Header Ads

test

ದೇವರೇ! ಚೆನ್ನೈನಲ್ಲಿ ಫುಡ್ ಆರ್ಡರ್ ಮಾಡಿದರೆ ರಾಜಸ್ಥಾನದಿಂದ ಡೆಲಿವರಿ ಮಾಡಿದರು.. ಕಸ್ಟಮರ್ ಸರ್‌ಪ್ರೈಸ್..!!

ಸಾಮಾನ್ಯವಾಗಿ ಆನ್‍ಲೈನ್‌ನಲ್ಲಿ ನಾವು ಫುಡ್ ಆರ್ಡರ್ ಮಾಡಿದರೆ... ಡೆಲಿವರಿ ಮಾಡುವಲ್ಲಿ ಸ್ವಲ್ಪ ತಡವಾಗಿದೆ ಸಾರ್. ನಿಮಗೆ ಆದ ತೊಂದರೆಗೆ ಚಿಂತಿಸುತ್ತಿದ್ದೇವೆ ಎಂಬ ಮೆಸೇಜ್‌ಗಳು ಬರುತ್ತಿರುತ್ತವೆ. ಆದರೆ ನಾವೀಗ ಹೇಳಲಿರುವ ಸಂಗತಿ ಮಾತ್ರ ಈ ಹಿಂದೆದೂ ನೀವು ಕೇಳಿರಲ್ಲ.

ಚೆನ್ನೈ ವಾಸಿ ಸ್ವಿಗ್ಗಿಯಲ್ಲಿ ಫುಡ್ ಆರ್ಡರ್ ಮಾಡಿದರೆ ರಾಜಸ್ಥಾನದಿಂದ ಕೇವಲ 12 ನಿಮಿಷಗಳಲ್ಲಿ ಕಸ್ಟಮರ್ ಕೈಗೆ ತಲುಪಿಸಿದ್ದಾರೆ. ದೇವರೇ! ಸಾವಿರಾರು ಕಿ.ಮೀ ದೂರವನ್ನು ಅಷ್ಟು ಕಡಿಮೆ ಸಮಯದಲ್ಲಿ ಹೇಗೆ ಡೆಲಿವರಿ ಮಾಡಿದರು ಎಂಬ ಚರ್ಚೆ ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿದೆ.


ಚೆನ್ನೈ ಮೂಲದ ಭಾರ್ಗವ್ ರಾಜನ್ ಫುಡ್ ಆರ್ಡರ್ ಮಾಡಬೇಕು ಎಂದುಕೊಂಡ. ಫುಡ್ ಡೆಲಿವರಿ ಆಪ್ ಸ್ವಿಗ್ಗಿಯಲ್ಲಿ ತನಗೆ ಬೇಕಾದ ಆಹಾರ ಆರ್ಡರ್ ಮಾಡಿದ. ಮೊದಲೇ ಹಸಿವಿನಿಂದ ಇದ್ದ ರಾಜನ್ ಫುಡ್ ಎಷ್ಟೊತ್ತಿಗೆ ಡೆಲಿವರಿ ಆಗುತ್ತದೋ ಎಂದು ಚೆಕ್ ಮಾಡಿ ಶಾಕ್ ಆದ. ಡೆಲಿವರಿ ಬಾಯ್ ಚೆನ್ನೈನಿಂದ ಹೊರಟಿದ್ದಾನೆ ಎಂದುಕೊಂಡರೆ ರಾಜಸ್ಥಾನದಿಂದ ಸ್ಟಾರ್ಟ್ ಆಗಿದ್ದ. ಇನ್ನು ತಾನು ಆರ್ಡರ್ ಮಾಡಿದ ಫುಡ್ ತಿಂದ ಹಾಗೆಯೇ ಬಿಡು ಎಂದುಕೊಂಡ. ಆದರೆ ಉಹಿಸಲೂ ಸಾಧ್ಯವಾಗದಂತೆ 12 ನಿಮಿಷಗಳಲ್ಲಿ ಡೆಲಿವರಿ ಬಾಯ್ ತಾನು ಆರ್ಡರ್ ಕೊಟ್ಟ ಆಹಾರವನ್ನು ತಂದುಕೊಟ್ಟ.

