Header Ads

test

ಅದಕ್ಕೆ ನನ್ನ ಸ್ತನಗಳು ಆ ರೀತಿ ಇರುವುದು... ಟೀಕೆಗಳಿಗೆ ನಟಿ ಸ್ವಸ್ತಿಕಾ ಉತ್ತರ

ಜಗತ್ತೆಲ್ಲಾ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನ ಓರ್ವ ನಟಿಗೆ ಎದುರಾದ ಕಹಿ ಅನುಭವ ಇದು. ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಒಂದು ಫೋಟೋ ನೋಡಿ ಕೆಲವರು ಟೀಕೆಗೆ ಮುಂದಾದರು. ನಿನ್ನ ಸ್ತನಗಳು ಜೋತಾಡುತ್ತಿದೆ ಎಂದು ಅಸಭ್ಯಕರ ಕಾಮೆಂಟ್ ಮಾಡಿದರು. ಇದರಿಂದ ಆಕೆ ಅವರಿಗೆ ಖಡಕ್ಕಾಗಿ ಉತ್ತರ ನೀಡಿದ್ದಾರೆ. ಅಂತಹ ಎದೆ ಇರುವುದಕ್ಕೆ ಹೆಮ್ಮೆ ಪಡುತ್ತಿದ್ದೀನಿ ಎಂದಿದ್ದಾರೆ."ನಾನು ಇತ್ತೀಚೆಗೆ ಒಂದು ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದೆ. ಅದರಲ್ಲಿ ಬಹಳಷ್ಟು ಮಂದಿ ನಿನ್ನ ಸ್ತನಗಳು ಯಾಕೆ ಜೋತಾಡುತ್ತಿವೆ? ಎಂದು ಕಾಮೆಂಟ್ಸ್ ಹಾಕುತ್ತಿದ್ದಾರೆ. ಪುರುಷರು ಯಾವಾಗಲೂ ಮಹಿಳೆಯರ ಸ್ತನಗಳ ಮೇಲೆ ಯಾಕೆ ಕಾಮೆಂಟ್ ಮಾಡುತ್ತಾರೆ? ನೀವು ಸಹ ವರ್ಷಾನುಗಟ್ಟಲೆ ಮಕ್ಕಳಿಗೆ ಹಾಲುಣಿಸಿ... ಮಾತನಾಡಿ. ನನಗೆ ಜೋತು ಬಿದ್ದಿರುವ ಸ್ತನಗಳು ಇರುವುದಕ್ಕೆ ಹೆಮ್ಮೆ ಪಡುತ್ತಿದ್ದೀನಿ. ಓರ್ವ ತಾಯಿ ಆಗಿದ್ದಕ್ಕೆ ಹೆಮ್ಮೆ ಅನ್ನಿಸುತ್ತಿದೆ. ಮಕ್ಕಳಿಗೆ ಹಾಲುಣಿಸಲು ಪಂಪುಗಳನ್ನು ಬಳಸಿಲ್ಲ" ಎಂದು ಸ್ವಸ್ತಿಕಾ ಹೇಳಿದ್ದಾರೆ.

"ಈ ದಿನ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ.. ಎಲ್ಲರೂ ಅದರ ಸುತ್ತ ಸರ್ಕಸ್ ಮಾಡುತ್ತಿದ್ದಾರೆ. ವಾಸ್ತವವಾಗಿ ಮಹಿಳೆಯರು ತುಂಬಾ ಪರ್‌ಫೆಕ್ಟ್ ಆಗಿ ಇರಬೇಕು. ಒಳ್ಳೆಯ ಸ್ತನಗಳು, ಪುಷ್ಠ, ಸೊಂಟ, ತುಟಿ ಇರಬೇಕು. ಆ ರೀತಿ ಇಲ್ಲದಿದ್ದರೆ ಸರ್ಜರಿ ಮಾಡಿಕೊಂಡು ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಟ್ರೋಲ್ ಮಾಡುತ್ತಾರೆ" ಎಂದಿದ್ದಾರೆ. "ಹೌದು, ನನ್ನ ಸ್ತನಗಳು ನೇತಾಡುತ್ತಿವೆ. ಆ ಸ್ತನಗಳೆಂದರೆ ನನಗಿಷ್ಟ. ಅವುಗಳ ಮೇಲೆ ಕಾಮೆಂಟ್ ಮಾಡುತ್ತಾ ಎಂಜಾಯ್ ಮಾಡಿ" ಎಂದು ಸ್ವಸ್ತಿಕಾ ಕಾಮೆಂಟ್‌ಗಳನ್ನು ಹಾಕಿದ್ದಾರೆ.

ಪ್ರಮುಖ ಬಂಗಾಳಿ ನಟ ಶಾಂತು ಮುಖೋಪಾಧ್ಯಾಯ ಮಗಳು ಸ್ವಸ್ತಿಕಾ ಮುಖರ್ಜಿ. ವಿವಾದಾತ್ಮಕ ಸಿನಿಮಾಗಳ ಮೂಲಕ ಅವರು ಗುರುತಿಸಿಕೊಂಡಿದ್ದಾರೆ. ಟೇಕ್ ಒನ್ ಎಂಬ ಸಿನಿಮಾದಲ್ಲಿ ಆಕೆ ಅರೆ ನಗ್ನವಾಗಿ ನಟಿಸಿದ್ದಾರೆ. ಒಳ್ಳೆಯ ಅಭಿಯದ ಜತೆಗೆ ಸೌಂದರ್ಯದ ಮೂಲಕ ರಂಜಿಸುತ್ತಾ ಹಾಟ್ ಸ್ಟಾರ್ ಆಗಿ ಸ್ವಸ್ತಿಕಾ ಹೆಸೌ ಮಾಡಿದ್ದಾರೆ. ಅಷ್ಟೇ ಅಲ್ಲ ಬೋಲ್ಡ್ ಕಾಮೆಂಟ್ಸ್‌ನಿಂದ ಸುದ್ದಿಯಲ್ಲಿರುತ್ತಾರೆ. ಇದೀಗ ತಾಜಾ ವಿವಾದದ ಮೂಲಕ ಆಕೆ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದಾರೆ.

No comments