Header Ads

test

ಟಿಕ್‌ಟಾಕ್ ಆ ಮಹಿಳಾ ಎಸ್‍ಐ ಮನೆ ಮುಳುಗಿಸಿತು.. ಹಾಗಾಗಿಯೇ ಭಾರತದಲ್ಲಿ ಇದನ್ನು ಬ್ಯಾನ್ ಮಾಡಬೇಕು

ಕರ್ತವ್ಯದ ನಿರ್ವಹಣೆಯಲ್ಲಿ ಯಾರು ಹೇಗೇ ಇದ್ದರೂ ಆರ್ಮಿ ಮತ್ತು ಪೊಲೀಸ್‌ನವರು ಸ್ವಲ್ಪ ಮೈಮರೆತರೂ ತುಂಬಾ ದೊಡ್ಡ ನಷ್ಟ ಸಂಭವಿಸುತ್ತದೆ. ಹಾಗಾಗಿ ಡ್ಯೂಟಿಯಲ್ಲಿ ಇರುವ ಸಮಯದಲ್ಲಿ ಪ್ರತಿಯೊಬ್ಬರೂ ಸಹ ತುಂಬಾ ಎಚ್ಚರದಿಂದ ಇರಬೇಕಾಗುತ್ತದೆ. ಕರ್ತವ್ಯ ನಿರ್ವಹಣೆಯಲ್ಲಿ ಸಣ್ಣ ತಪ್ಪು ಮಾಡಿದರೂ ಸಹ ಅವರಿಗೆ ಕಠಿಣ ಶಿಕ್ಷೆಯನ್ನು ಉನ್ನತಾಧಿಕಾರಿಗಳು ನೀಡುತ್ತಿರುತ್ತಾರೆ. ಇತ್ತೀಚೆಗೆ ತಮಿಳುನಾಡು ಮೂಲದ ಇಬ್ಬರು ಎಸ್‌ಐಗಳನ್ನು ಈ ರೀತಿ ಮಾಡಿದ ಕಾರಣ ಸದ್ಯಕ್ಕೆ ರಾಜ್ಯದಾದ್ಯಂತ ಅದರ ಬಗ್ಗೆ ಭಾರಿ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಅವರು ಮಾಡಿದ ಕೆಲಸಕ್ಕೆ ಕೆಲಸದಿಂದ ಸಸ್ಪೆಂಡ್ ಮಾಡಬೇಕು ಎಂದು ಬಹಳಷ್ಟು ಮಂದಿ ಬಯಸುತ್ತಿದ್ದಾರೆ. ಕೆಲವರು ಮಾತ್ರ ಮೊದಲ ತಪ್ಪಾದ ಕಾರಣ ಅವರನ್ನು ಕ್ಷಮಿಸಿ ಬಿಡಿ ಎನ್ನುತ್ತಿದ್ದಾರೆ.


ಆ ಇಬ್ಬರು ಎಸ್‌ಐಗಳು ಮಾಡಿದ ಆ ತಪ್ಪೇನು ಎಂದು ಗೊತ್ತಾದರೆ ನೀವು ಸಹ ಶಾಕ್ ಆಗ್ತೀರ. ಅದೇನೆಂದರೆ ಇಬ್ಬರೂ ಸೇರಿ ಟಿಕ್ ಟಾಕ್‍ನಲ್ಲಿ ವಿಡಿಯೋ ಮಾಡಿದ್ದು. ಆ ಇಬ್ಬರು ಎಸ್‍ಐಗಳಲ್ಲಿ ಒಬ್ಬರು ಮಹಿಳಾ ಎಸ್‍ಐ ಸಹ ಇರುವ ಕಾರಣ ವಿಷಯ ಇನ್ನಷ್ಟು ಗಂಭೀರವಾಯಿತು. ವಿವರಗಳನ್ನು ನೋಡಿದರೆ ತಮಿಳುನಾಡು ಮಧುರೈ ವ್ಯಾಪ್ತಿಯಲ್ಲಿನ ಎಸ್‍ಐ ಆಗಿ ಕೆಲಸ ಮಾಡುತ್ತಿರುವ ಇವರು ಇತ್ತೀಚೆಗೆ ಕೆಲಸದ ನಿಮಿತ್ತ ಭೇಟಿಯಾದರು. ಇಬ್ಬರಿಗೂ ಮೊದಲೇ ಪರಿಚಯ ಇತ್ತು. ಇಬ್ಬರ ನಡುವೆ ಒಳ್ಳೆಯ ಸ್ನೇಹ ಸಂಬಂಧ ಇತ್ತು. ಹಾಗಾಗಿ ಅವರಿಬ್ಬರೂ ಟ್ರೆಂಡ್ ಆಗುತ್ತಿರುವ ಟಿಕ್‍ಟಾಕ್‌ನಲ್ಲಿ ಒಂದು ವಿಡಿಯೋ ಮಾಡಬೇಕು ಎಂದುಕೊಂಡರು. ತಮಿಳು ಹಾಡು ಕಾದಲ್ ಮಗರಾಣಿ ಹಾಡಿಗೆ ಅವರಿಬ್ಬರೂ ಡ್ಯಾನ್ಸ್ ಮಾಡಿದರು. ಯೂನಿಫಾರಂ ಇದ್ದೂ, ಅದು ಸಹ ಡ್ಯೂಟಿಯಲ್ಲಿ ಇದ್ದು ಇಂತಹ ಹಾಡಿಗೆ ಡ್ಯಾನ್ಸ್ ಮಾಡಿದ್ದು ಏನು ಎಂದು ಉನ್ನತಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾದರು.

