Header Ads

test

ಲಕ್ಷಾಂತರ ರೂಪಾಯಿ ಹೋಟೆಲ್ ಬಿಲ್ ಕಟ್ಟದೆ ಪರಾರಿಯಾದ ನಟಿ ಪೂಜಾಗಾಂಧಿ

ಸ್ಯಾಂಡಲ್‍ವುಡ್ ನಟಿ, ಮುಂಗಾರು ಮಳೆ ತಾರೆ ಪೂಜಾ ಗಾಂಧಿ ಪಂಚತಾರಾ ಹೋಟೆಲ್ ಒಂದರ ಬಿಲ್ ಕಟ್ಟದೆ ಅಲ್ಲಿಂದ ಹೇಳದೆ ಕೇಳದೆ ಕಾಲ್ಕಿತ್ತ ಘಟನೆ ನಡೆದಿದೆ. ಈ ಸಂಬಂಧ ಹೈಗ್ರೌಂಡ್ರ್ ಠಾಣೆಯಲ್ಲಿ ಪೂಜಾಗಾಂಧಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಪೂಜಾಗಾಂಧಿ ಜಗೆತೆ ಹೋಟೆಲ್‌ನಲ್ಲಿ ಬಿಜೆಪಿ ಮುಖಂಡ ಅನಿಲ್ ಪಿ ಮೆಣಸಿನಕಾಯಿ ಸಹ ಇದ್ದರು ಎಂದಿವೆ ಮೂಲಗಳು.


ಮಾರ್ಚ್ 11 ರಂದು ಪೂಜಾ ಗಾಂಧಿ ಬೆಂಗಳೂರಿನ ಪ್ರತಿಷ್ಠಿತ ದಿ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ರೂಂ ಒಂದನ್ನು ಬಾಡಿಗೆಗೆ ಪಡೆದಿದ್ದರು. ಸುಮಾರು ದಿನಗಳ ಕಾಲ ಅಲ್ಲೇ ಇದ್ದರು. ಇದರ ವಾಸ್ತವ್ಯ ವೆಚ್ಚ ₹ 3.53 ಲಕ್ಷಗಳನ್ನು ಪಾವತಿಸಿದೆ ಅಲ್ಲಿಂದ ಕಾಲ್ತಿತ್ತಿದ್ದಾರೆ. ಹೋಟೆಲ್ ಸಿಬ್ಬಂದಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ಹೋಟೆಲ್ ಮಾಲೀಕರು ದೂರಿನಲ್ಲಿ ತಿಳಿಸಿದ್ದಾರೆ.

ಹೈಗ್ರೌಂಡ್ಸ್ ಪೊಲೀಸ್ ಠಾಣೆ ಪೊಲೀಸರು ಪೂಜಾ ಗಾಂಧಿಯನ್ನು ಠಾಣೆಗೆ ಕರೆಸಿ ವಿಚಾರಿಸಿದ್ದಾರೆ. ಆಗ ಪೂಜಾಗಾಂಧಿ ₹ 2 ಲಕ್ಷ ಪಾವತಿಸಿದ್ದು ಉಳಿದ ಬಾಕಿ ಹಣವನ್ನು ಪಾವತಿಸಲು ಸಮಯಾವಕಾಶ ಕೇಳಿದ್ದಾರೆ ಎಂದಿವೆ ಮೂಲಗಳು.

ಪೂಜಾಗಾಂಧಿ ಮತ್ತು ಅನಿಲ್ ಮೆಣಸಿನಕಾಯಿ ದಿ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಒಂದು ವರ್ಷ ವಾಸ್ತವ್ಯ ಹೂಡಿದ್ದರು. ಇದಕ್ಕಾಗಿ ಇವರು ₹ 26.22 ಲಕ್ಷ ಪಾವತಿಸಬೇಕಾಗಿತ್ತು. ಆದರೆ ₹ 22.83 ಲಕ್ಷ ಪಾವತಿಸಿ ಬಾಕಿ ಹಣವನ್ನು ನೀಡಿರಲಿಲ್ಲ. ಈ ಸಂಬಂಧ ಹೋಟೆಲ್‌ನವರು ಇಬ್ಬರ ವಿರುಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

No comments