ಚಕಿತನಾದ ರಾಜನ್ ಸ್ವಿಗ್ಗಿ ಆಪ್‌ನಲ್ಲಿ ಸ್ಟಾರ್ಟ್ ಪಾಯಿಂಟನ್ನು ಡೆಲಿವರಿ ಪಾಯಿಂಟನ್ನು ಸ್ಕ್ರೀನ್ ಶಾಟ್ ತೆಗೆದು ಪೋಸ್ಟ್ ಮಾಡಿದ. ವಾವ್ ಸ್ವಿಗ್ಗಿ ಎಷ್ಟು ಸ್ಪೀಡ್ ಆಗಿ ಡೆಲಿವರಿ ಮಾಡಿತ್ತಿದ್ದಾರೆ ನೋಡಿ ಎಂದು ಕಾಮೆಂಟ್ ಹಾಕಿದ. ನಡೆದ ತಪ್ಪನ್ನು ಗುರುತಿಸಿದ ಸ್ವಿಗ್ಗಿ ಪ್ರತಿಕ್ರಿಯಿಸಿತು. "ದೇವರ ದಯೆಯಿಂದ ಸಮಯಕ್ಕೆ ನಿಮಗೆ ಆಹಾರ ಸಿಕ್ಕಿದೆ. ನೀವು ಎತ್ತಿ ತೋರಿಸಿರುವ ತಪ್ಪನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಭವಿಷ್ಯದಲ್ಲಿ ಈ ರೀತಿ ನಡೆಯದಂತೆ ಎಚ್ಚರವಹಿಸುತ್ತೇವೆ. ಸಮಸ್ಯೆಯನ್ನು ನಮ್ಮ ದೃಷ್ಟಿಗೆ ತಂದಿದ್ದಕ್ಕೆ ಧನ್ಯವಾದಗಳು" ಎಂದು ಸ್ವಿಗ್ಗಿ ಪೋಸ್ಟ್ ಮಾಡಿತು.

ಸ್ವಿಗ್ಗಿ ಆಪ್‌ನಲ್ಲಿ ತಾಂತ್ರಿಕ ದೋಷದಿಂದ ಈ ರೀತಿ ನಡೆದಿದೆ. ಹಾಗಾಗಿ ಕೇವಲ 12 ನಿಮಿಷಗಳಲ್ಲಿ ರಾಜಸ್ಥಾನದಿಂದ ಚೆನ್ನೈಗೆ ಫುಡ್ ಆರ್ಡರ್ ಮಾಡಿದಂತೆ ಕಾಣಿಸಿತು. ನಮ್ಮ ಕಸ್ಟಮರ್ಸ್‌ಗೆ ಸೇವೆ ನೀಡಲು ಚಂದ್ರಮಂಡಲಕ್ಕೂ ಹೋಗುತ್ತೇವೆ ಎಂದು ಸ್ವಿಗ್ಗಿ ಒಂದು ಜಿಫ್ ಇಮೇಜ್ ಪೋಸ್ಟ್ ಮಾಡಿದೆ. ನಾರ್ಟ್ ಇಂಡಿಯಾ ಫುಡ್ ಆರ್ಡರ್ ಮಾಡಿದ್ದಕ್ಕೆ ರಾಜಸ್ಥಾನದಿಂದ ಡೆಲಿವರಿ ಮಾಡಿದ್ದಾರೆಂದು ಅಮರ್ ಎಂಬ ಗ್ರಾಹಕ ಟ್ವೀಟ್ ಮಾಡಿದ್ದಾನೆ.

No comments