Header Ads

test

ಚಿನ್ನದ ಐಸ್‌ಕ್ರೀಮ್ ತಿಂದ ಬಾಲಿವುಡ್ ಬ್ಯೂಟಿ, ಆ ಐಸ್‌ಕ್ರೀಮ್ ಬೆಲೆ ಎಷ್ಟು ಗೊತ್ತಾ..?

ಬಂಗಾರದ ಐಸ್‌ಕ್ರೀಮ್ ತಿಂದ ಬಾಲಿವುಡ್ ಬ್ಯೂಟಿ.... ಬಾಲಿವುಡ್ ಬ್ಯೂಟಿ ಏನು... ಬಂಗಾರದ ಐಸ್‌ಕ್ರೀಸ್ ತಿನ್ನುವುದು ಎಂದರೆ ಹೇಗೆ.. ಎಂದು ಚಕಿತರಾಗುತ್ತಿದ್ದೀರಾ.. ಓದಲು ವಿಚಿತ್ರ ಅನ್ನಿಸಿದರೂ ಇದು ನಿಜ. ಯೋಗಾ ಬ್ಯೂಟಿ ಶಿಲ್ಪಾ ಶೆಟ್ಟಿ ಈ ಗೋಲ್ಡನ್ ಐಸ್‌ಕ್ರೀಮ್ ಪರಿಚಯಿಸಿದ್ದಾರೆ.ವಿಹಾರಯಾತ್ರೆಗಾಗಿ ಹಾಂಕಾಂಗ್ ಹೋಗಿದ್ದ ಶಿಲ್ಪಾ ಅಲ್ಲಿ ಒಂದು ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದರು. ಅಲ್ಲಿ ವಿಶೇಷವಾಗಿ ತಯಾರಿಸಲಾಗಿದ್ದ ಗೋಲ್ಡನ್ ಲೀಫ್ ಐಸ್‌ಕ್ರೀಮ್ ರುಚಿ ನೋಡಿದರು. ವೆನೀಲಾ ಫ್ಲೇವರ್‌ನಲ್ಲಿ ಈ ಐಸ್‌ಕ್ರೀಮ್ ತುಂಬಾ ಚೆನ್ನಾಗಿದೆ ಎಂದು ಹೇಳಿ ಒಂದು ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

https://www.instagram.com/p/BqCM0UXB3Gn/?utm_source=ig_embed

ಗೋಲ್ಡನ್ ಐಸ್‌ಕ್ರೀಮ್ ಮೇಲೆ 24 ಕ್ಯಾರೆಟ್ ಚಿನ್ನದ ಲೇಪನ ಹಚ್ಚುತ್ತಾರೆ. ಅತ್ಯಂತ ದುಬಾರಿ, ಗುಣಮಟ್ಟದ ಹಾಲಿನಿಂದ ತಯಾರಿಸುವ ಈ ಐಸ್‌ಕ್ರೀಮ್ ಮೇಲೆ ಚಿನ್ನದ ಲೇಪನ ಇರುತ್ತದೆ. ಪ್ರವಾಸಿಗರ ಅಭಿರುಚಿ ಮೇರೆಗೆ ವಿವಿಧ ರೂಪಗಳಲ್ಲಿ ನೀಡುತ್ತಾರೆ. ಈ ಐಸ್‍ಕ್ರೀಮ್ ಬೆಲೆ 13 ಡಾಲರ್. ಶಿಲ್ಪಾ ಶೆಟ್ಟಿ ಮೂಲಕ ಈ ಗೋಲ್ಡನ್ ಐಸ್‍ಕ್ರೀಮ್ ಸಾಮಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದುವರೆಗೂ ಈ ವಿಡಿಯೋವನ್ನು 8 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.No comments