ಬಾಲಿವುಡ್ ಫಿಲಂ ಮೇಕರ್ ಕರಣ್ ಜೋಹರ್ ನಿಜವಾಗಿಯೂ ಸಲಿಂಗ ಕಾಮಿಯೇ?!
ಬಹಳಷ್ಟು ಮಂದಿ ಆಗಾಗ ಕರಣ್ ಜೋಹರ್ ಬಗ್ಗೆ ಮಾತನಾಡಬೇಕಾದರೆ ಅವರೊಬ್ಬ ಸಲಿಂಗ ಕಾಮಿ ಎನ್ನುತ್ತಿತ್ತಾರೆ. ಈ ಬಗ್ಗೆ ಸ್ವತಃ ಅವರು ಮಾತನಾಡಿದ್ದು ತಮ್ಮ ಜೀವನದ ಹಲವಾರು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಖ್ಯಾತ ನಿರ್ಮಾಪಕ ಅರ್ಬಾಜ್ ಖಾನ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ವೆಬ್ ಶೋ 'ಪಿಂಚ್' ಎಂಬ ಕಾರ್ಯಕ್ರಮದಲ್ಲಿ ಕರಣ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅವರು ತನ್ನಲ್ಲಿ ಓರ್ವ ಮಹಿಳೆ ಇದ್ದು ಅದೇ ನನ್ನ ಶಕ್ತಿ ಎಂದಿದ್ದಾರೆ.
ಕರಣ್ ಅವರು ಸಲಿಂಗ ಕಾಮಿಯೇ ಎಂಬ ಕಾಮೆಂಟಿಗೆ ಉತ್ತರಿಸಿರುವ ಅವರು, ಇಲ್ಲ, ನಾನು ಹುಡುಗನಾಗಿಯೇ ಜನಿಸಿದೆ. ಅದಕ್ಕಾಗಿ ಹೆಮ್ಮೆ ಇದೆ. ಆದರೆ ನನ್ನಲ್ಲಿ ಒಬ್ಬ ಮಹಿಳೆ ಸಹ ಇದ್ದಾಳೆ. ಅದೇ ನನ್ನನ್ನು ಪುರುಷನಾಗಿ ಇನ್ನಷ್ಟು ಬಲಶಾಲಿಯನ್ನಾಗಿ ಮಾಡುತ್ತಿದೆ" ಎಂದಿದ್ದಾರೆ.
ಇದುವರೆಗೆ ನನ್ನ ಮೇಲೆ ಬರುತ್ತಿರುವ ಈ ರೀತಿಯ ಕಾಮೆಂಟ್ಸ್ ನೋಡಿ ತುಂಬಾ ನೋವಾಗುತ್ತಿತ್ತು. ಆದರೆ ಈಗ ಅವೆಲ್ಲಾ ನನಗೆ ತುಂಬಾ ತಮಾಷೆಯಾಗಿ ಕಾಣಿಸುತ್ತವೆ. ನನ್ನ ಬಗ್ಗೆ ಮಾತನಾಡುವ ಹಕ್ಕು ನೆಟ್ಟಿಗರಿಗೆ ಇರುತ್ತದೆ. ಆದರೆ ನನ್ನಲ್ಲಿ ಏನೋ ಲೋಪ ಇದೆ, ಖಾಯಿಲೆ ಇದೆ ಎಂಬಂತೆ ಸುಳ್ಳು ಸುದ್ದಿ ಹಬ್ಬಿಸಬೇಡಿ. ಆ ರೀತಿ ಮಾತನಾಡುವವರ ಬಾಯಿ ಮುಚ್ಚಿಸುತ್ತೇನೆ ಎಂದಿದ್ದಾರೆ.
ನನಗೆ ನನ್ನ ಬಗ್ಗೆಗಿಂತ ನನ್ನ ಮಕ್ಕಳ ಬಗ್ಗೆ ಯಾರಾದರೂ ಕಾಮೆಂಟ್ ಮಾಡಿದ ವಿಪರೀತ ಕೋಪ ಬರುತ್ತದೆ. ಮಕ್ಕಳ ವಿಚಾರದಲ್ಲಿ ನಾನು ತುಂಬಾ ಸೂಕ್ಷ್ಮವಾಗಿ ಇರುತ್ತೇನೆ. ಯಾರಾದರೂ ಅವರ ಬಗ್ಗೆ ಕಾಮೆಂಟ್ ಮಾಡಿದರೆ ಸಹಿಸಲ್ಲ ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ ಕರಣ್ ಜೋಹರ್.

Post a Comment