Header Ads

test

ಮೇಲೆ ಒಬ್ಬ ಹುಡುಗಿ, ಕೆಳಗೆ ಇಬ್ಬರು ಹುಡುಗಿಯರು... ಜಗತ್ತಿನಲ್ಲೇ ಅತ್ಯಂತ ವಿಚಿತ್ರ ಅವಳಿಗಳು

ನಾವು ಇತ್ತೀಚೆಗೆ ಸಯಾಮಿ ಅವಳಿಗಳ ಬಗ್ಗೆ ಆಗಾಗ ಕೇಳುತ್ತಲೇ ಇರುತ್ತೇವೆ. ಹಲವು ಸಂದರ್ಭಗಳಲ್ಲಿ ಸಯಾಮಿ ಅವಳಿಗಳ ಬಗ್ಗೆ ನಾವು ಮಾತನಾಡುತ್ತಿರುತ್ತೇವೆ. ಕೆಲವರು ಸಯಾಮಿ ಅವಗಳಿಗಳನ್ನು ಬೇರ್ಪಡಿಸಲಾಗಿದೆ. ಆದರೆ ಕೆಲವರನ್ನು ಮಾತ್ರ ಬೇರ್ಪಡಿಸಲು ಸಾಧ್ಯವಾಗುತ್ತಿಲ್ಲ. ಸಯಾಮಿ ಅವಳಿಗಳನ್ನು ಬೇರ್ಪಡಿಸಿದರೆ ಸಾವಪ್ಪುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿರುತ್ತವೆ. ಹಾಗಾಗಿ ಸಯಾಮಿ ಅವಳಿಗಳನ್ನು ಬೇರ್ಪಡಿಸಲು ಭಯ ಬೀಳುತ್ತಾರೆ. ಭಾರತದಲ್ಲಿ ಎಲ್ಲೋ ಅಲ್ಲಲ್ಲಿ ಮಾತ್ರ ಕಾಣಿಸುವ ಸಯಾಮಿ ಅವಗಳಿಗಳು ಜಗತ್ತಿನಲ್ಲಿ ಒಟ್ಟಾರೆ ನೂರರ ಸಂಖ್ಯೆಯಲ್ಲಿದ್ದಾರೆ. ಆದರೆ ನಾವು ಇದುವರೆಗೂ ಕೇಳಿದ ಸಯಾಮಿ ಅವಳಿಗಳಿಗೂ 1869ರಲ್ಲಿ ಜನಿಸಿದ ಕಾರ್ಬಿನ್‌ಗೂ ಬಹಳಷ್ಟು ವ್ಯತ್ಯಾಸ ಇದೆ.


ಒಂದು ಕಾಲದ ಲಿಂಕನ್ ದೇಶದಲ್ಲಿ 1869ರಲ್ಲಿ ನಾಲ್ಕು ಕಾಲಿನ ಕಾರ್ಬಿನ್ ಜನಿಸಿದಳು. ಆಕೆ ಜನಿಸಿದ ಬಳಿಕ ವೈದ್ಯರು ಮತ್ತು ಆಕೆ ಕುಟುಂಬಿಕರೆಲ್ಲರೂ ಚಕಿತರಾದರು. ಕಾರ್ಬಿನ್‌ಗೆ ನಾಲ್ಕು ಕಾಲುಗಳು ಇರುವುದರ ಜತೆಗೆ, ಆಕೆಗೆ ಎರಡು ಜನನೇಂದ್ರಿಯಗಳು ಸಹ ಇವೆ. ಅಂದರೆ ಆಕೆ ಸಯಾಮಿ ಅವಳಿ ಎಂದು ಒಂದು ನಿರ್ಧಾರಕ್ಕೆ ಬಂದರು. ಆದರೆ ಆಗಿನ ತಂತ್ರಜ್ಞಾನದಿಂದ ಆಕೆಯನ್ನು ಇನ್ನಷ್ಟು ಪರೀಕ್ಷಿಸಲು ಸಾಧ್ಯವಾಗಲಿಲ್ಲ. ಸೊಂಟದ ಭಾಗದವರೆಗೂ ಒಂದು ಹುಡುಗಿ ಇದ್ದರೆ, ಸೊಂಟದ ಕೆಳ ಭಾಗದಲ್ಲಿ ಇಬ್ಬರು ಯುವತಿಯರು. ಆಕೆಯಲ್ಲಿ ಎರಡು ಜನನೇಂದ್ರಿಯಗಳು ಎರಡು ಗರ್ಭಕೋಶಗಳು ಇರುವುದಾಗಿ ವೈದ್ಯರು ನಿರ್ಧರಿಸಿದರು.

