Header Ads

test

ವಾಟ್ಸಾಪ್‌ನಲ್ಲಿ ವೈರಲ್ ಆಗುತ್ತಿರುವ ಕಾಲ್ ರೆಕಾರ್ಡಿಂಗ್ಸ್... ಮನೆಮನೆ ಕಥೆ ಹೊರಬೀಳುತ್ತಿವೆ..!

ವಾಟ್ಸಾಪ್‌ನಲ್ಲಿ ಒಂದು ಕಾಲದಲ್ಲಿ ಸುದ್ದಿಗಳು, ಫಾರ್ವರ್ಡ್ ಮೆಸೇಜ್‌ಗಳು ಸದ್ದು ಮಾಡುತ್ತಿದ್ದವು, ಆದರೆ ಈಗ ಕಾಲ್ ರೆಕಾರ್ಡಿಂಗ್ಸ್ ಹಲ್ ಚಲ್ ಮಾಡುತ್ತಿವೆ. ಯಾರ್ಯಾರೋ ಮಾತನಾಡಿಕೊಂಡಿರುವ ಕಾಲ್ ರೆಕಾರ್ಡಿಂಗ್ಸ್ ಎಲ್ಲಾ ವಿಕಿ ಲೀಕ್ಸ್‌ನಂತೆ ವಾಟ್ಸಾಪ್ ಲೀಕ್ಸ್ ರೂಪದಲ್ಲಿ ಹೊರಬೀಳುತ್ತಿವೆ.

ಲವರ್ಸ್ ಕಿತ್ತಾಟ..
ಪ್ರೇಮಿಗಳು ಪ್ರೀತಿಯಿಂದ ಮಾತನಾಡಿದಾ ಪಿಸು ಮಾತುಗಳೂ, ಪ್ರೀತಿ ಹೆಚ್ಚಾಗಿ ಮಾತನಾಡಿದ ಮಾತುಗಳು, ಪ್ರೀತಿ ಮಿತಿ ಮೀರಿದಾಗ ಹೊರಹೊಮ್ಮಿದ ಪದಗಳು ಎಲ್ಲ ಕಾಲ್ ರೆಕಾರ್ಡಿಂಗ್ಸ್ ರೂಪದಲ್ಲಿ ವಾಟ್ಸಾಪ್‌ನಲ್ಲಿ ಹಲ್ ಚಲ್ ಮಾಡುತ್ತಿವೆ. ಒಂದಲ್ಲ ಎರಡಲ್ಲ, ನಿತ್ಯ ಕೆಲವು 100 ಕಾಲ್ ರೆಕಾರ್ಡಿಂಗ್ಸ್ ವೈರಲ್ ಆಗುತ್ತಿವೆ ಕಳೆದ 10 ದಿನಗಳಿಂದ.

