Header Ads

test

ಹೊಸ ಜೋಡಿಗೆ ಗಿಫ್ಟ್ ನೀಡಿದ... ಮೂರು ತಿಂಗಳ ಬಳಿಕ ಬೈ ಮಿಸ್ಟೇಕ್ ನೀಡಿದೆ ಎಂದು ಅದನ್ನು ಹಿಂಪಡೆ ಆಸಾಮಿ

ನಮ್ಮ ದೇಶದಲ್ಲಿ ಮದುವೆ, ಇನ್ನಿತರೆ ಕಾರ್ಯಕ್ರಮಗಳಿಗೆ ಹಾಜರಾದರೆ ಉಡುಗೊರೆ ನೀಡುವುದು ಸಾಮಾನ್ಯ. ಕೆಲವರು ಹಣದ ರೂಪದಲ್ಲಿ ಗಿಫ್ಟ್ ನೀಡುತ್ತಿದ್ದರೆ, ಇನ್ನೂ ಕೆಲವರು ವಸ್ತುಗಳ ರೂಪದಲ್ಲಿ ನೀಡುತ್ತಿರುತ್ತಾರೆ. ಕೇವಲ ಭಾರತದಲ್ಲಿ ಅಷ್ಟೇ ಅಲ್ಲದೆ, ವಿವಿಧ ದೇಶಗಳಲ್ಲೂ ಸಹ ಈ ಗಿಫ್ಟ್‌ಗಳ ಸಂಪ್ರದಾಯ ಇದೆ ಎಂಬ ಸಂಗತಿ ವಿಶೇಷವಾಗಿ ಹೇಳುವ ಅಗತ್ಯವಿಲ್ಲ.

ವಿದೇಶಗಳಲ್ಲಿ ಮುಖ್ಯವಾಗಿ ಅಮೆರಿಕ, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಗಿಫ್ಟ್ ಆಗಿ ಗೊಂಬೆಗಳನ್ನು ನೀಡದೆ ಹಣದ ರೂಪದಲ್ಲಿ ಕೊಡಬೇಕು ಎಂದು ಬಯಸುತ್ತಾರೆ. ಗಿಫ್ಟ್ ರೂಪದಲ್ಲಿ ಬಂದ ಹಣದೊಂದಿಗೆ ಮಧುಚಂದ್ರಕ್ಕೆ ಹೊಸ ಜೋಡಿ ಪ್ಲಾನ್ ಮಾಡಿಕೊಳ್ಳುತ್ತದೆ.



ಕೆಲ ತಿಂಗಳ ಹಿಂದೆ ಆಸ್ಟ್ರೇಲಿಯಾ ಮೂಲದ ವ್ಯಕ್ತಿಗೆ ಒಂದು ಹೊಸ ಅನುಭವ ಎದುರಾಯಿತು. ಮದುವೆ ಬಳಿಕ ಹನಿಮೂನ್ ಹೋಗಲು ಗಿಫ್ಟ್ ರೂಪದಲ್ಲಿ ಹಣ ನೀಡಿ ಎಂದು ಮನವಿ ಮಾಡಿದ್ದರು. ಹಾಗಾಗಿ ಬಹಳಷ್ಟು ಮಂದಿ ಬಂಧುಗಳು ತಮಗೆ ತೋಚಿದಷ್ಟು ಹಣವನ್ನು ಚೆಕ್ ರೂಪದಲ್ಲಿ, ನಗದು ರೂಪದಲ್ಲಿ ನೀಡಿದ್ದರು. ಆ ರೀತಿ ಅವರಿಗೆ ಭಾರಿ ಪ್ರಮಾಣದಲ್ಲಿ ಹಣ ಬಂದು ತಲುಪಿತು. ಆದರೆ ಎಲ್ಲರಿಗಿಂತ ವರನ ಮಾವ ನೀಡಿದ ಗಿಫ್ಟ್ ನೋಡಿ ಆ ಜೋಡಿ ಚಕಿತಗೊಂಡಿತ್ತು. ಎಲ್ಲರಿಗಿಂತ ಹೆಚ್ಚು 160 ಫೌಂಡ್ ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 15000 ಸಾವಿರ ರೂಪಾಯಿ.

ಅವರು ನೀಡಿದ ಹದಿನೈದು ಸಾವಿರ ರೂಪಾಯಿ ಫೌಂಡ್‌ಗಳಿಗೆ ಹೊಸ ಜೋಡಿ ತುಂಬಾ ಸಂತೋಷ ಪಟ್ಟಿತು. ಒಟ್ಟು ಬಂದ ಹಣದಲ್ಲಿ ಹನಿಮೂನ್ ಎಂಜಾಯ್ ಮಾಡಿದರು. ಮದುವೆ ಆದ ಮೂರು ತಿಂಗಳ ಬಳಿಕ ವರನ ಮಾವ ಎಡವಟ್ಟು ಮಾಡಿದರು. ದಯವಿಟ್ಟು ನಾನು ಕೊಟ್ಟ ಹಣವನ್ನು ವಾಪಸ್ ನೀಡಿ ಎಂದು ಅವರ ಬಳಿ ಕೇಳಿದನಂತೆ. 16 ಫೌಂಡ್‌ಗಳನ್ನು ನೀಡಬೇಕು ಎಂದುಕೊಂಡ ನಾನು 160 ಫೌಂಡ್ ಎಂದು ಬರೆದೆ. ಹಾಗಾಗಿ 16 ಫೌಂಡ್ ಇಟ್ಟುಕೊಂಡು ಉಳಿದ ಹಣವನ್ನು ವಾಪಸ್ ಕೊಡಬೇಕು ಎಂದು ಕೇಳಿದರಂತೆ. ಇದರಿಂದ ಆ ಜೋಡಿ ಶಾಕ್ ಆಗಿದೆ.

ಅವರು ಆ ಹಣವನ್ನು ವಾಪಸ್ ಕೇಳಿದ್ದು ನಮಗೆ ಶಾಕ್ ಆಯಿತು ಎಂದು ವಧು ಹೇಳಿದ್ದಾರೆ. ಸ್ವಲ್ಪ ಕಿರಿಕಿರಿ ಅನ್ನಿಸಿದರೂ ಸಹ ಆ ಹಣವನ್ನು ಅವರಿಗೆ ವಾಪಸ್ ನೀಡಿದೆವು ಎಂದು ಆಕೆ ಹೇಳಿದ್ದಾರೆ.

ನಮ್ಮ ಹೊಸ ಸಂಸಾರದಲ್ಲಿ ನಡೆದ ಈ ಕಹಿ ಘಟನೆಯನ್ನು ನಾನು ಎಂದಿಗೂ ಮರೆಯಲ್ಲ ಎಂದಿದ್ದಾರೆ. ಆಸ್ಟ್ರೇಲಿಯಾದ ಫೇಸ್‌ಬುಕ್ ಪುಟದಲಿ ಈ ಇಷಯವನ್ನು ಅವರು ಹೇಳಿಕೊಂಡಿದ್ದಾರೆ. ಇದರಿಂದ ಈ ಘಟನೆ ಸದ್ಯಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

No comments