Header Ads

test

ರಾತ್ರಿ ಮಲಗುವ ಮುನ್ನ ಏಲಕ್ಕಿಯನ್ನು ತಿಂದು ಬಿಸಿ ನೀರು ಕುಡಿದರೆ ಏನಾಗುತ್ತದೆ ಗೊತ್ತಾ?

ಸಾಮಾನ್ಯವಾಗಿ ನಮ್ಮ ಅಡುಗೆ ಮನೆಯಲ್ಲಿ ಏಲಕ್ಕಿ ಕಡ್ಡಾಯವಾಗಿ ಇದ್ದೇ ಇರುತ್ತದೆ. ಕೆಲವು ರೀತಿಯ ಅಡುಗೆಗಳಲ್ಲಿ, ಮಸಾಲೆಗಳಲ್ಲಿ, ಟೀಯಲ್ಲಿ ಏಲಕ್ಕಿಯನ್ನು ಬಳಸುತ್ತಾರೆ. ಏಲಕ್ಕಿ ನಮ್ಮ ಆರೋಗ್ಯಕ್ಕೆ ಮಾಡುವ ಒಳಿತು ಸಾಕಷ್ಟಿದೆ.



ರಾತ್ರಿ ಹೊತ್ತು ಮಲಗುವ ಮುನ್ನ ಒಂದು ಏಲಕ್ಕಿ ತೆಗೆದುಕೊಂಡು ಉಗುರು ಬೆಚ್ಚಗಿನ ನೀರನ್ನು ಕುಡಿದರೆ ತುಂಬಾ ಒಳ್ಳೆಯದು ಎನ್ನುತ್ತಿದ್ದಾರೆ ಆರೋಗ್ಯ ತಜ್ಞರು. ಪ್ರತಿ ದಿನ ಈ ರೀತಿ ರಾತ್ರಿ ಹೊತ್ತು ತೆಗೆದುಕೊಂಡರೆ ನಮಗೆ ಇನ್ನು ಮೆಡಿಸಿನ್ಸ್ ಅಗತ್ಯ ಇರಲ್ಲ ಎನ್ನುತ್ತಿದ್ದಾರೆ ಆರೋಗ್ಯ ತಜ್ಞರು.

 ಇತ್ತೀಚಿನ ದಿನಗಳಲ್ಲಿ ತೂಕ ಕಡಿಮೆ ಮಾಡಿಕೊಳ್ಳಲು ಒಬ್ಬೊಬ್ಬರು ಒಂದೊಂದು ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಯಾರು ತೂಕವನ್ನು ಸರಳವಾಗಿ ಕಡಿಮೆ ಮಾಡಿಕೊಳ್ಳಬೇಕು ಎಂದಿರುತ್ತಾರೋ ಅಂತಹವರು ಪ್ರತಿ ದಿನ ರಾತ್ರಿ ಒಂದು ಏಲಕ್ಕಿಯನ್ನು ತೆಗೆದುಕೊಂಡು ಒಂದು ಗ್ಲಾಸ್ ನೀರು ಕುಡಿಯುವುದರಿಂದ ಅವರ ದೇಹದಲ್ಲಿನ ಉಷ್ಣತೆ ಹೆಚ್ಚುತ್ತದೆ. ಇದರಿಂದ ತೂಕವನ್ನು, ದೇಹದಲ್ಲಿನ ಕೆಟ್ಟ ಕೊಲೆಸ್ಟರಾರನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ ದೇಹದಲ್ಲಿನ ಕೆಟ್ಟ ಪದಾರ್ಥಗಳನ್ನು ಸಹ ತೊಲಗಿಸಿ ರಕ್ತ ಸಂಚಲೆನೆಯನ್ನು ಸುಸೂತ್ರ ಗೊಳಿಸುತ್ತದೆ. ಎಲ್ಲಾ ಅಂಗಾಂಗಳಿಗೂ ಸ್ವಚ್ಛಗೊಳಿಸಿ ರಕ್ಷಿಸುತ್ತದೆ.

ನಾವು ತೆಗೆದುಕೊಳ್ಳುವ ಪದಾರ್ಥಗಳಲ್ಲಿ ಬಹಳಷ್ಟು ಜೀರ್ಣವಾಗದೆ ಅಸಿಡಿಟಿ, ಅಜೀರ್ಣದಂತಹ ಸಮಸ್ಯೆಗಳು ಬರುತ್ತಿರುತ್ತವೆ. ಇದರ ಕಾರಣದಿಂದ ಅನೇಕ ಮಂದಿ ಮಲಬದ್ಧತೆ ಸಮಸ್ಯೆಯಿಂದ ನರಳುತ್ತಿರುತ್ತಾರೆ. ಅಂತಹವರು ಒಂದು ಏಲಕ್ಕಿಯನ್ನು ತೆಗೆದುಕೊಂಡು ಉಗುರು ಬೆಚ್ಚಗಿನ ನೀರು ಕುಡಿದರೆ ಸಮಸ್ಯೆಯಿಂದ ಹೊರಬೀಳಬಹುದು. ಅಷ್ಟೇ ಅಲ್ಲ ರಾತ್ರಿ ಹೊತ್ತು ಸರಿಯಾಗಿ ನಿದ್ದೆ ಬಾರದವರಿಗೂ ಸಹ ಏಲಕ್ಕಿ ಒಳ್ಳೆಯ ಔಷಧಿಯಾಗಿ ಕೆಲಸ ಮಾಡುತ್ತದೆ. 

No comments