Header Ads

test

ಪಾಕಿಸ್ತಾನದಲ್ಲಿ ನಮ್ಮ ಯೋಧ ಅಭಿನಂದನ್ ಕುಡಿದ ಟೀ ಬಿಲ್ ಎಷ್ಟು ಗೊತ್ತಾ? ಗೊತ್ತಾದರೆ ಚಕಿತರಾಗುತ್ತೀರ.

ಪಾಕಿಸ್ತಾನ, ಭಾರತ ನಡುವಿನ ಸಂಘರ್ಷದ ಸಮಯದಲ್ಲಿ ಪಾಕಿಸ್ತಾನದಲ್ಲಿ ಭಾರತದ ಜೆಟ್ ವಿಮಾನ ಪತನವಾಯಿತು. ಆದರೂ ಅದರಿಂದ ಸುರಕ್ಷಿತವಾಗಿ ಹೊರಬಿದ್ದರು ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್. ಅವರನ್ನು ಪಾಕಿಸ್ತಾನಿ ಸೇನೆ ಹಿಡಿದು ಒಂದಷ್ಟು ಹಲ್ಲೆ ನಡೆಸಿತ್ತು. ಮೈತುಂಬಾ ರಕ್ತ, ಗಾಯಗಳೊಂದಿಗೆ ಅವರನ್ನು ಕಟ್ಟಿಹಾಕಿ ಹಿಂಸಿಸುವುದನ್ನು ಆರಂಭಿಸಿದರು. ಪಾಕ್ ಮೇಜರ್ ರಿಂದ..: ಘಟನೆ ನಡೆದ ಸ್ಥಳಕ್ಕೆ ಧಾವಿಸಿದ ಪಾಕಿಸ್ತಾನಿ ಮೇಜರ್ ಸೈನಿಕರನ್ನು ನಿಯಂತ್ರಣಕ್ಕೆ ಪಡೆದು, ಕೂಡಲೆ ಅಭಿನಂದನ್‌ಗೆ ಚಿಕಿತ್ಸೆ ಕೊಡಿಸಿದರು.


ಅವರು ಚೇತರಿಸಿಕೊಂಡ ಬಳಿಕ ಸ್ವತಃ ಅವರೇ ಒಂದು ವಿಡಿಯೋದಲ್ಲಿ ಮಾತನಾಡಿದರು. "ಜೆಟ್ ಪತನವಾದ ಕೂಡಲೆ ಜೀವಂತವಾಗಿ ಹೊರಬಿದ್ದೆ, ಆ ಬಳಿಕ ನನ್ನನ್ನು ಗಮನಿಸಿದ ಪಾಕಿಸ್ತಾನ್ ನಾಗರಿಕರು ಮತ್ತು ಪಾಕ್ ಸೈನಿಕರು ಹಲ್ಲೆ ನಡೆಸಿದರು. ಆದರೆ ಪಾಕಿಸ್ತಾನ್ ಮೇಜರ್ ನನ್ನನ್ನು ಅವರಿಂದ ರಕ್ಷಿಸಿದರು. ಆ ಬಳಿಕ ನನಗೇನು ಆಗದಂತೆ ನೋಡಿಕೊಂಡರು. ಭಾರತಕ್ಕೆ ಹೋದ ಬಳಿಕವೂ ಇದನ್ನೇ ಹೇಳುತ್ತೇನೆ. ನಾನೊಬ್ಬ ಯೋಧ. ಸುಳ್ಳು ಹೇಳಲ್ಲ" ಎಂದು ಆ ವಿಡಿಯೋದಲ್ಲಿ ತಿಳಿಸಿದ್ದಾರೆ. ಟೀ ಚೆನ್ನಾಗಿದೆ..: ಭಾರತದಲ್ಲಿ ನೀವು ಎಲ್ಲಿರುತ್ತೀರಿ ಎಂಬ ಪ್ರಶ್ನೆಗೆ ಸೌತ್‌ನಲ್ಲಿ ಇರುತ್ತೇನೆ ಎಂದು ಉತ್ತರ ನೀಡಿದರು. ಟೀ ಹೇಗಿದೆ ಎಂದರೆ ಚೆನ್ನಾಗಿದೆ ಎಂದು ಉತ್ತರಿಸಿದೆ. ಮುಖ ಎಲ್ಲಾ ಊತ ಬಂದಿತ್ತು. ಭಾರತೀಯರು ಮಾತ್ರ ಅವರ ಮೇಲೆ ನಡೆಸುತ್ತಿರುವ ಹಲ್ಲೆ ನೋಡಿ ಆಕ್ರೋಶ ವ್ಯಕ್ತಪಡಿಸಿದ್ದರು.

