Header Ads

test

ಧೋನಿ ಎಂದರೆ ಇದೆ ನೋಡಿ, ಧೋನಿ ಷೇಕ್ ಹ್ಯಾಂಡ್‌ಗಾಗಿ ಮೈದಾನಕ್ಕೆ ಬಂದ ಅಭಿಮಾನಿ ಹೇಗೆಲ್ಲಾ ಆಟ ಆಡಿಸಿದ ನೋಡಿ

ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಎಂ ಎಸ್ ಧೋನಿಗೆ ಫ್ಯಾನ್ ಫಾಲೋಯಿಂಗ್ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಎರಡನೇ ಏಕದಿನದಂದು ಧೋನಿಗಾಗಿ ಓರ್ವ ಅಭಿಮಾನಿ ಸಾಹಸ ಮಾಡಿದ. ಇದ್ದಕ್ಕಿದ್ದಂತೆ ರಕ್ಷಣಾ ವಲಯನ್ನು ದಾಟಿಕೊಂಡು ಮೈದಾನಕ್ಕೆ ಓಡಿ ಬಂದ. ಭಾರತ ಬ್ಯಾಟಿಂಗ್ ಮುಗಿಸಿದ ಬಳಿಕ ಫೀಲ್ಡಿಂಗ್ ಮಾಡಲು ತಂಡದ ಸದಸ್ಯರು ಮೈದಾನಕ್ಕೆ ಹೋಗುತಿರುವ ಸಮಯದಲ್ಲಿ ಧೋನಿಗೆ ಷೇಕ್ ಹ್ಯಾಂಡ್ ನೀಡಲು ಅಭಿಮಾನಿ ಪ್ರಯತ್ನಿಸಿದ.


ಆದರೆ ಅಭಿಮಾನಿಯಿಂದ ತಪ್ಪಿಸಿಕೊಳ್ಳಲು ಧೋನಿ ಸ್ಟೇಡಿಯಂ ಒಳಕ್ಕೆ ಓಡಿ ಹೋದ. ಆದರೂ ಆ ಅಭಿಮಾನಿ ಬಿಡಲಿಲ್ಲ. ಧೋನಿಯನ್ನು ಹಿಂಬಾಲಿಸಿದ, ಅಲ್ಲೂ ಧೋನಿ ಆ ಅಭಿಮಾನೈಯಿಂದ ತಪ್ಪಿಸಿಕೊಂಡು ಓಡಿದ. ಕೊನೆಗೆ ಆ ಅಭಿಮಾನಿ ಬಿಡದ ಕಾರಣ ಧೋನಿ ಕೂಲ್ ಆಗದೆ ವಿಧಿ ಇರಲಿಲ್ಲ. ಇದರಿಂದ ವಿಕೆಟ್‌ಗಳ ಬಳಿ ನಿಂತು ಬಿಟ್ಟ ಧೋನಿಯನ್ನು ಅಭಿಮಾನಿ ಓಡಿ ಹೋಗಿ ಜೋರಾಗಿ ಆಲಿಂಗಿಸಿಕೊಂಡು ಆನಂದದಿಂದ ಸಂಭ್ರಮಿಸಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ವೈರಲ್ ಆಗಿದೆ.

ಅದೇನೇ ಇರಲಿ ಧೋನಿಗೆ ಈ ರೀತಿ ಅಭಿಮಾನಿಗಳ ಕಾಟ ಅಷ್ಟಿಷ್ಟಲ್ಲ. ಎಷ್ಟೇ ಒತ್ತಡದಲ್ಲಿದ್ದರೂ ಧೋನಿ ಮಾತ್ರ ಅಭಿಮಾನಿಗಳ ಆಸೆಗೆ ಎಂದೂ ತಣ್ಣೀರೆರಚಿಲ್ಲ. ಈಗಲೂ ತಮ್ಮ ಹಳೆಯ ಗೆಳೆಯನ್ನು ಭೇಟಿ ಮಾಡಿ ರಸ್ತೆ ಬದಿಯಲ್ಲೇ ಟೀ, ಕಾಫಿ ಸೇವಿಸುತ್ತಾರೆ.

ಸೆಲೆಬ್ರಿಟಿಗಳು ಎಂದ ಮೇಲೆ ಈ ರೀತಿಯ ಅಭಿಮಾನಿಗಳು ಇದ್ದೇ ಇರುತ್ತಾರೆ. ಮುಖ್ಯವಾಗಿ ಕ್ರಿಕೆಟ್ ಆಟಗಾರರಿಗೆ ಅಭಿಮಾನಿಗಳ ಕಾಟ ಜಾಸ್ತಿ. ಒಮ್ಮೊಮ್ಮೆ ಅಭಿಮಾನಿಗಳ ಹುಚ್ಚಾಟ ಇವರನ್ನು ಪೇಚಿಗೆ ಸಿಲುಕಿಸುವುದೂ ಉಂಟು. ಅಭಿಮಾನಿ ಎಂದು ಹೇಳಿ ಅವರನ್ನು ಮುಟ್ಟಿ ಸಂಭ್ರಮಿಸಲಿ, ಆದರೆ ಸೆಲೆಬ್ರಿಟಿಗಳಿಗೆ ತೊಂದರೆ ಮಾಡದಿದ್ದರೆ ಸಾಕು.

ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ನಡೆದ  ವಿಶೇಷವಾದ ಘಟನೆ ಇದು. ದ್ವಿತೀಯ ಇನ್ನಿಂಗ್ಸ್ ವೇಳೆಯಲ್ಲಿ ಭಾರತೀಯ ಆಟಾಗರರು ಕ್ಷೇತ್ರರಕ್ಷಣೆಗೆಂದು ಮೈದಾನಕ್ಕಿಳಿದ ವೇಳೆಯಲ್ಲಿ ಅಭಿಮಾನಿಯೊಬ್ಬ ತಮ್ಮತ್ತ ಬರುವುದನ್ನು ಗಮನಿಸಿದ ಧೋನಿ ಓಡಲು ಆರಂಭಿಸಿದರು.

https://twitter.com/navneet_mundhra/status/1102917550914953220

ಅತ್ತಿತ್ತ ಓಡಾಡಿದ ಧೋನಿ ಕೊನೆಗೂ ತಮ್ಮ ಅಭಿಮಾನಿಗೆ ಆಶೀರ್ವಾದ ನೀಡುವ ಮೂಲಕ ಗಮನ ಸೆಳೆದರು. ಈ ಎಲ್ಲ ಘಟನೆಗಳು ಹೆಚ್ಚಿನ ಕುತೂಹಲವನ್ನುಂಟು ಮಾಡಿತ್ತು.

No comments