Header Ads

test

ಮೈ ಮೇಲಿನ ಸೀರೆ ಬಿಚ್ಚಿ... ಹೊಳೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರ ಪ್ರಾಣ ಕಾಪಾಡಿದಳು ಆ ಮಹಿಳೆ.!

ಮಾನವೀಯತೆ ಇರುವ ಯಾರೇ ಆಗಲಿ ಬೇರೆಯವರ ಪ್ರಾಣಕ್ಕೆ ಅಷ್ಟೇ ಬೆಲೆ ಕೊಡುತ್ತಾರೆ. ನಿಜವಾಗಿಯೂ ಅದರ ಬೆಲೆ ಗೊತ್ತಿದ್ದವರು ಬೇರೆಯರಿಗೆ ಸಹಾಯ ಹಸ್ತ ಚಾಚುತ್ತಾರೆ. ಪ್ರಾಣಾಪಾಯ ಸ್ಥಿತಿಯಲ್ಲಿ ಇರುವ ಯಾರನ್ನಾದರೂ ಜೀವದ ಹಂಗು ತೊರೆದು ರಕ್ಷಿಸಲು ಹೋರಾಡುತ್ತಾರೆ. ನಿಜಾಮಾಬಾದ್ ಜಿಲ್ಲೆಯ ಆ ಮಹಿಳೆ ಸಹ ಇದೇ ಪಟ್ಟಿಗೆ ಸೇರುತ್ತಾರೆ. ಯಾಕೆಂದರೆ ತನ್ನ ಪ್ರಾಣವನ್ನೂ ಲೆಕ್ಕಿಸದೆ ಆಕೆ ಮಾಡಿದ ಸಾಹಸ, ತೋರಿದ ಧೈರ್ಯ ಅಂತಹದ್ದು..!


ವಿವರಗಳನ್ನು ನೋಡಿದರೆ... ನಿಜಾಮಾಬಾದ್ ಜಿಲ್ಲೆ ಬಾಲ್ಕೊಂಡ ಮಂಡಲ ಪಂಚಾಯಿತಿ ಪೋಚಂಪಾಡ್ ಗ್ರಾಮದಲ್ಲಿ ಇತ್ತೀಚೆಗೆ ಒಂದು ಘಟನೆ ನಡೆಯಿತು. ಆ ಗ್ರಾಮದಲ್ಲಿ ಇರುವ ಕಾಕತೀಯ ಹೊಳೆ ಬಳಿ ಓರ್ವ ವ್ಯಕ್ತಿ ಕಾಲಕೃತ್ಯಗಳನ್ನು ಮುಗಿಸಿಕೊಳ್ಳುತ್ತಿದ್ದರೆ ಅಚಾನಕ್ ಆಗಿ ಆ ವ್ಯಕ್ತಿಗೆ ಹೊಳೆಗೆ ಬಿದ್ದಿದ್ದಾನೆ. ಇದನ್ನು ನೋಡಿದ ಪಕ್ಕದಲ್ಲೇ ಹೋಗುತ್ತಿದ್ದ ಹತ್ತನೇ ತರಗತಿ ವಿದ್ಯಾರ್ಥಿ ಕುನಾಲ್ ಆತನನ್ನು ರಕ್ಷಿಸಲು ಹೋಗಿ ತಾನೂ ಸಹ ಹೊಳೆಗೆ ಬಿದ್ದಿದ್ದಾನೆ.

ಕುನಾಲನ್ನು ನೋಡಿದ ದೇವದಾಸ್ ಎಂಬ ಮತ್ತೊಬ್ಬ ವ್ಯಕ್ತಿ ಸಹ ರಕ್ಷಿಸಲು ಪ್ರಯತ್ನಿಸಿ ಹೊಳೆಗೆ ಬಿದ್ದಿದ್ದಾನೆ. ಈ ರೀತಿ ಮೂವರೂ ಕಾಲುವೆಯಲ್ಲಿ ಕೊಚ್ಚಿ ಹೋಗುವುದನ್ನು ಗಮನಿಸಿದ ಸ್ಥಳೀಯರು ಜೋರಾಗಿ ಕೂಗಿಕೊಂಡರು. ಅದೇ ಸಮಯದಲ್ಲಿ ಛಾಯಾ ಬಾಯಿ ಎಂಬ ಮಹಿಳೆಗೆ ಅತ್ತ ಕಡೆಗೆ ಬರುತ್ತಿದ್ದರು. ಹೊಳೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರನ್ನು ನೋಡಿದಳು. ಕೂಡಲೆ ಹಿಂದೆ ಮುಂದೆ ಆಲೋಚಿಸದೆ ಅವರನ್ನು ರಕ್ಷಿಸಲು ಮುನ್ನುಗ್ಗಿದಳು. ಸುತ್ತಲೂ ಎಲ್ಲರೂ ಇದ್ದಾರೆ. ತಾನೊಬ್ಬ ಮಹಿಳೆ ಎಂಬುದನ್ನೂ ನೋಡದೆ ಉಟ್ಟ ಸೀರೆಯನ್ನು ತೆಗೆದು ಹೊಳೆಗೆ ಎಸೆದಿದ್ದಾಳೆ. ಆ ಸೀರೆಯನ್ನು ಹಿಡಿದ ಮೂವರೂ ಹೊರಬಂದಿದ್ದಾರೆ.

ಅವರನ್ನು ಮೇಲೆಳೆಯರು ದಂಡೆಯಲ್ಲಿದ್ದ ಇತರರು ಸಹ ಸಹಾಯ ಮಾಡಿದರು. ಕಡೆಗೆ ಛಾಯಾ ಬಾಯಿ ಅವರ ಸಾಹಸವನ್ನು ಎಲ್ಲರೂ ಹಾಡಿ ಹೊಗಳಿದ್ದಾರೆ. ಸೀರೆಯನ್ನು ಎಸೆದು ಮೂವರ ಪ್ರಾಣ ಕಾಪಾಡಿದ ಆಕೆಯ ಸಾಹಸಕ್ಕೆ ಕೈ ಮುಗಿದಿದ್ದಾರೆ. ಛಾಯಾ ಬಾಯಿ ಧೈರ್ಯವನ್ನು, ಸಾಹಸನ್ನು ನಿಜವಾಗಿ ನಾವು ಸಹ ಅಭಿನಂದಿಸಬೇಕಾದದ್ದೇ.!

ಇಂತಹ ಸಂದರ್ಭದಲ್ಲಿ ಬೇರೆ ಯಾರಾದರೂ ಆಗಿದ್ದರೆ ನಮಗ್ಯಾಕೆ ಬಂತು ಉಸಾಬರಿ ಎಂದೋ, ಅಥವಾ ತಲೆ ಓಡದೆ ಏನು ಮಾಡಬೇಕು ಎಂದು ಗೊತ್ತಾಗದೆ ಅಗ್ನಿಶಾಮಕ ದಳಕ್ಕೋ ಫೋನ್ ಮಾಡುತ್ತಿದ್ದರು. ಅವರು ಬರುವಷ್ಟರಲ್ಲಿ ಅವರು ಜೀವ ಸಮೇತ ಇರುತ್ತಿದ್ದಾರಾ? ಛಾಯಾ ಬಾಯಿ ಅವರ ಸಮಯಪ್ರಜ್ಞೆಯನ್ನು ಮೆಚ್ಚಬೇಕಾದದ್ದೇ.

No comments