ಆರಂಭದಲ್ಲಿ ಆಕೆ ಸ್ವಲ್ಪ ದಿನಗಳ ಕಾಲ ಮಾತ್ರ ಬದುಕಿರುತ್ತಾಳೆಂದು ವೈದ್ಯರು ಭಾವಿಸಿದರು. ನಾಲ್ಕು ಕಾಲು ಇದ್ದರೂ ಸಹ ಎರಡು ಕಾಲು ತುಂಬಾ ಚಿಕ್ಕದಾಗಿ ಇರುವುದರ ಜತೆಗೆ, ಒಂದು ಕಾಲು ಸೊಟ್ಟಗೆ ಇದ್ದ ಕಾರಣ ಆಕೆ ಒಂದು ಕಾಲಿನಲ್ಲೇ ನಡೆದಾಡುವ ಪರಿಸ್ಥಿತಿ ಇತ್ತು. ನಾಲ್ಕು ಕಾಲುಗಳಲ್ಲಿ ಮೂರು ಕಾಲು ಕೆಲಸ ಮಾಡದಿದ್ದರೂ ಸಹ ಆಕೆ ಧೈರ್ಯವಾಗ್ಗಿ ಜೀವನ ಸಾಗಿಸಿದಳು. ಚಿಕ್ಕ ವಯಸ್ಸಲ್ಲೇ ಸರ್ಕಸ್ ಕಂಪೆನಿ ಸೇರಿದಳು. ಆಗ ವಾರಕ್ಕೆ 450 ಡಾಲರ್‌ಗಳ ಸಂಪಾದನೆ.

19 ವರ್ಷಗಳ ವಯಸ್ಸಲ್ಲಿ ಕಾರ್ಬಿನ್‌ರನ್ನು ವೈದ್ಯರೊಬ್ಬರು ಮದುವೆಯಾಗಲು ಮುಂದೆ ಬಂದರು. ಮದುವೆ ಬಳಿಕ ಕಾರ್ಬಿನ್ ಒಂದು ಗಂಡು ಮಗು, ನಾಲ್ಕು ಮಂದಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದಳು. ಆ ಮಕ್ಕಳೆಲ್ಲಾ ಒಂದೇ ಗರ್ಭಾಶಯದಿಂದ ಜನಿಸಲಿಲ್ಲ ಎಂದು ಆಗ ವೈದ್ಯರು ಹೇಳಿದ್ದರು. ಅಷ್ಟೆಲ್ಲಾ ಅಂಗವೈಕಲ್ಯ ಇದ್ದರೂ ಸಹ 60 ವರ್ಷಗಳ ಕಾಲ ಆಕೆ ಬದುಕಿದ್ದರು. ಆಕೆ ಮೃತಪಟ್ಟ ಬಳಿಕ ಸಂಶೋಧನೆಗೆ ಆಕೆ ಮೃತ ದೇಹವನ್ನು ನೀಡಬೇಕೆಂದು ಕೋರಿದರು. ಅದ್ದಕ್ಕೆ ಭಾರಿ ಹಣ ಸಲ್ಲಿಸಲು ಸಹ ಮುಂದೆ ಬಂದರು. ಆದರೆ ಕುಟುಂಬಿಕರು ಮಾತ್ರ ಆಕೆ ಮೃತದೇಹವನ್ನು ನೀಡಲು ಒಪ್ಪಿಕೊಳ್ಳಲಿಲ್ಲ. ಆಕೆಯ ಮೃತ ದೇಹವನ್ನು ಕಾಂಕ್ರೀಟ್‌ನಲ್ಲಿ ಹಾಕಿದರು. ಹಾಗಾಗಿ ಆಕೆಗೆ ಸಂಬಂಧಿಸಿದ ರಹಸ್ಯಗಳೆಲ್ಲಾ ಸಹ ಹಾಗೆಯೇ ಇದ್ದುಬಿಟ್ಟವು.

No comments