Header Ads

test

ಯುದ್ಧದಲ್ಲಿ ವೀರ ಮರಣ ಅಪ್ಪಿದರೂ ಸಹ ಆ ಊರಿಗೆ ಬೆಳಕು ತಂದ ಯೋಧ.! ಏನಾಯಿತು ಎಂದು ಗೊತ್ತಾದರೆ ಕಣ್ಣುಮಂಜಾಗುತ್ತದೆ.!

ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧ ಪಂಕಜ್ ಕುಮಾರ್ ತ್ರಿಪಾಠಿ ತಾನು ಅಸ್ತಮಿಸಿ ಸಹ ತನ್ನ ಊರಿಗೆ ಬೆಳಕು ತುಂಬಿದ್ದಾರೆ. ಉತ್ತರ ಪ್ರದೇಶ-ನೇಪಾಳ ಗಡಿಯಲ್ಲಿನ ಕುಗ್ರಾಮವಾದ ಮಹಾರಾಜ್ ಗಂಜ್‌ನಲ್ಲಿ ಸರಕಾರದ ಸಹಕಾರ ಹೇಳಿಕೊಳ್ಳುವಂತಿಲ್ಲ. ಈ ಗ್ರಾಮ ಸರಕಾರ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ.


ಪಂಕಜ್ ಕುಮಾರ್ ಸ್ವಂತ ಊರಿನಲ್ಲಿ ಪ್ರಾಥಮಿಕ ಪಾಠಶಾಲೆ ಅದೆಷ್ಟೋ ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದೆ. ಗ್ರಾಮಸ್ಥರು ಎಷ್ಟೇ ವಿನಂತಿಸಿಕೊಂಡರೂ ಅಧಿಕಾರಿಗಳು ಕಿವಿಗೆ ಹಾಕಿಕೊಳ್ಳಲಿಲ್ಲ. ಪಂಕಜ್ ಕುಮಾರ್ ತ್ರಿಪಾಠಿ ವೀರ ಮರಣದಿಂದ ಯೂಪಿ ಮುಖ್ಯಮಂತ್ರಿ ಆದಿತ್ಯನಾಥ್ ಸೇರಿದಂತೆ ಉನ್ನತಾಧಿಕಾರಿಗಳು ಆ ಊರಿಗೆ ಬಂದ ಕಾರಣ, ಒಮ್ಮೆಲೆ ಆ ಊರಿನ ಮೇಲೆ ಅಧಿಕಾರಿಗಳ ದೃಷ್ಟಿ ಬಿತ್ತು. ಪಾಠಶಾಲೆಯ ಪುನರ್ ನಿರ್ಮಾಣ ಕೆಲಸಗಳು ಚುರುಕಾಗಿ ಆರಂಭವಾದವು. ಪಾಠಶಾಲೆ ಹೆಸರನ್ನೂ ಸಹ ಪಂಕಜ್ ತ್ರಿಪಾಠಿ ಎಂದು ಬದಲಾಯಿಸಿದರು. ಅಷ್ಟೇ ಅಲ್ಲ ರಸ್ತೆ ರಿಪೇರಿ ಕೆಲಸಗಳೂ ಆರಂಭವಾಗಿವೆ. ಒಟ್ಟಾರೆ ಊರಿಗೆ ಹೊಸ ಕಳೆ ತುಂಬಿಕೊಂಡಿದೆ.

ಆದಿತ್ಯನಾಥ್ ಭಾನುವಾರ ಪಂಕಜ್‍ ಕುಮಾರ್ ಕುಟುಂಬಿಕರನ್ನು ಮಾತನಾಡಿದ್ದಾರೆ. ಪಂಕಜ್ ಚಿತ್ರಪಟಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಆ ಊರಿನಲ್ಲಿ ಪರಿಸ್ಥಿತಿ ಗಮನಿಸಿದ ಆದಿತ್ಯನಾಥ್ ಸರಕಾರ ಇನ್ನಷ್ಟು ಸೌಲಭ್ಯಗಳನ್ನು ಆ ಊರಿಗೆ ಕಲ್ಪಿಸುವುದಾಗಿ ತಿಳಿಸಿದ್ದಾರೆ.

ಒಟ್ಟಾರೆ ಒಬ್ಬ ವೀರ ಯೋಧ ಹುತಾತ್ಮನಾದ ಬಳಿಕ ಆ ಊರಿಗೆ ಹೊಸ ಕಳೆ ಬಂದಿದೆ. ಈಗ ಆ ಊರಿನ ಹೆಸರು ಎಲ್ಲೆಲ್ಲೂ ರಾರಾಜಿಸುವಂತಾಗಿದೆ. ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರ ದಾಳಿಯಲ್ಲಿ 40ಕ್ಕೂ ಹೆಚ್ಚು ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದು ಗೊತ್ತೇ ಇದೆ. ಈ ಕೃತ್ಯ ತಮ್ಮದೇ ಎಂದು ಜೈಷೇ ಮೊಹಮ್ಮದ್ ಒಪ್ಪಿಕೊಂಡಿದೆ. ಆದರೆ ಪಾಕಿಸ್ತಾನ ಮಾತ್ರ ಸೂಕ್ತ ಸಾಕ್ಷಾಧಾರಗಳನ್ನು ತೋರಿಸಿ, ಸುಖಾ ಸುಮ್ಮನೆ ಆರೋಪ ಮಾಡಿದರೆ ಸಹಿಸಲ್ಲ ಎಂದಿದೆ.

ಈ ಮೊದಲು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಹೇಳಿಕೆಯಲ್ಲಿ ಯಾವುದೇ ಸಾಕ್ಷ್ಮಧಾರಗಳಿಲ್ಲದೆ ಪಾಕಿಸ್ತಾನವನ್ನು ದೂರಬಾರದು. ಭಾರತದ ಜತೆಗೆ ಯಾವುದೇ ಶಾಂತಿ ಮಾತುಕತೆಗೆ ಸಿದ್ಧ ಎಂಬ ಮಾತುಗಳನ್ನಾಡಿದ್ದರು. ನಮಗೆ ಯಾವುದೇ ಪುರಾವೆಗಳು ದೊರಕಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬುದನ್ನು ಇಮ್ರಾನ್ ಬೊಟ್ಟು ಮಾಡಿದ್ದರು.

No comments