ಈ ಆಹಾರಗಳನ್ನು ನಿತ್ಯ ಸೇವಿಸುವ ಮೂಲಕ ಹೃದ್ರೋಗಗಳು ಬಾರದಂತೆ ತಡೆಯಬಹುದು!!
ಹೃದ್ರೋಗ ಬಾರದಂತೆ ಇರಬೇಕಾದರೆ ನಿತ್ಯ ವ್ಯಾಯಾಮ ಮಾಡಬೇಕು. ಸೂಕ್ತವಾದ ಪೋಷಕಾಂಶಗಳಿಂದ ಕೂಡಿರುವ ಪೌಷ್ಠಿಕ ಆಹಾರ ಸೇವಿಸಬೇಕು. ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ಧೂಮಪಾನ, ಮದ್ಯಪಾನಕ್ಕೆ ಗುಡ್ ಬೈ ಹೇಳಬೇಕು. ಇವುಗಳ ಜತೆಗೆ ಕೆಳಗೆ ಸೂಚಿಸಿದ ಆಹಾರವನ್ನು ನಿತ್ಯ ತೆಗೆದುಕೊಳ್ಳುವ ಮೂಲಕ ಹೃದ್ರೋಗಗಳಿಂದ ದೂರ ಇರಬಹುದು. ಹಾಗಿದ್ದರೆ ಆ ಆಹಾರ ಪದಾರ್ಥಗಳು ಯಾವುವು ಎಂಬುದನ್ನು ಈಗ ನೋಡೋಣ.
1. ಟೊಟಾಟೋಗಳಲ್ಲಿ ಲೈಕೊಪಿನ್ ಎಂಬ ಆಂಟಿ ಆಕ್ಸಿಡೆಂಟ್ ಹೇರಳವಾಗಿ ಇರುತ್ತದೆ. ಇದು ದೇಹದಲ್ಲಿ ಇರುವ ಎಲ್ಡಿಎಲ್ (ಕೆಟ್ಟ) ಕೊಲೆಸ್ಟಾರಾಲನ್ನು ಕಡಿಮೆ ಮಾಡಿ ಹೃದ್ರೋಗಗಳು ಬಾರದಂತೆ ಮಾಡುತ್ತದೆ. ಅದೇ ರೀತಿ ಟೊಮಾಟೋಗಳಲ್ಲಿ ಇರುವ ಪೊಟ್ಯಾಷಿಯಂ ಹೈಬಿಪಿಯನ್ನು ಕಡಿಮೆ ಮಾಡುತ್ತದೆ. ಇದರಿಂದ ರಕ್ತ ಸಂಚಲನೆ ಉತ್ತಮವಾಗುತ್ತದೆ. ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗದಂತೆ ಮಾಡುತ್ತದೆ.
2. ರಕ್ತದಲ್ಲಿ ಇರುವ ಕೆಟ್ಟ ಕೊಲೆಸ್ಟರಾಲ್, ಟ್ರೈ ಗಿಸರೈಡ್ಗಳನ್ನು ಕಡಿಮೆ ಮಾಡುವಲ್ಲಿ ವಾಲ್ ನಟ್ಸ್ ಅದ್ಭುತವಾಗಿ ಕೆಲಸ ಮಾಡುತ್ತವೆ. ಹೃದ್ರೋಗಗಳು ಬಾರದಂತೆ ಇರುತ್ತವೆ. ವಾಲ್ನಟ್ಸ್ನಲ್ಲಿ ಇರುವ ಒಮೆಗಾ 3 ಫ್ಯಾಟಿ ಆಸಿಡ್ಸ್ ಅಧಿಕ ತೂಕವನ್ನು ಕಡಿಮೆ ಮಾಡುತ್ತವೆ. ಡಯಾಬಿಟೀಸ್, ಹೈಬಿಪಿಯನ್ನು ನಿಯಂತ್ರಣದಲ್ಲಿ ಇಡುತ್ತವೆ. ಹೃದ್ರೋಗಗಳು ಬಾರದಂತೆ ನೋಡುತ್ತದೆ.