ಆ ಇಬ್ಬರೂ ಎಸ್‍ಐಗಳು ಮಾಡಿದ ವಿಡಿಯೋ ಭಾರತದಲ್ಲೇ ಟಾಪ್ ಟ್ರೆಂಡಿಂಗ್ ಆಗಿದೆ. ಇದರಿಂದ ಆ ವಿಡಿಯೋ ಬಗ್ಗೆ ತೀವ್ರ ಪ್ರಮಾಣದಲ್ಲಿ ರಾಜಕೀಯ ಮುಖಂಡರೂ ಸಹ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದಾಗಲೆ ತಮಿಳುನಾಡಿನಲ್ಲಿ ಟಿಕ್‍ಟಾಕ್ ಬ್ಯಾನ್ ಮಾಡಬೇಕು ಎಂದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಕೆಲಸ ಬಿಟ್ಟು ಇಬ್ಬರೂ ಎಸ್‍ಐಗಳು ಈ ರೀತಿ ಮಾಡಿದ ಕಾರಣ ಪ್ರತಿಭಟನೆ ಇನ್ನಷ್ಟು ತೀವ್ರವಾಯಿತು.

ತಮಿಳುನಾಡು ಸರಕಾರ ಇತ್ತೀಚೆಗೆ ವಿಧಾನಸಭೆಯಲ್ಲಿ ಟಿಕ್‍ಟಾಕ್ ಬ್ಯಾನ್ ಮಾಡಬೇಕು ಎಂದು ನಿರ್ಣಯಿಸಿತು. ಕೇಂದ್ರದ ಮೇಲೆ ಒತ್ತಡ ತರಲು ಪ್ರಯತ್ನಿಸುತ್ತಿರುವ ಸಂಗತಿ ಗೊತ್ತೇ ಇದೆ. ಕೇಂದ್ರ ಸರಕಾರದ ಮೇಲೆ ತಮಿಳುನಾಡು ಸರಕಾರ ಒಂದು ಕಡೆ ಒತ್ತಡ ತರುತ್ತಿದ್ದರೆ ಇನ್ನೊಂದು ಕಡೆ ಈ ರೀತಿ ಎಸ್‍ಐಗಳು ಟಿಕ್‍ಟಾಕ್ ಮಾಡುತ್ತಿದ್ದರೆ ಕೋಪ ಬರಲ್ಲವೇ? ಇಬ್ಬರನ್ನೂ ತಾತ್ಕಾಲಿಕವಾಗಿ ಸಸ್ಪೆಂಡ್ ಮಾಡಿದ್ದಾಗಿ ತಿಳಿಸಿದ್ದಾರೆ. ಉನ್ನತಾಧಿಕಾರಿಗಳು ಅವರನ್ನು ಪ್ರಶ್ನಿಸುತ್ತಿದ್ದಾರೆ. ಆ ಇಬ್ಬರು ಎಸ್‍ಐಗಳ ಉದ್ಯೋಗ ಪರಿಸ್ಥಿತಿ ಏನು ಎಂಬುದು ವಾರದಲ್ಲಿ ಗೊತ್ತಾಗುವ ಅವಕಾಶ ಇದೆ.

No comments