Header Ads

test

ಅರುವತ್ತು ಅಡಿ ಆಳದ ಕೊಳವೆ ಬಾವಿಗೆ ಬಿದ್ದು ಸಾವು ಗೆದ್ದು ಬಂದ ಪುಟಾಣಿ!

ನೆನಪಿಸಿಕೊಂಡರೇನೇ ಮೈಯೆಲ್ಲಾ ನಡುಗುತ್ತದೆ. ಕೊಳವೆ ಬಾವಿಗೆ ಬಿದ್ದ ಅದೆಷ್ಟೋ ಕಂದಮ್ಮಗಳು ನಮ್ಮ ದೇಶದಲ್ಲಿ ಉಳಿದು ಬಂದ ಉದಾಹರಣೆಗಳು ಇಲ್ಲ. ಆದರೆ ಹರಿಯಾಣದ ಹಿಸ್ಸಾರ್​ ಜಿಲ್ಲೆ ಬಲಸ್ಮಂದ್ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದ 18 ತಿಂಗಳ ಮಗು ಸಾವು ಗೆದ್ದು ಬಂದಿದೆ. ಬಾಲಕ ತಂದೆಯ ಹೆಸರು ಅಜಿಮ್ ಖಾನ್. ಈ ಅಜಿಮ್ ಖಾನ್ ಕೂಲಿ ಕಾರ್ಮಿಕನಾಗಿದ್ದು, ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿ ಬಿಟ್ಟಿತು.



ಇಷ್ಟಕ್ಕೂ ನಡೆದ್ದೇನೆಂದರೆ... ಆಗ ಸಂಜೆಯಾಗಿತ್ತು. ಸಮಯ 5.15 ಗಂಟೆ. ಅಲ್ಲೇ ಆಟವಾಡಿಕೊಂಡಿದ್ದ ಮಗು ಅದು. ತಂದೆ ತಾಯಿ ಸಹ ಇದ್ದರು. ಎಲ್ಲರನ್ನೂ ನಗಿಸುತ್ತಾ, ಆಟವಾಡುತ್ತಾ ಇದ್ದದ್ದು ಇದ್ದಕ್ಕಿದ್ದಂತೆ ಕೊಳವೆ ಬಾವಿಗೆ ಬಿದ್ದಿದೆ. ತಂದೆ, ತಾಯಿ ಮಗುವಿನಿಂದ ಕೊಂಚ ದೂರ ಇದ್ದಿದ್ರಿಂದ ದುರ್ಘಟನೆ ನಡೆದು ಹೋಗಿತ್ತು. ಕೊನೆಗೆ ಮಗು ಬೋರ್​ವೆಲ್​ನಲ್ಲಿ ಜಾರಿದೆ ಅನ್ನೋದನ್ನ ಅರಿತ ಪೋಷಕರು ಕಂಗಾಲಾಗಿ ಕೂತಿದ್ದರು. ಪುಟ್ಟ ಕಂದಮ್ಮನ ರಕ್ಷಣೆಗಾಗಿ ಸ್ಥಳೀಯರ ಬಳಿ ಕಣ್ಣೀರಿಟ್ಟಿದ್ದರು.

https://twitter.com/ANI/status/1109081542838636545

ಕಡೆಗೆ ಸ್ಥಳೀಯರು ಮಗು ಕೊಳವೆ ಬಾವಿಗೆ ಬಿದ್ದ ಮಾಹಿತಿಯನ್ನ ಪೊಲೀಸರಿಗೆ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಎನ್​ಡಿಆರ್​ಎಫ್​​ಗೆ ಮತ್ತು ಅಗ್ನಿಶಾಮ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ರಕ್ಷಣಾ ಸಿಬ್ಬಂದಿ ಕೊಳವೆ ಬಾವಿಯನ್ನ ಸರಿಯಾಗಿ ಪರಿಶೀಲಿಸಿದ್ದಾರೆ. ಸುಮಾರು 60 ಫೀಟ್​ ಆಳದ ಕೊಳವೆ ಬಾವಿಯಲ್ಲಿ ಮಗು ಅಳುತ್ತಿರುವ ಧ್ವನಿ ಕೇಳಿಸಿದೆ. ಮಗು ಜೀವಂತಾವಾಗಿದೆ ಅನ್ನೋದನ್ನ ಅರಿತ ರಕ್ಷಣಾ ಸಿಬ್ಬಂದಿ ಉಸಿರಾಟಕ್ಕೆ ಅನುಕೂಲ ಆಗಲಿ ಅಂತಾ ಆಕ್ಸಿಜನ್​ ಟ್ಯೂಬ್ ಅನ್ನ ಬಾವಿಯೊಳಗೆ ಬಿಟ್ಟಿದ್ದಾರೆ.

ಮಗು ಕೊಳವೆ ಬಾವಿಯಲ್ಲಿರುವ ಆಳವನ್ನ ತಿಳಿದುಕೊಳ್ಳಲು ಮತ್ತು ಹೇಗೆ ರಕ್ಷಣೆ ಮಾಡಬಹುದು ಅನ್ನೋದನ್ನ ಪ್ಲಾನ್ ಮಾಡಲು ರಕ್ಷಣಾ ಸಿಬ್ಬಂದಿ ಜಿಪಿಎಸ್​ ಮೊರೆ ಹೋಗಿದ್ದಾರೆ. ಜಿಪಿಎಸ್​ ಲೋಕೇಷನ್ ಮೂಲಕ ಮಗು ಇರುವ ನಿಖರ ಸ್ಥಳವನ್ನ ಪತ್ತೆ ಮಾಡಿಕೊಂಡಿದ್ದಾರೆ. ನಂತರ ಮುಗು ಬಿದ್ದಿರುವ ಬಾವಿಗೆ 17 ಫೀಟ್​ ದೂರದಿಂದ 70 ಅಡಿ ಆಳದವರೆಗೆ ಅಗೆದು ಮಗುವನ್ನ ರಕ್ಷಣೆ ಮಾಡಿದ್ದಾರೆ.

ಒಟ್ಟು ನಲವತ್ತೆಂಟು ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಬಾಲಕನನ್ನು ರಕ್ಷಿಸಲಾಗಿದೆ. ಅಗ್ರೋಹಾದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಜೀವಕ್ಕೆ ಯಾವುದೇ ಅಪಾಯ ಇಲ್ಲ ಅಂತಾ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. ಇಷ್ಟಕ್ಕೂ ಆ ಬಾಲಕನ ಹೆಸರು ಏನೆಂದರೆ ನದೀಮ್ ಖಾನ್.

No comments