ಒಂದು ವೇಳೆ ಅವರಿಗೆ ಏನಾದರೂ ಆದರೆ ಯುದ್ಧ ಗ್ಯಾರಂಟಿ ಎಂದು ಭಾವಿಸಿದರು. ಹಾಗಾಗಿ ಮುಂಜಾಗ್ರತೆಗಾಗಿ ಪಾಕಿ ಆರ್ಮಿ ಅವರನ್ನು ರಕ್ಷಿಸಿತು. ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನದ ಬಾಲಾಕೋಟ್ ಮೇಲೆ ದಾಳಿ ಮಾಡಿದ ಭಾರತ ಅಲ್ಲಿನ ಉಗ್ರ ನೆಲೆಗಳನ್ನು ಧ್ವಂಸ ಮಾಡಿತು. ನಮ್ಮ ಟಾರ್ಗೆಟ್ ಉಗ್ರರೇ ಹೊರತು ನಾಗರಿಕರಲ್ಲ ಎಂದು ಭಾರತ ಸರಕಾರ ಆರಂಭದಿಂದಲೂ ಹೇಳುತ್ತಲೇ ಬಂದಿದೆ. ಆದರೂ ಪಾಕಿಸ್ತಾನಕ್ಕೆ ಬುದ್ಧಿ ಬಂದಿರಲಿಲ್ಲ. ಭಾರತೀಯ ವಾಯುಸೇನೆ ದಾಳಿ ಮಾಡುವ ಮೂಲಕ ಬುದ್ದಿ ಕಲಿಸಿದೆ. ಶುಕ್ರವಾರ ರಾತ್ರಿ ಅಭಿನಂದನ್‌ರನ್ನು ಪಾಕಿಸ್ತಾನ ವಾಘಾ ಗಡಿಯಲ್ಲಿ ಹಸ್ತಾಂತರಿಸಿದೆ. ಟೀ ಬಿಲ್ ಎಷ್ಟು ಗೊತ್ತಾ..? ಆದರೆ ಅಭಿನಂದರ್ ಅವರು ಪಾಕಿಸ್ತಾನದಲ್ಲಿ ಕುಡಿದ ಟೀ ಬಿಲ್ ಎಷ್ಟು ಎಂದು ಗೊತ್ತಾದರೆ ಚಕಿತರಾಗುತ್ತೀರ. ಅವರು ಹಣ ಕೇಳಲಿಲ್ಲ. ಅದಕ್ಕೆ ಬದಲಾಗಿ ಅವರು ಹಾರಾಟ ನಡೆಸಿದ ಜೆಟ್ ಕೇಳಿದರು. ಅಭಿನಂದರ್ ಹಾರಾಟ ನಡೆಸಿದ MIG-21 ಜೆಟ್ ಹೆಸರನ್ನು ಬೆಲೆಯಲ್ಲಿ ಬರೆದರು. ಅಂದರೆ ಆ ಟೀ ಬೆಲೆ ಅವರ ಜೆಟ್ ಬೆಲೆಗೆ ಸಮಾನ. ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಇದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಭಾರತಕ್ಕೆ ಹಿಂತಿರುಗಿರುವ ಅಭಿನಂದನ್ ಅವರನ್ನು ನೋಡಿ ಎಲ್ಲ ಭಾರತೀಯರು ಹೆಮ್ಮೆ ಪಡುತ್ತಿದ್ದಾರೆ.

No comments