Header Ads

test

ಆ ಮಳಿಗೆಯಲ್ಲಿನ ಗಾಜಿನ ಶೋಕೇಸಲ್ಲಿ ಇರುವ ಗೊಂಬೆ... ಗೊಂಬೆಯಲ್ಲ. ವಧುವಿನ ವಸ್ತ್ರದಲ್ಲಿರುವ ಶವ.ನಂಬಲಾಗುತ್ತಿಲ್ಲವೇ? ಹಾಗಿದ್ದರೆ, ನೋಡಿ

ಈ ಮಳಿಗೆಯಲ್ಲಿ ಗಾಜಿನ ಮರೆಯಲ್ಲಿ ಸುಂದರವಾಗಿ ಕಾಣಿಸುತ್ತಿರುವ ಆ ಗೊಂಬೆ.. ನಿಜವಾದ ಗೊಂಬೆಯಲ್ಲ. ಅದು ಆ ಅಂಗಡಿ ಮಾಲೀಕನ ಮಗಳ ಶವ ಎಂದೂ, ರಾಸಾಯನಿಕಗಳನ್ನು ಪೂಸಿ ಆಕೆಯನ್ನು ಶೋಕೇಸ್‌ನಲ್ಲಿ ಗೊಂಬೆಯಂತೆ ನಿಲ್ಲಿಸಿದ್ದಾರೆ ಎನ್ನುತ್ತಾರೆ. ಮೆಕ್ಸಿಕೋದಲ್ಲಿನ ಚಿಹ್ವಾವಾ ಪ್ರದೇಶದಲ್ಲಿ ಪಸ್ಕುಲಾ ಎಸ್ಪಾರ್ಟಾ ಎಂಬ ವ್ಯಾಪಾರಿಯ ಈ ಅಂಗಡಿಯಲ್ಲಿ ಈ ಗೊಂಬೆ ಇದೆ. ಇಷ್ಟಕ್ಕೂ ಇದು ನಿಜವಾಗಿ ಗೊಂಬೆಯೇ? ಅಥವಾ ಗೊಂಬೆ ರೂಪದಲ್ಲಿ ಇರುವ ಶವವೇ?


1930ರಲ್ಲಿ ತಯಾರಿಸಿದ ಲಾ ಪಸ್ಕ್ಯುಲಿಟಾ ಎಂಬ ಈ ಬೊಂಬೆಯನ್ನು ನೋಡಿ ಬಹಳಷ್ಟು ಮಂದಿ ಭಯ ಬಿದ್ದರು. ಅದು ನೋಡಲು ಮನುಷ್ಯರಂತೆಯೇ ಇತ್ತು. ಅದರ ಕೈಗಳು ಸಹ ಮನುಷ್ಯರ ಕೈಗಳಂತೆ ಇದ್ದವು ಎಂದಿದ್ದರು.ಅಷ್ಟೇ ಅಲ್ಲದೆ, ಆಕೆ ಕಣ್ಣುಗಳು ತಮ್ಮನ್ನೇ ನೋಡುತ್ತಿರುವಂತೆ ಇದ್ದವೆಂದು, ಒಂದು ಸಲ ಆಕೆಯನ್ನು ನೋಡಿದರೆ... ರಾತ್ರಿಯಲ್ಲಾ ಆಕೆಯ ಕಣ್ಣುಗಳು ತಮ್ಮನ್ನು ಹಿಂಬಾಲಿಸುತ್ತವೆ ಎಂದು ಹೇಳುತ್ತಿದ್ದರು. ಒಂದೊಂದು ಸಲ ಆ ಗೊಂಬೆ ಇದ್ದ ಸ್ಥಳದಲ್ಲಿ ಇಲ್ಲದೆ ಅತ್ತಿಂದಿತ್ತ ಓಡಾಡುತ್ತಿತ್ತು ಎಂದಿದ್ದಾರೆ.

ಆ ಮಳಿಗೆಯಲ್ಲಿ ಕೆಲಸ ಮಾಡಿದ ಸೋನಿಯಾ ಬುರುಸಿಗ ಹೇಳಿದ ಮಾತುಗಳನ್ನು ಕೇಳಿದರೆ ಮೈಯಲ್ಲಾ ಝುಂ ಎನ್ನುತ್ತದೆ. "ಆ ಗೊಂಬೆಗೆ ನಾನು ಬಟ್ಟೆ ಬದಲಾಯಿಸುತ್ತಿದ್ದೆ. ಆ ಗೊಂಬೆ ಬಳಿಗೆ ಯಾವಾಗ ಹೋದರೂ ನನ್ನ ಕೈಗಳು ಬೆವರಿನಿಂದ ಒದ್ದೆಯಾಗಿತ್ತು. ಆಕೆಯ ಕೈಗಳು ನಿಜವಾದ ಕೈಗಳಂತೆ ಇದ್ದವು. ಆಕೆಯ ಕಾಲಿನ ನರಗಳು ಉಬ್ಬಿರುತ್ತಿದ್ದವು. ಅದು ಗೊಂಬೆ ಅಲ್ಲ, ನಿಜವಾದ ಮನುಷ್ಯ ಎಂದು ನಾನು ನಂಬುತ್ತಿದ್ದೆ" ಎಂದಿದ್ದಾರೆ. ಆದರೆ ಈ ಎಲ್ಲಾ ಅಂತೆಕಂತೆಗಳನ್ನು ಮಾಲೀಕ ಪಸ್ಕುಲಾ ಸಾರಾಸಗಟಾಗಿ ತಳ್ಳಿಹಾಕಿದ್ದ. ಜನ ಭಾವಿಸಿದಂತೆ ಅದು ತನ್ನ ಮಗಳ ಶವ ಅಲ್ಲ ಎಂದು ಹೇಳಿದ್ದ.

