Header Ads

test

ಹೈ ಬಿಪಿ ಇದೆಯೇ..? ಏನು ಪರವಾಗಿಲ್ಲ... ಇವನ್ನು ತೆಗೆದುಕೊಳ್ಳಿ ಸಾಕು..!

ಹೈ ಬ್ಲಡ್ ಪ್ರೆಷರ್ ಅಥವಾ ಹೈಬಿಪಿ... ಸದ್ಯಕ್ಕೆ ಬಹಳಷ್ಟು ಮಂದಿ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬಿಪಿ ಹೆಚ್ಚಾಗಿರುವ ಕಾರಣ ಕೆಲವರಿಗೆ ಹೃದಯ ಸಂಬಂಧಿ ಕಾಯಿಲೆಗಳು ಸಹ ಬರುತ್ತಿವೆ. ಆದರೆ ಯಾರಿಗೇ ಆಗಲಿ ಹೈ ಬಿಪಿ ಬರಲು ಅನೇಕ ಕಾರಣಳಿರುತ್ತವೆ. ಆದರೆ ಹೈ ಬಿಪಿ ಬಂದರೂ ಸರಿ.. ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ಪೊಟ್ಯಾಷಿಯಂ ಹೆಚ್ಚಾಗಿ ಇರುವ ಆಹಾರವನ್ನು ನಿತ್ಯ ತೆಗೆದುಕೊಳ್ಳುವುದರಿಂದ ಹೃದಯ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳಬಹುದು. ಅದೇ ರೀತಿ ಹೈಬಿಪಿ ಸಹ ಕಡಿಮೆಯಾಗುತ್ತದೆ ಎಂದು ನ್ಯೂಟ್ರಿಷಿಯನ್ಸ್ ಹೇಳುತ್ತಿದ್ದಾರೆ. ಹಾಗಿದ್ದರೆ ಪೊಟ್ಯಾಷಿಯಂ ಯಾವ್ಯಾವ ಅಹಾರಗಳಲ್ಲಿ ಹೆಚ್ಚಾಗಿದೆ ಎಂಬುದನ್ನು ಈಗ ನೋಡೋಣ.



1. ಬಾಳೆ ಹಣ್ಣು
ಬಾಳೆಹಣ್ಣಿನಲ್ಲಿ ಪೊಟ್ಯಾಷಿಯಂ ಹೆಚ್ಚಾಗಿ ಇರುತ್ತದೆ. ಒಂದು ಸಾಮಾನ್ಯ ಸೈಜಿನಲ್ಲಿರುವ ಬಾಳೆಹಣ್ನು ತಿಂದರೆ ನಮಗೆ 500 ಮಿಲಿ ಗ್ರಾಮ್ ಪೊಟ್ಯಾಷಿಯಂ ಸಿಗುತ್ತದೆ. ಬಾಳೆಹಣ್ಣನ್ನು ನೇರವಾಗಿ ತಿನ್ನಬಹುದು. ಅಥವಾ ಬನಾನಾ ಶೇಕ್, ಓಟ್‌ಮೀಲ್ ನಂತಹವನ್ನು ಬೆರೆಸಿಕೊಂಡು ತಿನ್ನಬಹುದು. ಹೇಗೆ ತಿಂದರೂ ಬಾಳೆಹಣ್ಣಿನ ಮೂಲಕ ಲಭಿಸುವ ಪೊಟ್ಯಾಷಿಯಂ ಹೈಬಿಪಿಯನ್ನು ನಿಯಂತ್ರಣದಲ್ಲಿ ಇಡುತ್ತದೆ.

2. ಡ್ರೈ ಯಾಪ್ರಿಕಾಟ್ಸ್
ಡ್ರೈ ಯಾಪ್ರಿಕಾಟ್ಸನ್ನು ನಿತ್ಯ ಆಹಾರದಲ್ಲಿ ಭಾಗವಾಗಿ ತೆಗೆದುಕೊಳ್ಳುವುದರಿಂದ ದೇಹದಲ್ಲಿ ಪೊಟ್ಯಾಷಿಯಂ ಪ್ರಮಾಣ ಸಮತೋಲನದಿಂದ ಇರುತ್ತದೆ. ಇದರಿಂದ ಹೈಬಿಪಿ ಕಡಿಮೆಯಾಗುತ್ತದೆ. ಇವನ್ನು ಬೇರೆ ಪದಾರ್ಥದೊಂದಿಗೂ ಬೆರೆಸಿಕೊಂಡು ತಿನ್ನಬಹುದು.

