Header Ads

test

ಅಪರೂಪದ ದಾಖಲೆ ಇದು, ಒಂದೇ ಹೆರಿಗೆಯಲ್ಲಿ ಆರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಒಂದೇ ಹೆರಿಗೆಯಲ್ಲಿ ಅವಳಿ ಮಕ್ಕಳಾದರೇನೇ ಅಚ್ಚರಿ ಪಡುತ್ತೇವೆ. ಮೂವರು, ನಾಲ್ಕು ಮಂದಿ, ಐದು ಮಕ್ಕಳು ಜನಿಸಿದರೆ ಮೂಗಿನ ಮೇಲೆ ಬೆರಳಿಡುತ್ತೇವೆ. ಅಂತಹದ್ದರಲ್ಲಿ ಒಂದೇ ಹೆರಿಗೆಯಲ್ಲಿ ಆರು ಮಕ್ಕಳಿಗೆ ಜನ್ಮ ನೀಡಿದ್ದಾರೆ ಆ ಮಹಾತಾಯಿ. ಈ ಘಟನೆ ಯುಎಸ್‌ನಲ್ಲಿನ ಟೆಕ್ಸಾಸ್‌‍ನಲ್ಲಿ ನಡೆದಿದೆ.

ಈ ಅಪರೂಪದ ಘಟನೆ 4.7 ಬಿಲಿಯನ್ ಮಂದಿಯಲ್ಲಿ ಒಬ್ಬರಿಗೆ ಮಾತ್ರ ಈ ರೀತಿ ಆಗುವ ಸಾಧ್ಯತೆಗಳಿವೆಯಂತೆ. ಅಂದರೆ 470 ಕೋಟಿ ಮಂದಿಯಲ್ಲಿ ಒಬ್ಬರು ಮಾತ್ರ ಈ ರೀತಿ ಮಕ್ಕಳನ್ನು ಹೆರುತ್ತಾರೆ. ಟೆಕ್ಸಾಸ್‌ನಲ್ಲಿ ಇರುವ ವುಮೆನ್ಸ್ ಆಸ್ಪತ್ರೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಜನಿಸಿದ ಆರು ಮಕ್ಕಳಲ್ಲಿ ನಾಲ್ಕು ಮಂದಿ ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈ ರೀತಿಯ ಡೆಲಿವರಿಯನ್ನು ಸಿಕ್ಸ್ ಟಪ್ಲೆಟ್ಸ್ ಎನ್ನುತ್ತಾರೆ. ಸಿಕ್ಸ್ ಟಪ್ಲೆಟ್ಸ್ ಎಂದರೆ ಒಂದೇ ಹೆರಿಗೆಯಲ್ಲಿ ಆರು ಮಂದಿ ಮಕ್ಕಳು ಜನಿಸುವುದು.


ಆಸ್ಪತ್ರೆ ಮೂಲಗಳ ಪ್ರಕಾರ, ಮೊದಲು ಇಬ್ಬರು ಗಂಡು ಮಕ್ಕಳು, ಆ ಬಳಿಕ ಇಬ್ಬರು ಗಂಡು ಮಕ್ಕಳು, ಆ ಬಳಿಕ ಇಬ್ಬರು ಹೆಣ್ಣು ಮಕ್ಕಳಿಗೆ ಆ ಮಹಾತಾಯಿ ಜನ್ಮ ನೀಡಿದ್ದಾರೆ. ಸದ್ಯಕ್ಕೆ ಆರು ಮಕ್ಕಳು ಆರೋಗ್ಯವಾಗಿ ಇದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಬೆಳಗ್ಗೆ 4.50ರಿಂದ 4.59ರವರೆಗೂ 9 ನಿಮಿಷಗಳಲ್ಲಿ ಆರು ಮಕ್ಕಳಿಗೆ ಜನ್ಮ ನೀಡಿದ್ದಾರೆ ಆ ತಾಯಿ. ಸದ್ಯಕ್ಕೆ ತಾಯಿ ತೆಲ್ಮಾ ಚಿಯಾಕ ಸಹ ಆರೋಗ್ಯವಾಗಿ ಇರುವುದಾಗಿ ವೈದ್ಯರು ತಿಳಿಸಿದ್ದಾರೆ.

No comments