Header Ads

test

’ಅಮ್ಮ’ನನ್ನು ಹಲ್ವಾ ತಿನ್ನಿಸಿ ಸಾಯಿಸಿದರು, ಜಯಲಲಿತಾರದ್ದು ಪಕ್ಕಾ ಹತ್ಯೆ ಎಂದು ಸ್ಪಷ್ಟೀಕರಣ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನ ಬಗ್ಗೆ ಮತ್ತೊಮ್ಮೆ ತಮಿಳುನಾಡು ಕಾನೂನು ಸಚಿವ ಸಿವಿ ಷಣ್ಮುಗಂ ಗಂಭೀರ ಹೇಳಿಕೆ ನೀಡಿದ್ದಾರೆ. ಹಲ್ವಾ ತಿನ್ನಿಸಿ ಜಯಲಲಿತಾರನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜಯಲಲಿತಾರದ್ದು ದೂಸರಾ ಮಾತೇ ಇಲ್ಲ, ಅವರದು ಹತ್ಯೆ ಎಂಬುದು ವಿಚಾರಣೆ ನಡೆಸಿದರೆ ವಾಸ್ತವಗಳು ಹೊರಬೀಳುತ್ತವೆ ಎಂದಿದ್ದಾರೆ. ದಿವಂಗತ ಸಿಎಂ ಜಯಲಲಿತಾ ಮರಣದ ಹಿಂದೆ ಇರುವ ಮಿಸ್ಟರಿಯನ್ನು ಭೇದಿಸಲು ಆರ್ಮುಗ ಸ್ವಾಮಿ ಕಮೀಷನ್ ಮುಂದಡಿ ಇಟ್ಟಿರುವುದು ಗೊತ್ತೇ ಇದೆ. ಈ ಕಮಿಷನ್ ವಿಚಾರಣೆಯಲ್ಲಿ ಆರೋಗ್ಯ ಇಲಾಖೆ ಕಾರ್ಯದರ್ಶಿಯಾಗಿರುವ ರಾಧಾಕೃಷ್ಣನ್ ನೀಡಿದ ಹೇಳಿಕೆ, ವರದಿ ಬಗ್ಗೆ ಕಾನೂನು ಸಚಿವ ಸಿವಿ ಷಣ್ಮುಗಂ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.


ಅಪೊಲೊ ಆಡಳಿತ ಮಂಡಳಿಗೆ ಅನುಕೂಲವಾಗಿ ರಾಧಾಕೃಷ್ಣನ್ ವ್ಯವಹರಿಸುತ್ತಿದ್ದಾರೆಂದು, ಯಾರನ್ನೋ ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಇದು ವಿಕೋಪಕ್ಕೆ ಹೋಗಿ ಐಎಎಸ್, ಸಚಿವರ ನಡುವೆ ಮಾತಿನ ಚಕಮಕಿಗೆ ಪಾತ್ರವಾಯಿತು. ಈ ಹಿನ್ನೆಲೆಯಲ್ಲಿ ಜಯಲಲಿತಾ ಮರಣದ ವಿಚಾರದಲ್ಲಿ ಸಿವಿ ಷಣ್ಮುಗಂ ಇನ್ನೊಂದಿಷ್ಟು ಸಂಚಲನಕ್ಕೆ ಕಾರಣವಾಗುವ ಹೇಳಿಕೆಗಳನ್ನು ನೀಡಿದ್ದಾರೆ.

ಬುಧವಾರ ವಿಲ್ಲುಪುರಂ ಜಿಲ್ಲೆ ಕಳ್ಳುಕುರಿಚ್ಚಿಯಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಷಣ್ಮುಗಂ ಈ ಹೇಳಿಕೆ ನೀಡಿದ್ದಾರೆ. ಜಯಲಲಿತಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದ ಸಮಯದಲ್ಲಿ ಸ್ಲೋ ಪಾಯಿಸನ್ ಆಗಿ ಸಿಹಿ ತಿಂಡಿಗಳನ್ನು ನೀಡುವುದು ಆರಂಭಿಸಿದರು ಎಂದು ಆರೋಪಿಸಿದ್ದಾರೆ. ಮುಖ್ಯವಾಗಿ ಹಲ್ವಾ ಹೆಚ್ಚಿನ ಪ್ರಮಾಣದಲ್ಲಿ ಕೊಟ್ಟು ಸಾಯಿಸಿದರು ಎಂದು ಹೊಸ ಆರೋಪವನ್ನು ಮಾಡಿದ್ದಾರೆ. ಜಯಲಲಿತಾರಿಗೆ ಮಧುಮೇಹ ಇರುವುದನ್ನೇ ಅಸ್ತ್ರ ಮಾಡಿಕೊಂಡು, ಕೊನೆಯ ಕ್ಷಣಗಳಲ್ಲಿ ಹೃದಯಾಘಾತವಾಗುವ ರೀತಿಯಲ್ಲಿ ಪರಿಸ್ಥಿತಿ ಬದಲಾಗುವ ರೀತಿ ಹಲ್ವಾ ತಿನ್ನಿಸಿದ್ದಾಗಿ ಆರೋಪಿಸಿದರು.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ದಾಖಲಾಗಿದ್ದ ಅಪೊಲೊ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಪ್ರತಾಪ್ ಸಿ ರೆಡ್ಡಿ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದ್ದರು. ಅಪೋಲೋ ಆಸ್ಪತ್ರೆಯ 24 ಹಾಸಿಗೆಗಳ ತೀವ್ರ ನಿಗಾ ಘಟಕದಲ್ಲಿ ಜಯಲಲಿತಾ ಒಬ್ಬರೇ ಇದ್ದರು. ಆಗ ಆಸ್ಪತ್ರೆಯ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಬಂದ್ ಮಾಡಲಾಗಿತ್ತು ಎಂದಿದ್ದರು.

ಜಯಲಲಿತಾ ಅವರ ಆರೋಗ್ಯದ ಬಗ್ಗೆ ವಿಚಾರಣೆ ನಡೆಸುತ್ತಿರುವ ಜಸ್ಟೀಸ್ ಆರ್ಮುಗಸ್ವಾಮಿ ಆಯೋಗಕ್ಕೆ ಈ ಸಂಬಂಧ ದಾಖಲೆಗಳನ್ನು ಸಲ್ಲಿಸಿರುವುದಾಗಿ ವರದಿಗಾರರಿಗೆ ಅವರು ಮಾಹಿತಿ ನೀಡಿದರು.

No comments