ್ತಿ ನೀಡಲು ಉಪಯುಕ್ತ. ಆದಕಾರಣ ಜ್ವರ ಬಂದವರು ಯಾರೇ ಆಗಲಿ ಕೋಳಿ ಮೊಟ್ಟೆಯನ್ನು ಬೇಯಿಸಿ ತಿನ್ನಬಹುದು.

 

ಆದರೆ ಜ್ವರ ಬಂದವರಿಗೆ ಹಸಿವು ಜಾಸ್ತಿ ಇದ್ದರಷ್ಟೇ ಮೊಟ್ಟೆ ತಿನ್ನಬೇಕು. ಹಸಿವು ಇಲ್ಲದಿದ್ದರೆ ಕೋಳಿ ಮೊಟ್ಟೆ ತಿನ್ನಬಾರದು. ಯಾಕೆಂದರೆ ಜೀರ್ಣಶಕ್ತಿ ಕಡಿಮೆ ಇರುತ್ತದಾದ್ದರಿಂದ ಮೊಟ್ಟೆ ತಿನ್ನಬಾರದು. ಜ್ವರ ಬಂದವರು ಕೋಳಿ ಮೊಟ್ಟೆ ತಿನ್ನುವುದರಿಂದ ಬಹಳ ಬೇಗ ಚೇತರಿಸಿಕೊಳ್ಳುತ್ತಾರೆಂದು ವೈದ್ಯರು ತಿಳಿಸುತ್ತಿದ್ದಾರೆ. ಚೆನ್ನಾಗಿ ಬೇಯಿಸಿದ ಮೊಟ್ಟೆಯನ್ನು ಮಾತ್ರ ತಿನ್ನಬೇಕೆಂದು ಎಚ್ಚರಿಸಿದ್ದಾರೆ. ಇಲ್ಲದಿದ್ದರೆ ಅವುಗಳಲ್ಲಿ ಇರುವ ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ಜ್ವರ ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ. ಗೊತ್ತಾಯಿತಲ್ಲವೇ. ಇನ್ನು ಜ್ವರ ಬಂದಾಗ ಕೋಳಿ ಮೊಟ್ಟೆ ವಿಚಾರದಲ್ಲಿ ಸಂದೇಹ ಬೇಡ. ನಿರ್ಭಯವಾಗಿ ತಿನ್ನಿ. ಆದರೆ ಮೇಲೆ ಸೂಚಿಸಿದ ಎಚ್ಚರಿಕೆಗಳನ್ನು ಮಾತ್ರ ಕಡ್ಡಾಯವಾಗಿ ಪಾಲಿಸಿ..!

 

ಮೊಟ್ಟೆಯಲ್ಲಿ ಪ್ರೋಟೀನ್ ಅಧಿಕ. ಆದಕಾರಣ ಕೊಲೆಸ್ಟರಾಲ್ ಭಯದಿಂದ ಇದನ್ನು ಪಕ್ಕಕ್ಕಿಡುವುದು ಸರಿಯಲ್ಲ. ಕೊಬ್ಬಲ್ಲೂ ಒಳ್ಳೆಯ ಕೊಲೆಸ್ಟರಾಲ್, ಕೆಟ್ಟ ಕೊಲೆಸ್ಟರಾಲ್ ಎಂದು ಎರಡು ವಿಧಗಳಿವೆ. ನಿತ್ಯ ಎರಡು ಎಗ್ ವೈಟ್ ತಿಂದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಲಭ್ಯವಾಗುತ್ತವೆ. ಮಕ್ಕಳು, ಯುವಕರು ಯಾವುದೇ ಭಯವಿಲ್ಲದೆ ಮೊಟ್ಟೆಯನ್ನು ತಿನ್ನಬಹುದು. ವಯಸ್ಸು ಜಾಸ್ತಿಯಾಗುತ್ತಾ ಜೀರ್ಣಶಕ್ತಿ ಕುಂದುತ್ತದೆ. 40 ವರ್ಷ ದಾಟಿದವರಲ್ಲಿ ಬಿಪಿ, ಕೊಲೆಸ್ಟರಾಲ್ ಪ್ರಮಾಣ ಹೆಚ್ಚಾಗುವಂತಹ ಸಮಸ್ಯೆಗಳು ತಲೆಯೆತ್ತುತ್ತವೆ. ಆದಕಾರಣ ವಾರಕ್ಕೆ 3-4 ಮೊಟ್ಟೆ ತಿನ್ನಬಹುದು ಎಂದು ವೈದ್ಯರು ಹೇಳುತ್ತಿದ್ದಾರೆ.

 

Share this post

Post Comment