3. ಮೀನುಗಳು
ಮೀನುಗಳಲ್ಲಿ ನಮ್ಮ ದೇಹಕ್ಕೆ ಉಪಯೋಗವಾಗುವ ಪ್ರೋಟೀನ್‌ ಜತೆಗೆ ಪೊಟ್ಯಾಷಿಯಂ ಸಹ ಹೇರಳವಾಗಿ ಇರುತ್ತದೆ. ಅದೇ ರೀತಿ ವಿಟಮಿನ್, ಒಮೆಗಾ 3 ಫ್ಯಾಟಿ ಆಸಿಡ್‌ಗಳು ಸಹ ಮೀನಿನಲ್ಲಿ ಇರುತ್ತವೆ. 170 ಗ್ರಾಂ ತೂಕವುಳ್ಳ ಒಂದು ಮೀನಿನ ತುಂಡನ್ನು ತಿಂದರೆ 650 ಮಿಲಿ ಗ್ರಾಂ ಪೊಟ್ಯಾಷಿಯಂ ಲಭಿಸುತ್ತದೆ. ಇದರಿಂದ ಹೈಬಿಪಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

4. ಬ್ರೊಕೋಲಿ
ಡಾರ್ಕ್ ಗ್ರೀನ್ ಬಣ್ಣದಲ್ಲಿ ಇರುವ ಬ್ರೊಕೋಲಿಯನ್ನು ತೆಗೆದುಕೊಳ್ಳುವುದರಿಂದ ಹೈ ಬಿಪಿ ಕಡಿಮೆಯಾಗುತ್ತದೆ. ಇದರಲ್ಲಿ ವಿಟಮಿನ್ ಸಿ, ಕೆ, ಫೋಲೇಟ್, ಫೈಬರ್,ಪೊಟ್ಯಾಷಿಯಂ ಹೇರಳವಾಗಿ ಇರುತ್ತದೆ. ಇದರ ಜತೆಗೆ ಬ್ರೊಕೋಲಿಯನ್ನು ತಿನ್ನುವುದರಿಂದ ಕ್ಯಾಲರಿಗಳು ಲಭಿಸುತ್ತವೆ. ತೂಕ ಸಹ ನಿಯಂತ್ರಣದಲ್ಲಿ ಇರುತ್ತದೆ.

5. ಅವಕೋಡಾ
ಇವುಗಳಲ್ಲಿ ಪೊಟ್ಯಾಷಿಯಂ ಪುಷ್ಕಳವಾಗಿ ಇರುತ್ತದೆ. ಇದು ದೇಹದ ಮೆಟಾಬಾಲಿಸಂ ಹೆಚ್ಚಿಸುತ್ತದೆ. ಹೈಬಿಪಿಯನ್ನು ಕಡಿಮೆ ಮಾಡುತ್ತದೆ. ಒಂದು ಅವಕಾಡೋ ತಿಂದರೆ ನಮಗೆ ಸುಮಾರು 1067 ಮಿಲಿ ಗ್ರಾಂ ಪೊಟ್ಯಾಷಿಯಂ ಲಭಿಸುತ್ತದೆ.

6. ಎಳನೀರು
ಹೈಬಿಪಿ ಇರುವವರಿಗೆ ಎಳನೀರನ್ನು ಒಳ್ಳೆಯ ಆಯ್ಕೆ ಎಂದು ಹೇಳಬಹುದು. ಬಿಪಿ ಹೆಚ್ಚಾದರೆ ಎಳನೀರನ್ನು ಕುಡಿದರೆ ಸಾಕು. ಕೂಡಲೆ ಬಿಪಿ ನಿಯಂತ್ರಣಕ್ಕೆ ಬರುತ್ತದೆ. ದೇಹವನ್ನು ಎಳನೀರು ಹೈಡ್ರೇಟೆಡ್ ಆಗಿ ಇಡುತ್ತದೆ. ಅದೇ ರೀತಿ ಹೆಚ್ಚು ತೂಕವನ್ನು ಕಡಿಮೆ ಮಾಡಲು ಸಹಕಾರಿ.

7. ಪಾಲಾಕ್
ಪಾಲಾಕ‌ನಲ್ಲಿ ಪೊಟ್ಯಾಷಿಯಂ ಸಮೃದ್ಧವಾಗಿ ಇರುತ್ತದೆ. ನಿತ್ಯ ಪಾಲಾಕನ್ನು ಆಹಾರದ ಭಾಗವಾಗಿ ತೆಗೆದುಕೊಂಡಾರೆ ಹೈಬಿಪಿಯನ್ನು ಕಡಿಮೆ ಮಾಡಬಹುದು.

No comments