Header Ads

test

ಆಕೆಗೆ ಹ್ಯಾಟ್ಸಾಪ್ ಹೇಳಬೇಕಾದದ್ದೇ: ಗಂಡನ ಜತೆಗೆ ಫೋನ್‌ನಲ್ಲಿ ಮಾತನಾಡುತ್ತಾ ಸರ್ಜರಿ

ಓರ್ವ ಮಹಿಳೆಗೆ ಅಪರೂಪದ ಸರ್ಜರಿ ಮಾಡಿದರು ಜೈಪುರ ಮೂಲದ ಖಾಸಗಿ ವೈದ್ಯರು. ಸರ್ಜರಿ ಸಮಯದಲ್ಲಿ ರೋಗಿಯ ಸಂಯಮಕ್ಕೆ ಹ್ಯಾಟ್ಸಾಪ್ ಹೇಳಬೇಕಾದದ್ದೇ. ಶಾಂತಿ ದೇವಿ ಎಂಬ ಮಹಿಳೆ ಮಾತನಾಡಲು ತೊಂದರೆ ಅನುಭವಿಸುತ್ತಿದ್ದರು. ತೀವ್ರವಾದ ಮಾನಸಿಕ ವೇದನೆ ಅನುಭವಿಸುತ್ತಿದ್ದರು. ಇದರಿಂದಾಗಿ ಆಕೆಯನ್ನು ಜೈಪುರದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆಕೆಗೆ ವೈದ್ಯ ಪರೀಕ್ಷೆಗಳನ್ನು ಮಾಡಿದ ವೈದ್ಯರು ಮಿದುಳಿನಲ್ಲಿ ಗಡ್ಡೆ ಇರುವುದನ್ನು ಗುರುತಿಸಿದರು. ಆಕೆಯ ದೇಹದ ಬಲಭಾಗ, ಮಾತುಗಳನ್ನು ಕಂಟ್ರೋಲ್ ಮಾಡುವ ಭಾಗದ ಬಳಿ ಈ ಗಡ್ಡೆ ಇದ್ದ ಕಾರಣ ಸರಿಯಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಕೊಂಡರು. ಸರ್ಜರಿಯಿಂದ ಆ ಗಡ್ಡೆಯನ್ನು ತೆಗೆಯಬೇಕು ಎಂದು ವೈದ್ಯರು ಆಕೆಗೆ ಸೂಚಿಸಿದರು.


ಈ ಸರ್ಜರಿ ಮಾಡುವ ಮೊದಲು ಅರಿವಳಿಕೆ ಇಂಜಕ್ಷನ್ ನೀಡಿದರೂ.. ರೋಗಿ ಮಾತ್ರ ನಿದ್ದೆ ಹೋಗಬಾರದು. ಅಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ಆಕೆ ಸರ್ಜರಿಗೆ ಒಪ್ಪಿಕೊಂಡಳು. ಈಗ ಸರ್ಜರಿ ಸಕ್ಸಸ್ ಆಗಿ ಆಕೆ ಸಂತೋಷವಾಗಿದ್ದಾರೆ. ಆದರೆ 3 ಗಂಟೆಗಳ ಕಾಲ ತೆಗೆದುಕೊಂಡ ಈ ಸರ್ಜರಿಯಲ್ಲಿ ಪೇಷೆಂಟ್ ವ್ಯವಹರಿಸಿದ ರೀತಿ ಸುಪರ್ಬ್. ಸರ್ಜರಿ ಸಮಯದಲ್ಲಿ ನಿದ್ದೆ ಹೋಗದಂತೆ ಇರಲು... ಆಕೆ ತನ್ನ ಗಂಡನೊಂದಿಗೆ ಫೋನ್‌ನಲ್ಲಿ ಮಾತನಾಡಿದಳು. ನಡುನಡುವೆ ವೈದ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತಾ... ಆ ರೀತಿ ಸರ್ಜರಿ ಮುಗಿಯುವವರೆಗೂ ಫೋನ್‌ನಲ್ಲಿ ಮಾತನಾಡುತ್ತಲೇ ಇದ್ದರು.

ರೋಗಿ ಎಚ್ಚರದಿಂದ ಇರುವಾಗಲೇ ಸರ್ಜರಿ ಮಾಡಿಸಿಕೊಳ್ಳುವುದು ಎಂದರೆ ತಮಾಷೆ ಅಲ್ಲ. ಇದಕ್ಕೆ ಆ ರೋಗಿಗೆ ತುಂಬಾ ಧೈರ್ಯ ಇರಬೇಕು. ವೈದ್ಯರು ಸಹ ಅಷ್ಟೇ ಎಚ್ಚರದಿಂದ ಇರಬೇಕಾಗುತ್ತದೆ. ಇಲ್ಲದಿದ್ದರೆ ರೋಗಿ ಜೀವಕ್ಕೇ ಅಪಾಯ ತಪ್ಪಿದ್ದಲ್ಲ. ಮಹಿಳೆಯ ಮಿದುಳಿನಲ್ಲಿನ ಟ್ಯೂಮರ್ (ಗಡ್ಡೆ)ಯನ್ನು ಆಕೆ ಎಚ್ಚರದಿಂದ ಇದ್ದರೆ ಹೊರತು ಯಶಸ್ವಿಯಾಗಿ ನಿವಾರಿಸಲು ಸಾಧ್ಯವಿರಲಿಲ್ಲ. ಈ ಸರ್ಜರಿ ನಡೆಯುವಷ್ಟು ಹೊತ್ತು ಆಕೆ ತನ್ನ ಗಂಡನೊಂದಿಗೆ ಮಾತನಾಡುತ್ತಾ ಇದ್ದದ್ದು ಗಮನಾರ್ಹ ಎಂದಿದ್ದಾರೆ.

ಮಿದುಳಿನ ಸರ್ಜರಿ ಎಂದರೆ ಮನುಷ್ಯ ಸಾಮಾನ್ಯವಾಗಿ ಎಚ್ಚರದಿಂದ ಇರಬೇಕಾಗುತ್ತದೆ. ಒಂದು ಕಡೆ ಅರಿವಳಿಕೆ ನೀಡಿದ ಕಾರಣ ನಿದ್ದೆ ಬರುವ ಸಾಧ್ಯತೆಗಳು ಇರುತ್ತವೆ. ಇನ್ನೊಂದು ಕಡೆ ವೈದ್ಯರು ರೋಗಿಯ ಚಲನವಲನ ನೋಡಿಕೊಂಡು ತುಂಬು ಜಾಗ್ರತೆಯಿಂದ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ. ಇದು ಒಂದು ರೀತಿ ವೈದ್ಯರು ಹಾಗೂ ರೋಗಿ ಇಬ್ಬರಿಗೂ ಸವಾಲಿನಿಂದ ಕೂಡಿದ ವ್ಯವಹಾರ.

No comments