Header Ads

test

ಪ್ರಿನ್ಸ್ ಮಹೇಶ್ ಬಾಬುಗೆ ’ಸಾರಿ’ ಅಂದ್ರು ರಿಯಲ್ ಸ್ಟಾರ್ ಉಪೇಂದ್ರ!

ಟಾಲಿವುಡ್‌ನಲ್ಲಿ ಅತಿ ಹೆಚ್ಚು ಫ್ಯಾನ್ಸ್, ಬಾಕ್ಸ್ ಆಫೀಸ್ ಹಿಟ್ಸ್, ಅದ್ದೂರಿ ಸಿನಿಮಾಗಳಿಗೆ ಹೆಸರುವಾಗಿರುವ ನಟ ಮಹೇಶ್ ಬಾಬು. ವರ್ಷಕ್ಕೆ ಒಂದೇ ಒಂದು ಸಿನಿಮಾ ಮಾಡುವ ಟಾಲಿವುಡ್‌ನ ಕೆಲವೇ ಕೆಲವು ಹೀರೋಗಳಲ್ಲಿ ಮಹೇಶ್ ಬಾಬು ಸಹ ಒಬ್ಬರು. ಇವರ ಸಿನಿಮಾಗಳು ಬಾಕ್ಸ್ ಆಫೀಸಲ್ಲಿ ಸೋತದ್ದು ತುಂಬ ಕಡಿಮೆ ಎಂದೇ ಹೇಳಬೇಕು. ಇಂತಹ ನಟನ ಸಿನಿಮಾದಲ್ಲಿ ಚಾನ್ಸ್ ಸಿಕ್ಕಿದರೆ ಸಾಕು ಎಂದು ಕಾಯುವ ನಟರೇ ಇರುತ್ತಾರೆ. ಆದರೆ ನಮ್ಮ ರಿಯಲ್ ಸ್ಟಾರ್ ಉಪೇಂದ್ರ 'ಸಾರಿ' ಮಹೇಶ್ ಬಾಬು ಅವರೇ ನಿಮ್ಮ ಸಿನಿಮಾದಲ್ಲಿ ನಟಿಸಲು ಆಗುತ್ತಿಲ್ಲ ಎಂದಿರುವುದು ಈಗ ಚರ್ಚಾಸ್ಪದ ವಿಷಯವಾಗಿದೆ.


ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಸಿನಿಮಾ ಮೇ ತಿಂಗಳಲ್ಲಿ ಸೆಟ್ಟೇರಲಿದೆ. ಈಗಾಗಲೆ ಮಹೇಶ್ ಬಾಬು ಅವರ ಮಹರ್ಷಿ ಸಿನಿಮಾ ತೆರೆ ಕಾಣಲು ಸಿದ್ಧವಾಗುತ್ತಿದೆ. ಈಗ ಮುಂದಿನ ಚಿತ್ರದ ಬಗ್ಗೆ ತಾರಾಗಣದ ಆಯ್ಕೆಯಲ್ಲಿದೆ ಚಿತ್ರತಂಡ. ಹೊಸ ಚಿತ್ರವನ್ನು ಅನಿಲ್ ರಾವಿಪೂಡಿ ಎಂಬುವವರು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರಕ್ಕಾಗಿ ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ಕರೆತರಲು ನಿರ್ದೇಶಕರು ಮುಂದಾಗಿದ್ದರು, ಮಹೇಶ್ ಬಾಬು ಸಹ ಓಕೆ ಹೇಳಿದ್ದರು.

ಈ ಹಿಂದೆ ತೆಲುಗಿನಲ್ಲಿ ಬಂದಿದ್ದ ಸನ್ ಆಫ್ ಸತ್ಯಮೂರ್ತಿ ಸಿನಿಮಾದಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದರು ಉಪೇಂದ್ರ. ಬಳಿಕ ಯಾವುದೇ ತೆಲುಗು ಸಿನಿಮಾ ಒಪ್ಪಿಕೊಳ್ಳಲಿಲ್ಲ. ಈ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎಂದುಕೊಂಡಿದ್ದರು ಅನಿಲ್ ರಾವಿಪೂಡಿ. ಮಹೇಶ್ ಬಾಬು ಜತೆಗೆ ಸಿನಿಮಾ ಎಂದ ಕೂಡಲೆ ಹರ್ಷ ವ್ಯಕ್ತಪಡಿಸಿದ ಉಪೇಂದ್ರ ಕಡೆಗೆ ಡೇಟ್ ಹೊಂದಾಣಿಕೆಯಾಗದೆ ನೋ ಎಂದಿದ್ದಾರೆ. ಈಗಾಗಲೆ ಕಮಿಟ್ ಆಗಿರುವ ಸಿನಿಮಾಗಳ ಕಾರಣ ತಮ್ಮ ಚಿತ್ರದಲ್ಲಿ ಅಭಿನಯಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಆದರೆ ಉಪೇಂದ್ರ ನೋ ಹೇಳಿರುವ ಸಂಗತಿಯನ್ನು ನಿರ್ದೇಶಕ ಅನಿಲ್ ಎಲ್ಲೂ ಬಾಯ್ಬಿಟ್ಟಿಲ್ಲ. ಆದರೆ ಉಪೇಂದ್ರ ಇತ್ತೀಚೆಗೆ ಮಾಧ್ಯಮವೊಂದರಲ್ಲಿ ಈ ಬಗ್ಗೆ ಕ್ಲಾರಿಟಿ ನೀಡಿದ್ದಾರೆ. ತೆಲುಗು ನಟ ಮಹೇಶ್ ಬಾಬು ಸಿನಿಮಾದಲ್ಲಿ ಅಭಿನಯಿಸಲು ನನ್ನನ್ನು ಕೇಳಿದ್ದರು. ಆದರೆ ಡೇಟ್ಸ್ ಸಮಸ್ಯೆಯ ಕಾರಣ ನಟಿಸುತ್ತಿಲ್ಲ. ಈ ವಿಚಾರವಾಗಿ ಮಹೇಶ್ ಬಾಬು ಅವರಲ್ಲಿ ಸಾರಿ ಕೇಳುತ್ತಿದ್ದೇನೆ ಎಂದಿದ್ದಾರೆ. ಒಬ್ಬ ದೊಡ್ಡ ನಟನಾಗಿದ್ದುಕೊಂಡು ಮಹೇಶ್ ಬಾಬುಗೆ ಸಾಮಾನ್ಯರಂತೆ ಉಪ್ಪಿ ಸಾರಿ ಕೇಳಿರುವುದು ಈಗ ಚರ್ಚಗೆ ಗ್ರಾಸವಾಗಿದೆ.

No comments