Header Ads

test

ವಿಡ್ಡೂರ: ಪಾಕಿಸ್ತಾನ್ ಟೀ ಪೌಡರ್‌ಗೆ ಅಭಿನಂದನ್ ಬ್ರಾಂಡ್ ಅಂಬಾಸಿಡರ್

ಪಾಕಿಸ್ತಾನಿಯರಿಗೆ ಇಂಡಿಯನ್ ವಿಂಗ್ ಕಮಾಂಡರ್ ಅಭಿನಂದನ್ ಎಂದರೆ ಕುತ್ತಿಗೆ ತನಕ ಕೋಪ ಇದ್ದೇ ಇರುತ್ತದೆ. ಯಾಕೆಂದರೆ ಪಾಕಿಸ್ತಾನ ಮೂಲದ ಯುದ್ದ ವಿಮಾನ ಹೊಡೆದುರುಳಿಸಿ ಆ ದೇಶದ ನೆಲದ ಮೇಲೆ ಹಿಂದೂಸ್ಥಾನ್ ಜಿಂದಾಬಾದ್ ಎಂಬ ನಿನಾದ ಮಾಡಿದ. ಇದರಿಂದ ಸ್ಥಳೀಯರು ಅಭಿನಂದನ್ ಮೇಲೆ ಹಲ್ಲೆ ನಡೆಸಿದ್ದರು. ಆರ್ಮಿಯವರು ಸಹ ಅಭಿನಂದನ್‌ರನ್ನು ಅಷ್ಟು ಸುಲಭವಾಗಿ ಬಿಡುತ್ತಿರಲಿಲ್ಲ. ಆದರೆ ಭಾರತ ಜೆನೀವಾ ಒಪ್ಪಂದ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮೇಲೆ ಒತ್ತಡ ತಂದ ಹಿನ್ನೆಲೆಯಲ್ಲಿ ಹಿಂದಡಿ ಇಡಬೇಕಾಯಿತು.


ಪಾಕಿಸ್ತಾನ ಮೂಲದ ಅದೆಷ್ಟೋ ಮಂದಿ ಅಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅಭಿನಂದನ್‌ರನ್ನು ಬಿಡುಗಡೆ ಮಾಡಬೇಡಿ ಎಂದು ಪ್ರಕರಣ ದಾಖಲಿಸಿದ್ದರು. ಅಂತಹ ಹಿನ್ನೆಲೆಯಲ್ಲಿ ಪಾಕಿಸ್ತಾನದ ಒಂದು ಟೀಗೆ ಅಭಿನಂದನ್ ಬ್ರಾಂಡ್ ಅಂಬಾಸಿಡರ್ ಎಂದು ಪ್ರಚಾರ ನೀಡಲಾಗುತ್ತಿದೆ. ಪಾಕಿಸ್ತಾನ್ ಕರಾಚಿ ಮೂಲದ ತಪಾಲ್ ಟೀ ಕಂಪನಿ ವಿಡಿಯೋ ಒಂದು ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಭಾರತದ ಜತೆಗೆ ಪಾಕಿಸ್ತಾನದಲ್ಲೂ ಸಹ ಆ ವಿಡಿಯೋ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಅಭಿನಂದನ್ ಟೀ ಕುಡಿಯುತ್ತಾ ಇರುವ ದೃಶ್ಯಗಳಿವೆ.

ಅಭಿನಂದನ್ ತಪಾಲ್ ಟೀ ಕುಡಿಯುತ್ತಿದ್ದಾರೆ. ಅವರ ತಪಾಲ್ ಟೀ ಮೆಚ್ಚಿದ್ದಾನೆ ಎಂದು ತಪಾಲ್ ಟೀ ಕಂಪನಿ ಜಾಹೀರಾತಿನಲ್ಲಿ ತೋರಿಸಲಾಗಿದೆ. ಈ ವಿಡಿಯೋವನ್ನು ತಪಾಲ್ ಟೀ ಕಂಪನಿಯವರು ತಯಾರು ಮಾಡಿದರೆ ಅಥವಾ ಇನ್ಯಾರಾದರೂ ಈ ವಿಡಿಯೋ ಹಾಕಿದರೆ ಎಂಬುದು ಮಾತ್ರ ಗೊತ್ತಾಗಿಲ್ಲ. ತಪಾಲ್ ಟೀ ಬಗ್ಗೆ ಅಲ್ಲಿ ಸಾಕಷ್ಟು ಟೀಕೆ ಕೇಳಿ ಬರುತ್ತಿದೆ. ಆದರೆ ಒಮ್ಮೆಲೆ ತಪಾಲ್ ಟೀ ಕಂಪೆನಿ ಬಗ್ಗೆ ಎಲ್ಲರಿಗೂ ಗೊತ್ತಾಗುವಂತೆ ಆಯಿತು. ಇದರಿಂದ ಸೇಲ್ಸ್ ಸಹ ಹೆಚ್ಚಾಗಿವೆ ಎಂದು ಕೆಲವರು ಹೇಳಿದ್ದಾರೆ.

ಒಟ್ಟಾರೆ ಒಂದು ಪಾಕಿಸ್ತಾನಿ ಟೀ ಕಂಪನಿಗೂ ಸಹ ಅಭಿನಂದನ್‌ ಈ ರೀತಿ ಉಪಯೋಗಕ್ಕೆ ಬಂದಿದ್ದಾರೆ. ರಿಯಲ್ ಹೀರೋ ಅಭಿನಂದನ್ ಎಂದು ಸಾಮಾಜಿಕ ಮಾಧ್ಯಮಗಳಲಿ ಕಾಮೆಂಟ್ಸ್ ಬರುತ್ತಿವೆ. ಪಾಕಿಸ್ತಾನ್ ಆರ್ಮಿಯವರು ಅಭಿನಂದನ್‌ಗೆ ಟೀ ನೀಡಿ ಕೆಲವು ಪ್ರಶ್ನೆಗಳು ಕೇಳಿದ ವಿಡಿಯೋ ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್ ಆಯಿತು. ಅದರಲ್ಲಿ ಅರ್ಮಿಯವರು ಕೊಟ್ಟ ಟೀಗೆ ತಾನು ಇಂಪ್ರೆಸ್ ಆದಂತೆ ಅಭಿನಂದನ್ ಹೇಳಿದ್ದಾರೆ. ಆ ವೀಡಿಯೋ ಎಡಿಟ್ ಮಾಡಿ ತಪಾಲ್ ಟೀ ಕಂಪೆನಿ ಜಾಹೀರಾತಿಗಾಗಿ ಬದಲಾಯಿಸಲಾಗಿದೆ. ಸೃಜನಶೀಲತೆಯ ಪರಾಕಾಷ್ಠೆ ಎಂದರೆ ಇದೇ ಅಲ್ಲವೇ...!

No comments