Header Ads

test

ವೈರಲ್ ಆದ ಭೂಮಿಕಾ ಹಾಟ್ ಫೋಟೋಗಳು.! ಅದಕ್ಕೆ ಕಾರಣ ಅವರ ಗಂಡನಂತೆ.! ಇಷ್ಟಕ್ಕೂ ಏನಾಯಿತು ಎಂದರೆಕಣ್ಣೀರೆ.!

ರಿಯಲ್ ಸ್ಟಾರ್ ಉಪೇಂದ್ರ ಜತೆಗೆ ಗಾಡ್‌ಫಾದರ್ ಸಿನಿಮಾದಲ್ಲಿ ಅಭಿನಯಿಸಿದ್ದ ಭೂಮಿಕಾ ನೆನಪಿದ್ದಾರೆ ಅಲ್ಲವೇ? ಟಾಲಿವುಡ್, ಕಾಲಿವುಡ್ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಒಂದು ಕಾಲದಲ್ಲಿ ತೆಲುಗಿನ ಟಾಪ್ ಹೀರೋಗಳ ಜತೆಗೆ ಅಭಿನಯಿಸಿದ ಭೂಮಿಕಾ ಚಾವ್ಲಾ ಈಗ ಪೋಷಕ ಪಾತ್ರಗಳಲ್ಲೂ ಕಾಣಿಸುತ್ತಿದ್ದಾರೆ. ಪೋಷಕ ಪಾತ್ರಗಳ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.



ಭೂಮಿಕಾ ಚಾವ್ಲಾ 2007ರಲ್ಲಿ ಭರತ್ ಠಾಕೂರ್ ಎಂಬುವವರನ್ನು ಮದುವೆಯಾಗಿ ಸೆಟ್ಲ್ ಆಗಿದ್ದರು. ಮದುವೆ ಬಳಿಕ ಭೂಮಿಕಾ ಆಗಾಗ ಸಿನಿಮಾಗಳಲ್ಲೂ ಬಣ್ಣ ಹಚ್ಚುತ್ತಿದ್ದರು. ಆದರೆ ಇತ್ತೀಚೆಗೆ ಭೂಮಿಕಾ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂಬ ಸುದ್ದಿ ಇದೆ. ಹೀರೋಯಿನ್‌ಗಳಿಗೆ ಮದುವೆ ಆದರೆ ಅವಕಾಶಗಳು ಕಡಿಮೆಯಾಗುವುದು, ಅಥವಾ ಮದುವೆ ಬಳಿಕ ಸಿನಿಮಾಗಳಿಗೆ ದೂರವಾಗುವುದು ಇವೆಲ್ಲಾ ಸಾಮಾನ್ಯ ಸಂಗತಿಗಳು.

ಆದರೆ ಸಿನಿಮಾಗಳ ಮೂಲಕ ಅಲ್ಲದೆ ಬೇರೆ ಆದಾಯ ಮಾರ್ಗ ಇದೆ ಎಂದರೆ ಇತ್ತ ತಲೆ ಹಾಕದವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಕಂಠ ಮಟ್ಟ ಸಾಲದಲ್ಲಿ ಮುಳುಗಿದ ಭೂಮಿಕಾಗೆ ನಟನೆ ಬಿಟ್ಟು ಬೇರೆ ಆದಾಯ ಇಲ್ಲದ ಕಾರಣ ಪೋಷಕ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ಕಾಲದಲ್ಲಿ ಹೀರೋಯಿನ್ ಆಗಿ ಮಿಂಚಿದವರು ಬಳಿಕ ಪೋಷಕ ಪಾತ್ರಗಳನ್ನು ಮಾಡುವುದು ಸಾಮಾನ್ಯ. ಆ ಪಾತ್ರಗಳಲ್ಲೂ ಯಶಸ್ವಿಯಾದರೆ ಮಾತ್ರ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಒಮ್ಮೆ ಫೇಲ್ ಆದರೆ ಮತ್ತೆ ಅವಕಾಶ ಸಿಗುವುದು ದುಸ್ತರವಾಗುತ್ತದೆ.

ಭೂಮಿಕಾ ಪರಿಸ್ಥಿತಿಗೆ ಕಾರಣ ಸ್ವತಃ ತನ್ನ ಗಂಡನೇ ಅಂತೆ.. ಇನ್ನೊಬ್ಬರ ಜತೆಗೆ ಅಕ್ರಮ ಸಂಬಂಧ, ಭೂಮಿಕಾರನ್ನು ಚೆನ್ನಾಗಿ ನೋಡಿಕೊಳ್ಳದಿರುವುದಷ್ಟೇ ಅಲ್ಲದೆ... ಈ ಹಿಂದೆ ಸಿನಿಮಾ ನಿರ್ಮಿಸುವಂತೆ ಭೂಮಿಕಾರನ್ನು ಪ್ರೋತ್ಸಾಹಿಸಿ ಸಾಲದ ಸುಳಿಗೆ ಸಿಲುಕುವಂತೆ ಮಾಡಿದ. ಸಿನಿಮಾ ಅವಕಾಶಗಳಿಗಾಗಿ ಭೂಮಿಕಾ ಗ್ಲಾಮರ್ ಅಸ್ತ್ರವನ್ನೂ ಸಹ ಪ್ರಯೋಗಿಸುತ್ತಿದ್ದಾರೆ. ಇತ್ತೀಚೆಗೆ ಫೋಟೋಶೂಟ್ ಮಾಡಿಸುತ್ತಿದ್ದಾರೆ. ಅವರ ಇತ್ತೀಚೆಗಿನ ಫೋಟೋಶೂಟ್ ಚಿತ್ರಗಳು ಅಭಿಮಾನಿಗಳನ್ನು ಬಹಳಷ್ಟು ಸೆಳೆದಿವೆ. ಬಹಳ ವರ್ಷಗಳ ಬಳಿಕ ಭೂಮಿಕಾ ಹಾಟ್ ಲುಕ್‍ನಲ್ಲಿ ಕಾಣಿಸಿದ್ದಾರೆ ಎಂಬ ಕಾಮೆಂಟ್‌ಗಳು ಬರುತ್ತಿವೆ.

No comments