Header Ads

test

ಮೊಬೈಲ್ ಮೇಲೆ ಗೆರೆಗಳು ಬಿದ್ದರೆ...? ಈ ರೀತಿ ಮಾಡಿದರೆ ಮಟಾ ಮಾಯ..!

ಎಷ್ಟೇ ಎಚ್ಚರದಿಂದ ಇದ್ದರೂ ಅಚಾನಕ್ ಆಗಿ ಮೊಬೈಲ್ ಸ್ಕ್ರೀನ್ ಮೇಲೆ ಗೆರೆಗಳು ಬೀಳುತ್ತಿರುತ್ತವೆ. ಅವನ್ನು ನಿವಾರಿಸಿಕೊಳ್ಳಲು ಈ ಪುಟ್ಟ ಸಲಹೆಗಳನ್ನು ಪಾಲಿಸಿದರೆ ಮತ್ತೆ ಹೊಸದಾಗಿ ಕಾಣಿಸುತ್ತದೆ. ಇನ್ನೇಕೆ ತಡ...

ಕೈಯಿಂದ ಜಾರಿ ಅಕಸ್ಮಾತ್ ಕೆಳಗೆ ಬಿದ್ದರೆ ಸ್ಕ್ರೀನ್ ಮೇಲೆ ಗೆರೆಗಳು ಬೀಳುತ್ತವೆ. ಕೆಲವು ಸಣ್ಣ ಪುಟ್ಟ ಸಲಹೆಗಳ ಮೂಲಕ ಸ್ಕ್ರೀನ್ ಗೆರೆಗಳನ್ನು ಕಾಣಿಸದಂತೆ ಮಾಡಿಕೊಳ್ಳಬಹುದು. ಇದಕ್ಕಾಗಿ ಬೇಕಿಂಗ್ ಸೋಡಾ ಉಪಯೋಗಕ್ಕೆ ಬರುತ್ತದೆ. ಎರಡು ಟೇಬಲ್ ಸ್ಫೂನ್ ಬೇಕಿಂಗ್ ಸೋಡಾ ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ ಪೇಸ್ಟ್ ರೀತಿ ಮಾಡಿಕೊಳ್ಳಬೇಕು. ಇದನ್ನು ಒಂದು ಒಣ ಬಟ್ಟೆ ಮೇಲೆ ಹಾಕಿ ನಿಧಾನಕ್ಕೆ ಗೆರೆಗಳ ಮೇಲೆ ವೃತ್ತಾಕಾರವಾಗಿ ಒರೆಸಬೇಕು. ಈ ರೀತಿ ಮಾಡಿದರೆ ಸ್ಕ್ರೀನ್ ಗಾರ್ಡ್ ಫಳ ಫಳ ಎಂದು ಹೊಳೆಯುತ್ತದೆ.




ನಿತ್ಯ ಬ್ರಷ್ ಮಾಡಿಕೊಳ್ಳಲು ಬಳಸುವ ಟೂತ್ ಪೇಸ್ಟ್ ಸಹ ಸ್ಕ್ರೀನ್ ಮೇಲಿನ ಗೆರೆಗಳನ್ನು ಕಾಣಿಸದಂತೆ ಮಾಡುತ್ತದೆ. ಸ್ವಲ್ಪ ಪೇಸ್ಟನ್ನು ಬೆರಳ ಮೇಲೆ ಹಾಕಿಕೊಂಡು ಸ್ಕ್ರೀನ್ ಮೇಲೆ ನಿಧಾನಕ್ಕೆ ಒರೆಸಬೇಕು. ಆ ಬಳಿಕ ಮೆತ್ತಗಿನ ಒಣ ಬಟ್ಟೆಯಲ್ಲಿ ನೀಟ್ ಆಗಿ ಒರೆಸಬೇಕು. ಇನ್ನೊಂದು ಪದ್ಧತಿ ಟ್ರಾನ್ಸಪರೆಂಟ್ ನೇಯಿಲ್ ಪಾಲಿಷ್‌ನಲ್ಲಿ ಬ್ರಷ್ ಹಾಕಿ... ಫೋನಿನ ಗೆರೆಗಳ ಮೇಲೆ ಒರೆಸಬೇಕು. ಅದು ಒಣಗಿದ ಬಳಿಕ ಒಣ ಬಟ್ಟೆಯಲ್ಲಿ ಸ್ವಲ್ಪ ವೆಜಿಟೆಬಲ್ ಆಯಿಲ್ ತೆಗೆದುಕೊಂಡು ಸ್ಕ್ರೀನ್ ಮೇಲೆ ಒರೆಸಬೇಕು. ಬಳಿಕ ಮೆತ್ತಗಿನ ಬಟ್ಟೆಯಲ್ಲಿ ಒರೆಸಿದರೆ ಸಾಕು.

No comments