ಹೃದಯ ವಿದ್ರಾವಕ ಘಟನೆ.. ಪತ್ನಿಯನ್ನು ಬದುಕಿಸಲು ಪತಿ ಪಟ್ಟ ಪಾಡು ಬೇಡಪ್ಪಾ ಬೇಡ.
ರಸ್ತೆ ಅಪಘಾತದಲ್ಲಿ ಮೃತಪಟ್ಟ ಪತ್ನಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ ಗಂಡ... ಕೊನೆಯ ಉಸಿರಿನವರೆಗೂ ಜತೆಯಾಗಿಯೇ ಇರುತ್ತೀನಿ ಎಂದ ತನ್ನ ಪತ್ನಿಗೆ ಹೇಗಾದರೂ ಮಾಡಿ ಪ್ರಾಣ ತುಂಬುತ್ತೀನಿ ಎಂದು ಬಾಯಿ ಮೂಲಕ ಆಕ್ಸಿಜನ್ ನೀಡುವ ಪ್ರಯತ್ನ ಮಾಡಿದ...ಈ ಹೃದಯ ವಿದ್ರಾವಕ ಈ ಘಟನೆ ಆಂಧ್ರಪ್ರದೇಶದ ಖಮ್ಮಂ ಜಿಲ್ಲೆ ಪೆನುಬಲ್ಲಿ ಮಂಡಲ ಪಂಚಾಯಿತಿಯಲ್ಲಿ ನಡೆದಿದೆ.
ಮಂಡಾಲಪಾಡು ಎಂಬ ಗ್ರಾಮದ ಬಳಿ ವ್ಯಾನ್ ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದು ಅಪಘಾತಕ್ಕೆ ಗುರಿಯಾಯಿತು. ಈ ಘಟನೆಯಲ್ಲಿ ಭೂಕ್ಯಾ ರಾಮುಲಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ... ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಗಂಡ ತನ್ನ ಪತ್ನಿ ರಾಮುಲಮ್ಮನ್ನು ಉಳಿಸಿಕೊಳ್ಳಲು ಪಟ್ಟ ಪಾಡು ಅಲ್ಲಿದ್ದವರ ಹೃದಯ ಕಲಕುವಂತಿತ್ತು... ಮೃತಪಟ್ಟ ಪತ್ನಿ ಬಾಯಗೆ ಬಾಯಿಟ್ಟು ಊದುತ್ತಾ ಮಾಡಿದ ಪ್ರಯತ್ನ ಅಲ್ಲಿದ್ದವರ ಕಣ್ಣು ಒದ್ದೆ ಮಾಡಿತ್ತು.
ಕೈ ಹಿಡಿದು ಏಳು ಹೆಜ್ಜೆ ಹಾಕಿದ ಈ ಜೋಡಿಯನ್ನು ವಿಧಿ ರಸ್ತೆ ಅಪಘಾತದಲ್ಲಿ ಬೇರ್ಪಡಿಸಿತು.. ಗಂಡ ಹೆಂಡತಿ ಸಂಬಂಧವನ್ನು ದೂರ ಮಾಡಿತು... ಪತ್ನಿ ಮೃತಪಟ್ಟರೂ... ತನ್ನ ಪ್ರಯತ್ನ ಮಾತ್ರ ಬಿಡದೆ ಬಾಯಗೆ ಆಕ್ಸಿಜನ್ ನೀಡುವ ಪ್ರಯತ್ನ ಮಾಡಿದ್ದು... ಆಕೆ ಮೇಲಿನ ತನ್ನ ಪ್ರೀತಿಯನ್ನು ಸಾರುತ್ತದೆಂದು ಈ ದೃಶ್ಯ ನೋಡಿದ ಪ್ರತಿಯೊಬ್ಬರೂ ತಮ್ಮಲ್ಲೇ ಅಂದುಕೊಂಡರು..
ವಿಧಿಯಾಟ ಎಷ್ಟು ಘೋರ ಅಲ್ಲವೇ? ತಾನೊಂದು ಬಗೆದರೆ ದೈವವೊಂದು ಬಗೆಯಿತು ಅಂತಾರಲ್ಲ... ಬಹುಶಃ ಇದೂ ಹಾಗೆಯೇ ಅನ್ನಿಸುತ್ತದೆ. ಪ್ರಾಣಕ್ಕೆ ಪ್ರಾಣವಾಗಿ ಪ್ರೀತಿಸುವ ಅನ್ಯೋನ್ಯ ದಂಪತಿಗಳು ಇಂದು ಕಾಣಸಿಗುವುದು ಬಹಳ ಅಪರೂಪ... ಅದರಲ್ಲೂ ಹೆಂಡತಿಯನ್ನು ಪ್ರೀತಿಸುವ, ಗಂಡನ ಧ್ಯಾನದಲ್ಲೇ ಕಳೆಯುವ ಎಷ್ಟು ಮಂದಿ ಪತ್ನಿಯರು ಇದ್ದಾರೆ ಇಂದು..! ಅಂತಹದ್ದರಲ್ಲಿ ಈ ಜೋಡಿ ನಿಜವಾಗಿಯೂ ಗ್ರೇಟ್... ನಿಜವಾದ ಪ್ರೀತಿ ಎಂದರೆ ಇದೇ ಅನ್ನಿಸುತ್ತದೆ. ಬಹುಶಃ ಆ ದೇವರಿಗೂ ಈ ಜೋಡಿಯ ಬಗ್ಗೆ ಅಸೂಯೆ ಆಗಿರಬೇಕು.

Great couples
ReplyDelete