Header Ads

test

ರಶ್ಮಿಕಾ-ವಿಜಯ ದೇವರಕೊಂಡ ಲಿಪ್‌ಲಾಕ್‌ಗೆ ಭಾರಿ ಟೀಕೆ, ಅಭಿಮಾನಿಗಳು ಗರಂ

ದಕ್ಷಿಣ ಭಾರತದ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ಸೌತ್ ಇಂಡಿಯನ್ ಮೋಸ್ಟ್‌ ಸೆನ್ಸೇಷನಲ್ ಸ್ಟಾರ್ ನಟ ವಿಜಯ್ ದೇವರಕೊಂಡ ಜೋಡಿಯ ಮುಂಬರುವ ಚಿತ್ರವಾದ 'ಡಿಯರ್ ಕಾಮ್ರೆಡ್' ತನ್ನ ಅಧಿಕೃತ ಟೀಸರ್ ಬಿಡುಗಡೆ ಮಾಡಿದೆ. 'ಡಿಯರ್ ಕಾಮ್ರೆಡ್' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಜಸ್ಟ್ 24 ಗಂಟೆಗಳ ಮೊದಲೇ ಈ ಟೀಸರ್ ಇಡೀ ಇಂಡಿಯಾದ ಗಮನವನ್ನು ತನ್ನ ಕಡೆಗೆ ಸೆಳೆದುಕೊಂಡಿದೆ.


ಆದರೆ, ತುಂಬಾ ಮಂದಿ ಈ ಟೀಸರ್ ನೋಡಿ ಟೀಕೆ ಮಾಡಿದ್ದಾರೆ. ನಾಯಕಿ ಜೊತೆ ಲಿಪ್-ಲಾಕ್ ಮಾಡಿದರೆ ಮಾತ್ರ ನಿಮ್ಮ ಚಿತ್ರ ಚೆನ್ನಾಗಿದೆ ಅಂದುಕೊಳ್ಳಬೇಕೇ? ಅದಿಲ್ಲದೇ ನಿಮ್ಮ ಸಿನಿಮಾ ಓಡಲು ಸಾಧ್ಯವಿಲ್ಲವೇ? ಅದೇ ನಟಿ ರಶ್ಮಿಕಾ ಜೊತೆಗೆ ಅದೆಷ್ಟು ಸಾರಿ ಲಿಪ್‌ಲಾಕ್ ಮಾಡುತ್ತೀರಿ" ಎಂದು ಹಲವು ಜನರು ಹಲವು ರೀತಿಗಳಲ್ಲಿ ಈ ಟೀಸರ್ ನೋಡಿ ವ್ಯಂಗ್ಯವಾಡಿದ್ದಾರೆ. ಆದರೆ, ಚಿತ್ರತಂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಸದ್ಯಕ್ಕೆ ಸುಮ್ಮನಿದೆ.

ಒಂದು ನಿಮಿಷ, ಏಳು ಸೆಕೆಂಡ್‌ಗಳ ಈ ಟೀಸರ್ ನಾಯಕ ವಿಜಯ್ ದೇವರಕೊಂಡ ಅವರ ಪಂಚಿಂಗ್ ಫೈಟ್ಸ್ ಮತ್ತು ನಾಯಕಿ ರಶ್ಮಿಕಾ ಮಂದಣ್ಣ ಜೊತೆಗಿನ ಲಿಪ್-ಲಾಕ್‌ ದೃಶ್ಯಕ್ಕೆ ಹೆಚ್ಚು ಸೀಮಿತವಾಗಿದೆ ಎನ್ನಬಹುದು. ಈ ಟೀಸರ್ ನೋಡಿದರೆ, ಮುಂಬರುವ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಚಿತ್ರವು ಲವ್-ರೊಮ್ಯಾಂಟಿಕ್ ಮತ್ತು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿರುಬಹುದು ಎಂದು ಎನಿಸುವಂತಿದೆ.

https://www.youtube.com/watch?v=Ts59rN-dGSA

ಬಿಡುಗಡೆಯಾಗಿರುವ ತಮ್ಮ ಚಿತ್ರದ ಈ ಟೀಸರ್ ಬಗ್ಗೆ ನಟ ವಿಜಯ್ ದೇವರಕೊಂಡ, ತಮ್ಮ ಟ್ವೀಟರ್ ಪೇಜ್‌ನಲ್ಲಿ "Dear Comrades,Fight for what you love.You must.Your man.." ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿ ನಟ ವಿಜಯ್ ಅವರು "ನೀವು ಇಷ್ಟ ಪಡುವ ಸಂಗತಿಗಾಗಿ ಹೋರಾಡಿ' ಎಂದು ಕರೆ ಕೊಟ್ಟಿದ್ದಾರೆ. ಅಭಿಮಾನಿಗಳಿಗೆ ವಿಜಯ್ ದೇವರಕೊಂಡ ನೀಡಿರುವ ಈ ಮೆಸೇಜ್ ಅದೆಷ್ಟು ಜನರನ್ನು ಮನಸ್ಸನ್ನು ತಲುಪಿ ಅವರನ್ನುಪ್ರೇರೇಪಿಸಿ ಅವರ ಜೀವನದಲ್ಲಿ ಬದಲಾವಣೆ ತರಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕು.

No comments