Header Ads

test

ಮದುವೆಯಲ್ಲಿ ಆ ಡ್ಯಾನ್ಸ್, ಫೋಟೋಗಳು ಏನು... ಕುಟುಂಬಕ್ಕೆ ಧಾರ್ಮಿಕ ಬಹಿಷ್ಕಾರ

ಇತ್ತೀಚಿನ ದಿನಗಳಲ್ಲಿ ಮದುವೆಗಳು ಯಾವ ಪ್ರಮಾಣದಲ್ಲಿ ನಡೆಯುತ್ತಿವೆ ಎಂದು ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಅದೆಷ್ಟೇ ಮಧ್ಯಮ ವರ್ಗದವರಾದರೂ ಮದುವೆಯನ್ನು ಏನಿಲ್ಲ ಎಂದರೂ ಎರಡು ಮೂರು ದಿನಗಳ ಕಾಲ ಮಾಡುತ್ತಾರೆ. ಮೊದಲ ದಿನ ಸಂಗೀತ್ ಎಂದೂ ಹಾಡು ಆಟಗಳಿಂದ ಕುಣಿಯುತ್ತಾರೆ, ಆ ಬಳಿಕ ಮದುವೆ, ಇನ್ನು ಮದುವೆ ಬಳಿಕ ಆರತಕ್ಷತೆ. ಈ ರೀತಿ ಮದುವೆ ಎಂದರೆ ಆಟಾಟೋಪ ಇದ್ದದ್ದೆ. ಇನ್ನು ಮದುವೆಯಲ್ಲಿ ಪ್ರತಿ ಸನ್ನಿವೇಶವನ್ನು ಬಂಧಿಸಲು ಲಕ್ಷಾಂತರ ಖರ್ಚು ಮಾಡಿ ಫೋಟೋಗ್ರಾಫರ್ಸ್ ಇಡುತ್ತಿದ್ದಾರೆ. ಆದರೆ ಇದೇ ಸಂಗತಿ ಕೇರಳಲ್ಲಿನ ಒಂದು ಕುಟುಂಬ ಬಹಿಷ್ಕಾರಕ್ಕೆ ಕಾರಣವಾಯಿತು.


ಮದುವೆಯಲ್ಲಿ ಡ್ಯಾನ್ಸ್‌ಗಳು, ಫೋಟೋಗಳು ಎಂದು ಗಲಾಟೆ ಗದ್ದಲ ಮಾಡಿದರು ಎಂದು ಕುಟುಂಬವನ್ನು ಧಾರ್ಮಿಕ ಮುಖಂಡರು ಬಹಿಷ್ಕರಿಸಿದ್ದಾರೆ. ಕಂಪ್ಯೂಟರ್ ಯುಗದಲ್ಲೂ ಸಹ ಇಂತಹ ಘಟನೆಗಳು ನಡೆದಿರುವುದು ದಾರುಣ. ಈ ಘಟನೆ ನಡೆದು ಎರಡು ತಿಂಗಳಾಗಿದೆ. ಆದರೆ ಈಗ ಮಾಧ್ಯಮಗಳ ಮುಂದೆ ಬಂದಿದೆ. ಕುಟುಂಬ ಬಹಿಷ್ಕಾರದ ಆ ಕುಟುಂಬದ ಸದಸ್ಯರು ಈಗ ಮಾಧ್ಯಮಗಳ ಮುಂದೆ ಬಂದಿದ್ದರೆ.

ಸಂಪೂರ್ಣ ವಿವರಗಳನ್ನು ನೋಡಿದರೆ...

ಕೇರಳ ರಾಜ್ಯ ಪಾಲಕ್ಕಾಡ್ ಜಿಲ್ಲೆ ಥ್ರಿತಲದಲ್ಲಿ ಡಿಸೆಂಬರ್ 28ರಂದು ವಿವಾಹ ನಡೆಯಿತು. ಮದುವೆಯಾದ ಕೆಲ ದಿನಗಳ ಬಳಿಕ ಧಾರ್ಮಿಕ ಮುಖಂಡರು ನಾಲ್ಕು ಕಾರಣಗಳನ್ನು ತೋರಿಸಿ ಕುಟುಂಬವನ್ನು ಬಹಿಷ್ಕರಿಸಿದ್ದಾರೆ. ಮಹಲ್ ಸಮಿತಿ ಅವರ ನಿರ್ಧಾರದಿಂದ ಆ ಕುಟುಂಬ ಸದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಸಮಿತಿ ಸದ್ಯರನ್ನು ಅಂಗಲಾಚಿ ಬೇಡಿಕೊಂಡರೂ ಅವರನ್ನು ತಡೆಯಲು ಸಾಧ್ಯವಾಗಿಲ್ಲ.

ಇಷ್ಟಕ್ಕೂ ಮಹಲ್ ಸಮಿತಿ ಅವರು ತೋರಿಸಿದ ಆ ನಾಲ್ಕು ಕಾರಣಗಳು ಏನು ಗೊತ್ತಾ...?

1. ಕಾರ್ಯಕ್ರಮದಲ್ಲಿ ಮಹಿಳೆಯರು ಹಾಡು ಹಾಡಿದ್ದು.
2. ಹೆಣ್ಣು, ಗಂಡು ಜತೆಯಾಗಿ ಫೋಟೋಗಳಿಗೆ ಪೋಸು ನೀಡಿದ್ದು.. ಮುಖ್ಯವಾಗಿ ಹೆಂಗಸರು ಬುರ್ಖಾ ಇಲ್ಲದೆ ಫೋಟೋಗಳಿಗೆ ಫೋಸ್ ನೀಡಿರುವುದು.
3. ಸ್ಟೇಜ್ ಮೇಲೆ ಮಕ್ಕಳ ಜತೆಗೆ ಡ್ಯಾನ್ಸ್ ಮಾಡಿರುವುದು.
4. ಮದುವೆಯಲ್ಲಿ ಹಾಡುಗಳನ್ನು ಹಾಕಿದ್ದು, ಮೈಕ್ರೋಫೋನ್ ಬಳಸಿದ್ದು

ಈ ನಾಲ್ಕು ಸಿಲ್ಲಿ ಕಾರಣಗಳ. ಆದರೂ ಸಹ ಕುಟುಂಬವನ್ನು ತಮ್ಮ ಧರ್ಮದಿಂದ ಹೊರಹಾಕಿದರು. ಕೇರಳದಲ್ಲಿ ಮುಸ್ಲಿಂ ಧಾರ್ಮಿಕ ಆಚರಣೆಗಳು ಕಠಿಣವಾಗಿ ಇವೆ ಎನ್ನಲು ಇದು ಒಂದು ನಿದರ್ಶನ. ಇಂತಹ ಪದ್ಧತಿಗಳು ಭಾರತದಲ್ಲಿ ಇರುವುದು ಹೇಯ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸೈರನ್ ಮೊಳಗುತ್ತಿದೆ. ಕುಟುಂಬವನ್ನು ಬಹಿಷ್ಕರಿಸಿದ ಸಮಿತಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂಬ ಕೂಗು ಕೇಳಿಬರುತ್ತಿದೆ.

No comments