3. ನಿತ್ಯ ಪಾಲಾಕ್ ಸೊಪ್ಪನ್ನು ಆಹಾರದ ಭಾಗವಾಗಿ ನೋಡಿಕೊಂಡರೆ ಹೃದ್ರೋಗಗಳು ಬಾರದಂತೆ ನೋಡಿಕೊಳ್ಳಬಹುದು ಎಂದು ಸಂಶೋಧನೆಗಳು ಹೇಳುತ್ತಿವೆ. ಪಾಲಾಕ್ನಲ್ಲಿ ಇರುವ ವಿಟಮಿನ್ ಸಿ, ಬೀಟಾ ಕೆರೋಟಿನ್, ಇತರೆ ಪೋಷಕಾಂಶಗಳು ಕೆಟ್ಟ ಕೊಲೆಸ್ಟರಾಲನ್ನು ಕಡಿಮೆ ಮಾಡುತ್ತವೆ. ಅದೇ ರೀತಿ ಪಾಲಾಕ್ನಲ್ಲಿ ಇರುವ ಫೋಲೆಟ್, ವಿಟಮಿನ್ ಬಿ6, ಬಿಟೈನ್, ಅಮೈನೋ ಆಮ್ಲಗಳು ಹೃದ್ರೋಗಗಳು, ಸ್ಟ್ರೋಕ್ಸ್ ಬಾರದಂತೆ ತಡೆಯುತ್ತವೆ.
4. ಓಟ್ಸ್ನಲ್ಲಿ ಆಂಟಿ ಇನ್ಫ್ಲಾಮೇಟರಿ ಗುಣಗಳು ಹೇರಳವಾಗಿ ಇರುತ್ತವೆ. ಇವು ರಕ್ತನಾಳಗಳಲ್ಲಿನ ಅಡ್ಡಿ ಉಂಟಾಗದಂತೆ ನೋಡಿಕೊಳ್ಳುತ್ತವೆ. ದೇಹದಲ್ಲಿ ಇರುವ ಕೆಟ್ಟ ಕೊಲೆಸ್ಟರಾಲನ್ನು ತೊಲಗಿಸುತ್ತವೆ. ರಕ್ತ ಸಂಚಲನೆಯನ್ನು ಉತ್ತಮ ಪಡಿಸುತ್ತವೆ.
5. ಸ್ಟ್ರಾಬೆರಿ, ನಿಂಬೆ ಜಾತಿ ಹಣ್ಣುಗಳು, ಬಾದಾಮಿ, ದಾಳಿಂಬೆಯನ್ನು ನಿತ್ಯ ತಿನ್ನುವ ಮೂಲಕ ಹೃದ್ರೋಗಗಳು ಬಾರದಂತೆ ನೋಡಿಕೊಳ್ಳಬಹುದು.
ಈ ನಿಯಮಗಳನ್ನೂ ಪಾಲಿಸಿಃ
* ಶರೀರಕ್ಕೆ ಅಗತ್ಯ ಕ್ಯಾಲೋರಿ ಪೂರೈಕೆ, ಸರಿಯಾದ ದೇಹ ತೂಕ ಕಾಪಾಡುವುದು, ಬೊಜ್ಜು ನಿಯಂತ್ರಣ, ಧೂಮಪಾನ ಹಾಗೂ ಮದ್ಯಪಾನ ನಿಯಂತ್ರಣ.
* ದಿನನಿತ್ಯ ಕ್ರಮಬದ್ಧ ವ್ಯಾಯಾಮ
*ಜೀವಸತ್ವ ಇರುವ ತರಕಾರಿಗಳು ಹಾಗೂ ಹಣ್ಣುಗಳ ಸೇವನೆ.
*ಹೊಟ್ಟಿರುವ ವಿವಿಧ ಧಾನ್ಯಗಳು, ಮೊಳಕೆ ಕಾಳುಗಳು, ಓಟ್ಸ್, ಬಾರ್ಲಿ, ಕುಸಬಲಕ್ಕಿ, ಗೋಧಿ, ರಾಗಿ ಇತ್ಯಾದಿ ಸೇವನೆ.
*ಮೀನಿನ ಸೇವನೆಯಿಂದ ಶರೀರಕ್ಕೆ ಅಗತ್ಯವಾದ ಓಮೇಗ ನಾಮ್ಲ ಪೂರೈಕೆಯಾಗುತ್ತದೆ.
*ಪ್ರಾಣಾಯಾಮ, ಯೋಗ, ಧ್ಯಾನ ಇವೂ ಹೃದಯದ ಆರೋಗ್ಯಕ್ಕೆ ಸಹಾಯಕ.

Post a Comment