ವಾಟ್ಸಾಪ್‌ನಲ್ಲಿ ಇದುವರೆಗೆ ಆಡಿಯೋ ಕ್ಲಿಪ್ಸ್ ವೈರಲ್ ಆಗುತ್ತಿದ್ದವು, ಆದರೆ ಕಳೆದ 10 ದಿನಗಳಿಂದ ವೈರಲ್ ಆದ ಆಡಿಯೋ ಕ್ಲಿಪ್ಸ್ ಎಲ್ಲವೂ ಹಿಂದೆದೂ ಆಗಿರಲಿಲ್ಲ. ಕಾರಣ ಒಂದು ಪ್ರೇಮಿಯ ನೋವು, ಆ ಪ್ರೇಮಿಕನ ಕಾಲ್ ರೆಕಾರ್ಡಿಂಗ್ಸ್ ಯಾವ ಮಟ್ಟದಲ್ಲಿ ವೈರಲ್ ಆಯಿತು ಎಂದರೆ ಮಾತಿನಲ್ಲಿ ಹೇಳಲಾರದಷ್ಟು ಆಯಿತು. ದೇವರ ಹೆಸರಿಂದ ಆರಂಭವಾಗಿ... ನೀನ್ಯಾಕೆ ನೋವನುಭವಿಸುತ್ತೀಯ ಎಂಬ ಡೈಲಾಗ್ಸ್ ವರೆಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ ಸಾಕಷ್ಟು ಮಾತುಗಳು. ಅವು ಬೈಗುಳಗಳೇ ಆದರೂ, ತಪ್ಪಾದರೂ ಹುಡುಗರು ಮಾತ್ರ ಚೆನ್ನಾಗಿಯೆ ಕನೆಕ್ಟ್ ಆದರು, ಹುಡುಗಿಯರು ಮಾತ್ರ ಮೂತಿ ತಿರುಗಿಸಿದರು. ಕೇವಲ ವಾಟ್ಸಾಪ್‌ನಲ್ಲಷ್ಟೇ ಅಲ್ಲ, ಫೇಸ್‌ಬುಕ್, ಇನ್‌ಸ್ಟ್ರಾಗ್ರಾಮ್, ಟ್ವಿಟರ್, ಹೈಕ್... ಈ ರೀತಿ ಎಲ್ಲದರಲ್ಲೂ ಆ 27 ನಿಮಿಷಗಳ ಆಡಿಯೋ ಕ್ಲಿಪ್ ವೈರಲ್ ಆಯಿತು.


ಇನ್ನೂ ಎಷ್ಟು ಕಳುಹಿಸುತ್ತಾರೋ ಏನೋ...
ಆ ಬಳಿಕ ದಿನಕ್ಕೆ ಕನಿಷ್ಠ ಒಂದು 100 ಆಡಿಯೋ ಕ್ಲಿಪ್ಸ್ ಆದರೂ ವಾಟ್ಸಾಪ್‌ನಲ್ಲಿ ಸುತ್ತುತ್ತಿವೆ. ಅದರಲ್ಲಿ ಚೆನ್ನಾಗಿ ಕನೆಕ್ಟ್ ಆಗಿದ್ದು ಷೇರ್ ಮಾಡಿ ವೈರಲ್ ಆಗುತ್ತಿವೆ. ಇವುಗಳಲ್ಲಿ ಹೆಚ್ಚಿನವು ಪ್ರೇಮಿಗಳ ಪಿಸುಮಾತು, ದೂರವಾದ ಪ್ರೇಮಿಗಳ ಕಷ್ಟಗಳು, ಹುಡುಗನಿಗಾಗಿ ಕಿತ್ತಾಡುವ ಇಬ್ಬರು ಹುಡುಗಿಯರ ಆರ್ತನಾದಗಳು... ಒಂದೇ ಎರಡೇ ಒಂದೊಂದು ಆಡಿಯೋ ಕ್ಲಿಪ್ ಮೂಲಕ ಒಂದೊಂದು ಶಾರ್ಟ್ ಮೂವಿ ತೆಗೆಯಬಹುದು.

ಎಚ್ಚರ ವಹಿಸಿ...

ಕೋಪದಲ್ಲಿ, ನೋವಿನಲ್ಲಿ, ಪ್ರೀತಿಯಿಂದ ಮಾತನಾಡಿದ ಮಾತುಗಳನ್ನು ಹೊರಗಿನವರು ದಾಖಲಿಸಿ ವೈರಲ್ ಮಾಡಿದರೆ, ನಿಮ್ಮ ಮಾತುಗಳನ್ನು ನೀವೇ ಕೇಳಬೇಕಾಗುತ್ತದೆ. ಆದಕಾರಣ ಫೋನ್ ಕರೆಗಳಲ್ಲಾಗಲಿ, ಚಾಟಿಂಗ್‌ನಲ್ಲಾಗಲಿ ಎಚ್ಚರ ವಹಿಸಿ. ಇನ್ನೊಬ್ಬರ ಮುಂದೆ ನಗೆಪಾಟಲಿಗೆ ಗುರಿಯಾಗಬೇಡಿ ಎಂಬುದಷ್ಟೇ ನಮ್ಮ ಸಲಹೆ.

No comments