ಹಸಿ ಮೆಣಸಿನಕಾಯಿ ನಿತ್ಯ ತಿನ್ನಬೇಕು… ಯಾಕೆ ಗೊತ್ತಾ?

ಸಾಮಾನ್ಯವಾಗಿ ನಾವು ಪ್ರತಿ ದಿನ ಅಡುಗೆಗೆ ಹಸಿಮೆಣಸಿನಕಾಯಿ ಬಳಸುತ್ತಿರುತ್ತೇವೆ. ಬಹಳಷ್ಟು ಮಂದಿ ಸಾರಿಗೆ ಕೆಂಪು ಮೆಣಸಿನಕಾಯಿಗೆ ಬದಲಾಗಿ ಹಸಿ ಮೆಣಸಿನಕಾಯಿ ಬಳಸುತ್ತಿರುತ್ತಾರೆ. ಸಾರಿಗೆ ಹಸಿಮೆಣಸಿನಕಾಯಿ ಬಳಸುವುದರಿಂದ ಅಡುಗೆಗೆ ಒಳ್ಳೆಯ ರುಚಿ ಬರುತ್ತದೆ. ಆದರೆ ಹಸಿಮೆಣಸಿನಕಾಯಿ ತಿನ್ನುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಈಗ ಆ ಆರೋಗ್ಯ ಪ್ರಯೋಜನಗಳು ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ಹಸಿಮೆಣಸಿನಕಾಯಿಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ವಿಟಮಿನ್ ಎ, ಐರನ್, ಕಾಪರ್, ಪೊಟ್ಯಾಷಿಯಂ, ನಿಯಾಸಿನ್, ಫೈಬರ್, ಫೋಲೇಟ್‌ನಂತಹ ಪೋಷಕಾಂಶಗಳು ಇರುತ್ತವೆ. ಹಸಿಮೆಣಸಿನಕಾಯಿಅಲ್ಲಿ ಇರುವ ವಿಟಮಿನ್ ಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿ.

 

 

ಹಸಿಮೆಣಸಿನಕಾಯನ್ನು ಕಾಳಿನ ಜತೆಗೆ ಬೆರೆಸಿ ತಿನ್ನುವುದರಿಂದ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ. ಅಜೀರ್ಣ, ಗ್ಯಾಸ್, ಮಲಬದ್ಧತೆಯಂತಹ ಸಮಸ್ಯೆಗಳು ದೂರವಾಗುತ್ತವೆ. ಬಹಳಷ್ಟು ಮಂದಿ ಹಸಿ ಮೆಣಸಿನಕಾಯಿ ಉಪಯೋಗಿಸುವಾಗ ಅದರ ಬೀಜವನ್ನು ತೆಗೆಯುತ್ತಿರುತ್ತಾರೆ. ಅಂತಹವರು ಬೀಜ ತೆಗೆಯದೆ ಅದನ್ನು ಬಳಸಿ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

 

ಹಸಿಮೆಣಸಿನಕಾಯಿ ಬೀಜಗಳಲ್ಲಿ ಫೈಟೋ ಸ್ಟೆರಾಲ್ ಎಂಬ ಪದಾರ್ಥ ಹೇರಳವಾಗಿದ್ದು ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುವಲ್ಲಿ, ಕರುಳಿನಿಂದ ಕೊಲೆಸ್ಟರಾಲ್ ರಕ್ತಕ್ಕೆ ಸೇರದಂತೆ ಮಾಡುತ್ತದೆ.

 

ಹಸಿಮೆಣಸಿನಕಾಯಿಯಲ್ಲಿ ಕ್ಯಾಪ್ಸೆಯಿಸಿನ್ ಸಮೃದ್ಧವಾಗಿದ್ದು ಮೆಟಬಾಲಿಸಂ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದ ಕ್ಯಾಲರಿಗಳು ಶೀಘ್ರ ಕರಗಿ ತೂಕ ಕಡಿಮೆಯಾಗುವ ಅವಕಾಶಗಳು ಹೆಚ್ಚಾಗಿ ಇರುತ್ತವೆ.

 

ಹಸಿಮೆಣಸಿನ ಕಾಯಿಯಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಗಳು ಇವೆ. ಹಾಗಾಗಿ ಇವು ಚರ್ಮ ಸಮಸ್ಯೆಗಳನ್ನು ನಿವಾರಿಸುತ್ತವೆ.

 

 

Share this post

Post Comment