Header Ads

test

ಅಭಿನಂದನ್ ಪಕ್ಕದಲ್ಲೇ ಇದ್ದ ಮಹಿಳೆ ಯಾರು ಗೊತ್ತಾ..?

ಕೊನೆಗೂ ಅಭಿನಂದನ್ ವರ್ಧಮಾನ್ ತಾಯ್ನಾಡಿಗೆ ಮರಳಿದ್ದಾರೆ. ಸರಿಯಾಗಿ ರಾತ್ರಿ 9 ಗಂಟೆ 20 ನಿಮಿಷಕ್ಕೆ ವಾಘಾ ಬಾರ್ಡರ್ ತಲುಪಿದ ಅವರಿಗೆ ಭಾರತ ಅಧಿಕಾರಿಗಳು ಸ್ವಾಗತ ಕೋರಿದರು. ಅವರನ್ನು ಅತ್ಯಂತ ಬಿಗಿ ಭದ್ರತೆಯಲ್ಲಿ ಭಾರತಕ್ಕೆ ಹಸ್ತಾಂತರಿಸಿತು ಪಾಕ್.. ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಸಮಯದಲ್ಲಿ ಅವರ ಜತೆ ನಡೆದು ಬಂದ ಮಹಿಳೆ ಯಾರು ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಕೆಲವರು ಆಕೆಯನ್ನು ಅಭಿನಂದನ್ ಪತ್ನಿ ಎಂದು... ಇನ್ನೂ ಕೆಲವರು ಕುಟುಂಬಿಕರು ಇರಬಹುದು ಎಂದುಕೊಂಡರು. ಆದರೆ ಆಕೆ ಅಭಿನಂದನ್ ಪತ್ನಿ ಅಲ್ಲ, ಫ್ಯಾಮಿಲಿ ಮೆಂಬರ್ ಅಲ್ಲವೇ ಅಲ್ಲ. ಹಾಗಿದ್ದರೆ ಯಾರು..?


ಆಕೆ ಹೆಸರು ಡಾಕ್ಟರ್ ಫಾರಿಹ ಬುಗ್ತಿ. ಪಾಕಿಸ್ತಾನ ವಿದೇಶಿ ಕಾರ್ಯಾಲಯದಲ್ಲಿ ಭಾರತ ನಿರ್ದೇಶಕಿ. ಡಾಕ್ಟರ್ ಬುಗ್ತಿ ಒಬ್ಬ FSP (IFS ಗೆ ಸಮಾನ) ಅಧಿಕಾರಿ ಮತ್ತು ಭಾರತ ವಿದೇಶಾಂಗ ಕಾರ್ಯಾಲಯದಲ್ಲಿ (ವಿದೇಶಾಂಗ ವ್ಯವಹಾರ ಸಚಿವಾಲಯದ ಪ್ರತಿನಿಧಿ) ಭಾರತದ ವ್ಯವಹಾರಗಳನ್ನು ನಿರ್ವಹಿಸಲು ಜವಾಬ್ದಾರಿ ವಹಿಸುತ್ತಾರೆ. ಪಾಕ್ ಜೈಲಿನಲ್ಲಿದ್ದ ಕುಲಭೂಷಣ್ ಜಾಧವ್ ಪ್ರಕರಣವನ್ನು ವಿಚಾರಿಸುವ ಪಾಕ್ ಅಧಿಕಾರಿಗಳಲ್ಲಿ ಆಕೆ ಸಹ ಒಬ್ಬರು. ಜಾಧವ್ ಭಾರತದ ಗೂಢಚಾರಿ ಎಂದು ಪಾಕಿಸ್ತಾನ ಬಂಧಿಸಿದೆ. ಕಳೆದ ವರ್ಷ ಇಸ್ಲಾಮಾಬಾದ್‌ನಲ್ಲಿ ಜಾಧವ್ ತಾಯಿ, ಪತ್ನಿ ನಡುವೆ ನಡೆದ ಸಮಾವೇಶದಲ್ಲೂ ಆಕೆ ಸಹ ಪಾಲ್ಗೊಂಡಿದ್ದರು.

ಬೇಹುಗಾರಿಕೆ ಆರೋಪದಲ್ಲಿ ಮರಣದಂಡನೆಗೆ ಗುರಿಯಾಗಿ ಪಾಕಿಸ್ತಾನದ ಜೈಲಿನಲ್ಲಿರುವ ಭಾರತೀಯ ನಾಗರಿಕ ಕುಲ್‌ಭೂಷಣ್‌ ಜಾಧವ್‌ ಅವರನ್ನು ಅವರ ಪತ್ನಿ ಹಾಗೂ ತಾಯಿ ಭೇಟಿ ಮಾಡಿದ್ದರು. ಅವರ ಜತೆಗೆ ಭಾರತದ ಡೆಪ್ಯುಟಿ ಹೈಕಮಿಷನರ್‌ ಜೆ.ಪಿ ಸಿಂಗ್‌ ಕೂಡ ಇದ್ದರು. ಜಾಧವ್‌ ಅವರು ಕಟುಂಬ ಸದಸ್ಯರು ಮೊದಲು ಭಾರತೀಯ ಹೈಕಮಿಷನ್‌ ಕಚೇರಿಗೆ ಆಗಮಿಸಿದರು. ಅಲ್ಲಿ ಸ್ವಲ್ಪ ಹೊತ್ತು ಕಳೆದ ಬಳಿಕ, ಜಾಧವ್‌ ಅವರನ್ನು ಭೇಟಿ ಮಾಡುವುದಕ್ಕಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ತೆರಳಿದರು. 30 ನಿಮಿಷಗಳ ಕಾಲ ಜಾಧವ್‌ ಮತ್ತು ಕುಟುಂಬ ಸದಸ್ಯರು ಮಾತುಕತೆ ನಡೆಸಿದರು ಎಂದು ವಿದೇಶಾಂಗ ಸಚಿವಾಲಯದ ಪ್ರಕಟಣೆ ತಿಳಿಸಿದ್ದನ್ನು ಸ್ಮರಿಸಬಹುದು.

ವರ್ಧಮಾನ್ ಜತೆಗಿದ್ದ ಆ ಹೆಣ್ಣು ಮಗಳು ಈಗ ಎಲ್ಲರ ಕೇಂದ್ರ ಬಿಂದು. ಆಕೆ ಯಾರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ವರ್ಧನಮಾನ್ ಅವರಷ್ಟೇ ಆಕೆ ಸಹ ಈಗ ಜನಪ್ರಿಯವಾಗಿದ್ದಾರೆ.


No comments