Header Ads

test

ಆ ಊರೆಲ್ಲಾ ಅವಳಿಗಳೇ, ಕೊಗೆ ವಿಜ್ಞಾನಕ್ಕೆ ಸವಾಲಾದ ರಹಸ್ಯ ಹಳ್ಳಿಗಾಡು. ಎಲ್ಲಿದೆ ಗೊತ್ತಾ..?

ಟೆಕ್ನಾಲಜಿಗೆ ಗೊತ್ತಾಗದೆ ಇರುವಂತಹ ರಹಸ್ಯಗಳೆಷ್ಟೋ. ಟೆಕ್ನಾಲಜಿ ಸಾಕಷ್ಟು ಅಭಿವೃದ್ಧಿ ಆಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಇಂದಿನ ದಿನಗಳಲ್ಲಿ ವಿಜ್ಞಾನಕ್ಕೂ ಭೇಧಿಸಲಾಗದಷ್ಟು ರಹಸ್ಯವಾಗಿದೆ ಒಂದು ಹಳ್ಳಿಗಾಡು. ಅದೇ ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯಲ್ಲಿನ ಕೋದಿನ್ಹಿ ಗ್ರಾಮ. ಒಂದೊಂದು ಪ್ರದೇಶಕ್ಕೆ ಒಂದೊಂದು ವಿಶೇಷತೆ ಇರುವಂತೆ ಆ ಗ್ರಾಮಕ್ಕೂ ಸಹ ಒಂದು ವಿಶೇಷತೆ ಇದೆ. ಅಷ್ಟೇ ಅಲ್ಲ ದೊಡ್ಡ ದೊಡ್ಡ ವೈದ್ಯರು ಸಹ ಭೇಧಿಸಲಾಗದ ಸೈನ್ಸ್ ರಹಸ್ಯ ಆ ಗ್ರಾಮದ ವಿಶೇಷ. ಅದೇ ಅವಳಿ ಮಕ್ಕಳು ಹೆಚ್ಚಾಗಿ ಜನಿಸಿರುವುದು.. ಒಂದು, ಎರಡು, ಮೂರು ಅವಳಿ ಮಕ್ಕಳಲ್ಲ. ಏಕಾಏಕಿ ನಾನೂರು ಮಂದಿ ಅವಳಿ ಮಕ್ಕಳು ಜನಿಸಿರುವುದು ಆ ಗ್ರಾಮದ ವಿಶೇಷತೆ. ಕೊದಿನ್ಹಿ ಗ್ರಾಮ ಜಗತ್ತಿನಲ್ಲೇ ಅತಿ ಹೆಚ್ಚು ಅವಳಿ ಮಕ್ಕಳು ಜನಿಸುವ ಪ್ರದೇಶವಾಗಿ ಗುರುತಿಸಲಾಗಿದೆ. ಪ್ರತಿ ವರ್ಷ ಇಲ್ಲಿ ಹೆಚ್ಚು ಸಂಖ್ಯೆಯಲ್ಲಿ ಅವಳಿಗಳು ಜನಿಸುತ್ತಿದ್ದಾರೆ.



ಅಧಿಕೃತ ಲೆಕ್ಕಾಚಾರದ ಪ್ರಕಾರ 2000 ಮಂದಿ ಗ್ರಾಮಸ್ಥರಿರುವ ಈ ಹಳ್ಳಿಯಲ್ಲಿ 205 ಅವಳಿ ಜೋಡಿಗಳಿವೆ. ಅಂದರೆ ಸುಮಾರು ಶೇ.10ರಷ್ಟು ಜನಸಂಖ್ಯೆ ಅವಳಿಗಳದ್ದು. 1949ನೇ ವರ್ಷದಿಂದ ಈ ಗ್ರಾಮದಲ್ಲಿ ಅವಳಿ ಮಕ್ಕಳು ಜನಿಸುತ್ತಿದ್ದಾರೆ. ದೇಶದಲ್ಲಿನ ಉಳಿದ ಪ್ರದೇಶಗಳಲ್ಲಿ ಈ ಸಂಖ್ಯೆ ಕೇವಲ ನಾಲ್ಕು ಇದ್ದರೆ ಕೊದಿನ್ಹಿ ಗ್ರಾಮದಲ್ಲಿ ಪ್ರತಿ 1000 ಮಂದಿದ್ಯಲ್ಲಿ 55 ಮಂದಿ ಮಕ್ಕಳು ಅವಳಿ ಮಕ್ಕಳು ಜನಿಸುತ್ತಿವೆ ಎಂಬುದು ಸ್ಪಷ್ಟವಾಗಿದೆ.

ಈ ಅವಳಿಗಳ ಜನನ 1945ರಿಂದ ಎಂದು ಆ ಗ್ರಾಮದ ಜನರು ಹೇಳುತ್ತಿದ್ದಾರೆ. ಆ ಗ್ರಾಮದವರು ಆ ಊರಿನವರನ್ನೇ ಮದುವೆಯಾಗುತ್ತಿದ್ದಾರೆ. ಇದೇ ಇರಬಹುದು ಆ ಟ್ವಿನ್ಸ್ ಜನನಕ್ಕೆ ಕಾರಣ ಎಂದು ಎಲ್ಲರೂ ಭಾವಿಸಿದರು. ಆದರೆ ಇಲ್ಲಿನ ಮಹಿಳೆಯರು, ಪುರುಷರು ಬೇರೆ ಬೇರೆ ಗ್ರಾಮದವರನ್ನು ಮದುವೆಯಾದರೂ ಅವರಿಗೂ ಅವಳಿ ಮಕ್ಕಳು ಜನಿಸುವುದು ಮಾತ್ರ ನಿಂತಿಲ್ಲ. ಈ ಸಂಗತಿ ವೈದ್ಯರನ್ನೂ ಚಕಿತಗೊಳಿಸಿದೆ.

ಈ ಕೊದಿನ್ಹಿ ಹಳ್ಳಿಗಾಡು ನೋಡಲು ತುಂಬಾ ಸುಂದರವಾಗಿದೆ ಕೂಡ. ಈ ಅವಳಿ ರಹಸ್ಯವನ್ನು ಭೇಧಿಸಲು ಹೆಸರಾಂತ ವೈದ್ಯರು... ತಜ್ಞರು ಕೊದಿನ್ಹಿ ಗ್ರಾಮ ಪ್ರಜೆಗಳನ್ನು ಪರಿಶೀಲಿಸಿದರು. ಪರೀಕ್ಷಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಈ ಕೊದಿನ್ಹಿ ಗ್ರಾಮ ವಿಜ್ಞಾನಕ್ಕೇ ಸಿಗದಷ್ಟು ಮಿಸ್ಟರಿಯಾಗಿ ಉಳಿದುಹೋಗಿದೆ. ಆರೋಗ್ಯವಂತರಾದ ಅವಳಿ ಮಕ್ಕಳು ಜನಿಸುತ್ತಿರುವುದು ವೈದ್ಯರನ್ನು ಇನ್ನಷ್ಟು ಚಕಿತಗೊಳಿಸಿದೆ. ಒಟ್ಟಾರೆ ಈ ಹಳ್ಳಿ ವಿಜ್ಞಾನಕ್ಕೆ ಸವಾಲಾಗಿದೆ ಎನ್ನಬಹುದು.

No comments