ಈ ಬಾಲಕನ ಕುದುರೆ ಸವಾರಿ ನೋಡಿದರೆ ಮೈ ನವಿರೇಳುತ್ತದೆ, ನಿಜವಾದ ಮಗಧೀರ ಈತ!

ಇದು ಅಂತಿಂತಹ ರೇಸ್ ಅಲ್ಲ. ಹಾಗಂತ ರೇಸ್ ಕೋರ್ಸ್‌ನಲ್ಲಿ ನಡೆದ ಓಟವಂತೂ ಅಲ್ಲವೇ. ರಸ್ತೆ ನಡುವೆ ನಡೆದ ಕುದುರೆ ರೇಸ್ ಇದು. ಕುದುರೆ ಮತ್ತು ಒಂಬತ್ತು ವರ್ಷದ ಬಾಲಕನ ಸಾಹಸ ನೋಡಿದರೆ ಮೈ ನವಿರೇಳುತ್ತದೆ. ನಿಜವಾದ ಮಗಧೀರ ಈತ ಎನ್ನುತ್ತೀರ.

 

ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ 9 ವರ್ಷದ ಹುಡುಗನ ಕುದುರೆ ಸವಾರಿ ವೀಡಿಯೋವೊಂದು ವೈರಲ್ ಆಗಿದೆ. ಈ ವೀಡಿಯೋದಲ್ಲಿ ಬಾಲಕನೊಬ್ಬ ಕುದುರೆ ಸವಾರಿ ಮಾಡುತ್ತಿರುವುದು ಕಂಡುಬರುತ್ತದೆ.

 

 

ರೇಸ್‌ನಲ್ಲಿ ಎಲ್ಲರಿಗಿಂತ ಮುಂದಿದ್ದ ಬಾಲಕ, ಇದ್ದಕ್ಕಿದ್ದಂತೆ ಕುದುರೆ ಸಮೇತ ಕೆಳಕ್ಕೆ ಬೀಳುತ್ತಾನೆ. ಕುದುರೆ ಎದ್ದು ಮೊದಲಿನ ವೇಗದಲ್ಲಿ ಓಡಲು ಆರಂಭಿಸುತ್ತದೆ. ಆದರೆ ಬಾಲಕ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಬೈಕೊಂದನ್ನೇರಿ ಆತ ತನ್ನ ಕುದುರೆ ಬಳಿ ತಲುಪುತ್ತಾನೆ. ಬಳಿಕ ಬೈಕ್‌ನಿಂದ ಹಾರಿ ಕುದುರೆಯನ್ನೇರಲು ಯಶಸ್ವಿಯಾಗುತ್ತಾನೆ.

 

watch video :

 

 

ಇದು ಯಾವುದೋ ಸಿನಿಮಾದ ದೃಶ್ಯವಲ್ಲ. ಬದಲಿಗೆ ಇದು ಸತ್ಯವಾಗಿ ನಡೆದ ಘಟನೆ. ಅದು ಕೂಡ ಕರ್ನಾಟಕದಲ್ಲಿ. ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದಲ್ಲಿ. ಗ್ರಾಮ ದೇವತೆಗಳಾದ ಮಲಕಾರಿ ಸಿದ್ದೇಶ್ವರ ಮತ್ತು ಅರಣ್ಯ ಸಿದ್ಧೇಶ್ವರ ಜಾತ್ರೆ ನಿಮಿತ್ತ ಪ್ರತಿ ವರ್ಷ ಅಲ್ಲಿ ಕುದುರೆ ಸವಾರಿಯನ್ನು ನಡೆಸಲಾಗುತ್ತಿದೆ. ಈ ಬಾರಿಯ ರೇಸ್‌ನಲ್ಲಿ ಯುವಕರ ಜತೆಗೆ ಗೋಕಾಕ್ ತಾಲೂಕಿನ ವಡ್ಡರಹಳ್ಳಿ ಗ್ರಾಮದ ನಿವಾಸಿಯಾದ ಲೋಕೇಶ್ ಸತ್ತಿಗೇರಿ ಎಂಬ ಬಾಲಕ ಕೂಡ ಪಾಲ್ಗೊಂಡಿದ್ದು ಸಿನಿಮೀಯ ಶೈಲಿಯಲ್ಲಿ ರೇಸ್ ಗೆದ್ದಿದ್ದಾನೆ.

 

ಕುದುರೆಯ ಮುಂದೆ ಬೈಕ್‌ನಲ್ಲಿ ಹೋಗುತ್ತಿದ್ದವರು ಈ ಎಲ್ಲ ದೃಶ್ಯಾವಳಿಯನ್ನು ಸೆರೆ ಹಿಡಿದಿದ್ದಾರೆ. ಪೋರನ ಸಾಹಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದ್ದು ನೆಟ್ಟಿಗರು ಬೆಳಗಾವಿಯ ಮಗಧೀರ ಎಂದು ಹೊಗಳುತ್ತಿದ್ದಾರೆ.

 

Filed in: OMG

Share this post

Post Comment