ಯಾಕೆ ಹಾಗೆ? : ಮದುವೆ ಗೌನ್ ಮಾರುವ ಪಸ್ಕುಲಾ ಮಗಳಿಗೆ ಒಂದು ದಿನ ಬ್ಲಾಕ್ ವಿಡೋ ಎಂಬ ಜೇಡ ಕಚ್ಚಿ ಸಾವಪ್ಪುತ್ತಾಳೆ. ಆ ಬಳಿಕ ಸ್ವಲ್ಪ ದಿನಗಳಿಗೆ ಈ ಗೊಂಬೆ ಆ ಮಳಿಗೆಯಲ್ಲಿ ಪ್ರತ್ಯಕ್ಷವಾಯಿತು. ಆ ಗೊಂಬೆಯನ್ನು ಲಾ ಪಸ್ಕ್ಯುಲಿಟಾ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ವಧುವಿನ ವಸ್ತ್ರಗಳಲ್ಲಿ ಕಾಣಿಸುವ ಆ ಗೊಂಬೆಯನ್ನು ನೋಡಿ ಬಹಳಷ್ಟು ಮಂದಿ ಜೀವಂತ ವ್ಯಕ್ತಿ ಅಲ್ಲಿ ನಿಂತಿದ್ದಾಳೆ ಎಂದು ಭಾವಿಸಿದ್ದರು. ಇದರಿಂದ ಮಳಿಗೆ ಯಜಮಾನ ತನ್ನ ಮಗಳ ಶವವನ್ನು ರಾಸಾಯನಿಕಗಳಲ್ಲಿ ಇಟ್ಟು ಗೊಂಬೆಯಂತೆ ತಯಾರಿಸಿ ಶೋಕೇಸಿನಲ್ಲಿ ಇಟ್ಟ ಎಂದು ಎಲ್ಲರೂ ಹೇಳುತ್ತಾರೆ.

ಆ ಗೊಂಬೆ ಕೈಬೆರಳುಗಳನ್ನು ಪರಿಶೀಲಿಸಿದರೆ ಮನುಷ್ಯರ ತರಹವೇ ಇತ್ತು. ಅವುಗಳ ಮೇಲೆ ಚಿಕ್ಕ ಚಿಕ್ಕ ಕೂದಲು ಸಹ ಇತ್ತು. ಆ ದಿನಗಳಲ್ಲಿ ವ್ಯಾಕ್ಸ್ ಗೊಂಬೆಗಳನ್ನು ತಯಾರಿಸುವವರೂ ಇರಲಿಲ್ಲ. ಇದರಿಂದ ಅದು ಗೊಂಬೆಯೇ? ಅಥವಾ ಅಂಗಡಿ ಮಾಲೀಕನ ಮಗಳ ಶವವೇ ಎಂಬ ಅನುಮಾನ ಮೂಡಿತ್ತು. ಈ ಗೊಂಬೆ ಈಗಲೂ ಆ ಮಳಿಗೆಯಲ್ಲೇ ಇದೆ.

ಇನ್ನು ಇದರ ಹಿಂದಿನ ರಹಸ್ಯ ಏನು ಎಂಬುದು ಆ ಅಂಗಡಿ ಯಜಮಾನನಿಗೆ, ಅದರಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಮಾತ್ರ ಗೊತ್ತಾಗಬೇಕು. ಇಷ್ಟೆಲ್ಲಾ ಅನುಮಾನಗಳಿದ್ದಾಗ ಪೊಲೀಸರು ಅದನ್ನು ಪರಿಶೀಲಿಸಬೇಕು ಎಲ್ಲವೇ ಎಂಬ ಪ್ರಶ್ನೆಗೂ ಎಲ್ಲೂ ಉತ್ತರ ಇಲ್ಲ. ಆದರೆ ಮೆಕ್ಸಿಕೋದಲ್ಲಿ ಮಾತ್ರ ಲಾ ಪಸ್ಕ್ಯೂಲಿಟಾ ಹೆಸರು ಕೇಳಿದರೆ ಸಾಕು ಈ ಗೊಂಬೆ ಬಗ್ಗೆ ಹೇಳುತ್ತಾರೆ. ಈ ಗೊಂಬೆ ಫೋಟೋಗಳನ್ನು ನೋಡಿದರೆ ನಿಮಗೇನು ಅನ್ನಿಸುತ್ತದೆ?

No comments