Header Ads

test

ಕ್ಯಾನ್ಸರ್ ಪೀಡಿತ ಬಾಲಕಿಯ ಆಸೆ ಪೂರೈಸಿದ ಸೂಪರ್ ಸ್ಟಾರ್ ಮಹೇಶ್ ಬಾಬು

ಅಭಿಮಾನಿಗಳು ಎಂದರೆ ಅವರನ್ನು ದೇವರ ಸಮಾನ ಕಾಣುವ ನಟರಿದ್ದಾರೆ. ಅಭಿಮಾನಿಗಳೇ ನನ್ನ ದೇವರುಗಳು ಎಂದಿದ್ದರು ವರನಟ ಡಾ.ರಾಜ್ ಕುಮಾರ್. ಹಲವಾರು ನಟರು ಸಂಕಷ್ಟದಲ್ಲಿರುವ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿ ಅವರ ಕನಸು, ಆಸೆ ಪೂರೈಸುತ್ತಿರುತ್ತಾರೆ. ಇದೀಗ ಸೂಪರ್ ಸ್ಟಾರ್ ಮಹೇಶ್ ಬಾಬು ಸಹ ತಮ್ಮ ಅಭಿಮಾನಿಯೊಬ್ಬರ ಕನಸು ಸಾಕಾರ ಮಾಡಿದ್ದಾರೆ. ಮಹರ್ಷಿ ಚಿತ್ರದ ಸೆಟ್‌ನಲ್ಲೇ ಬಾಲಕಿಯೊಬ್ಬರನ್ನು ಭೇಟಿಯಾಗಿದ್ದಾರೆ ಮಹೇಶ್ ಬಾಬು.

ಶ್ರೀಕಾಕುಳಂ ಮೂಲದ ಈ ಅಭಿಮಾನಿಯನ್ನು ಭೇಟಿಯಾಗಲು ಕಾರಣವೂ ಇದೆ. ಈ ಹೆಣ್ಣು ಮಗು ಕ್ಯಾನ್ಸರ್‌ನಿಂದ ಬಳಲುತ್ತಿದೆ. ಒಮ್ಮೆಯಾದರೂ ಮಹೇಶ್ ಬಾಬು ಅವರನ್ನು ಭೇಟಿಯಾಗಬೇಕು ಎಂದು ಕನಸು ಕಾಣುತ್ತಿತ್ತು. ಕಡೆಗೂ 'ಮಹರ್ಷಿ' ಸಿನಿಮಾದಲ್ಲಿ ಸೆಟ್‌ನಲ್ಲಿ ಇದು ಸಾಕಾರವಾಗಿದೆ. ಅಭಿಮಾನಿಗಳ ಆಸೆಯನ್ನು ಪೂರೈಸುವುದರಲ್ಲಿ ಮಹೇಶ್ ಬಾಬು ಸದಾ ಮುಂದಿರುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.ಈ ಮಗು ಹೆಸರು ಪರ್ವಿನ್. ಕ್ಯಾನ್ಸರ್‌ನಿಂದ ಬಳಲುತ್ತಿರುವ ಈ ಬಾಲಕಿಗೆ ಮಹೇಶ್ ಬಾಬು ಸಿನಿಮಾಗಳೆಂದರೆ ಎಲ್ಲಿಲ್ಲದ ಅಕ್ಕರೆ. ತನ್ನನ್ನು ಭೇಟಿಯಾಗಬೇಕು ಎಂದು ಹಾತೊರೆಯುತ್ತಿದ್ದ ಬಾಲಕಿ ಬಗ್ಗೆ ತಿಳಿದುಕೊಂಡ ಮಹೇಶ್ ಬಾಬು ಕಡೆಗೂ ಮಹರ್ಷಿ ಸೆಟ್‍ನಲ್ಲಿ ಆ ಮಗುವಿನೊಂದಿಗೆ ಸಾಕಷ್ಟು ಸಮಯ ಕಳೆದಿದ್ದಾರೆ. ಮಗುವಿನ ಪೋಷಕರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಹೇಶ್ ಬಾಬುರನ್ನು ಭೇಟಿಯಾದ ಪರ್ವಿನ್ ಮುಖದಲ್ಲಿ ಮಂದಹಾಸ ಹೊರಸೂಸುತ್ತಿತ್ತು. ಮಹೇಶ್ ಬಾಬು ಜತೆಗೆ ಒಂದಷ್ಟು ಫೋಟೋಗಳನ್ನು ತೆಗೆದುಕೊಂಡು ಅಲ್ಲಿಂದ ಸಂತೋಷವಾಗಿ ಮನೆಗೆ ತೆರಳಿದ್ದಾರೆ ಪರ್ವಿನ್. ಆದಷ್ಟು ಬೇಗ ಗುಣಮುಖಳಾಗುವಂತೆ ಮಹೇಶ್ ಹಾರೈಸಿ ಕಳುಹಿಸಿದ್ದಾರೆ.

ಈ ಹಿಂದೆ ರಾಜಮಂಡ್ರಿಯ 106 ವರ್ಷದ ತನ್ನ ಅಭಿಮಾನಿಯನ್ನು ಮಹೇಶ್ ಬಾಬು ಭೇಟಿಯಾಗಿದ್ದರು. 'ಭರತ್ ಅನೆ ನೇನು' ಎಂಬ ಸಿನಿಮಾದಲ್ಲಿ ಮಹೇಶ್ ಬಾಬು ಮುಖ್ಯಮಂತ್ರಿ ಪಾತ್ರ ಪೋಷಿಸಿದ್ದರು. ಆ ಸಿನಿಮಾ ನೋಡಿದ ಬಳಿಕ 106 ವರ್ಷದ ಈ ಹಿರಿಯರು ಮಹೇಶ್ ಬಾಬು ಅಭಿಮಾನಿಯಾಗಿದ್ದರು.No comments