ತಮ್ಮ ಈ ಹಣ ತೆಗೆದುಕೊಂಡು ಆ ಸಾಲ ತೀರಿಸಿಬಿಡು ಎಂದ ಅಣ್ಣ..!
ದೇಶದಲ್ಲೇ ಅತ್ಯಂತ ಶ್ರೀಮಂತ ಮುಕೇಶ್ ಅಂಬಾನಿ ತನ್ನ ಸಹೋದರ ಅನಿಲ್ರನ್ನು ಜೈಲು ಶಿಕ್ಷೆಯಿಂದ ಪಾರು ಮಾಡಲು ಆರ್ಥಿಕ ಸಹಾಯ ಮಾಡಿದ್ದಾರೆ. ಈ ಹಣದೊಂದಿಗೆ ಆರ್ ಕಾಮ್ ಅಧಿಪತಿ ಅನಿಲ್, ಸ್ವೀಡನ್ ಮೂಲಕ ಎರಿಕ್ಸನ್ ಕಂಪೆನಿಗೆ ನೀಡಬೇಕಾದ ಸಾಲದ ಬಾಬತ್ತನ್ನು ಹಿಂತಿರುಗಿಸಿದ ಕಾರಣ ಕಂಬಿ ಎಣಿಸಬೇಕಾದ ಪರಿಸ್ಥಿತಿಯಿಂದ ಪಾರಾಗಿದ್ದಾರೆ.ಈ ಮೂಲಕ ಇಷ್ಟು ದಿನ ಈ ಸಹೋದರ ನಡುವೆ ಇದ್ದಂತಹ ವೈರತ್ವ ದೂರವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿರುವ ಅನಿಲ್ ಅಂಬಾನಿ, "ಕ್ಲಿಷ್ಟ ಪರಿಸ್ಥಿತಿಯಲ್ಲಿ ನನ್ನ ಬೆನ್ನಿಗೆ ನಿಂತು, ಕಾಪಾಡಿದ ಗೌರವಾನ್ವಿತ ಅಣ್ಣ ಮುಕೇಶ್, ಅವರ ಸತಿಮಣಿ ನೀತಾರಿಗೆ ಹೃದಯ ಪೂರ್ವಕ ಕೃತಜ್ಞತೆಗಳು" ಎಂದಿದ್ದಾರೆ. ಈ ಕೆಲಸ ಮೂಲಕ ಅವರು ಕುಟುಂಬ ಮೌಲ್ಯಗಳ ಪ್ರಾಮುಖ್ಯತೆಯನ್ನು ಸಾಬೀತು ಪಡಿಸಿದ್ದಾರೆ.
2002ರಲ್ಲಿ ತಂದೆ ಉಯಿಲು ಬರೆಯದೆ ಮೃತಪಟ್ಟ ಕಾರಣ ಈ ಸಹೋದರರ ನಡುವೆ ವಿವಾದಗಳು ತಲೆದೋರಿದವು. 2005ರಲ್ಲಿ ಇವರಿಬ್ಬರ ನಡುವಿನ ವಿವಾದ ತೀವ್ರವಾದಾಗ ರಿಲಯನ್ಸ್ ಗ್ರೂಪ್ ಇಬ್ಭಾಗವಾಯಿತು. ನೈಸರ್ಗಿಕ ಅನಿಲ ವಿಷಯದಲ್ಲಿ ಇವರಿಬ್ಬರೂ ಕಾನೂನು ಹೋರಾಟ ಸಹ ಮಾಡಿದ್ದಾರೆ.
ಇದಕ್ಕೂ ಮುನ್ನ ಅನಿಲ್ ಅಂಬಾನಿ, ಆರ್.ಕಾಮ್ ಕಂಪೆನಿಯ ಇಬ್ಬರು ನಿರ್ದೇಶಕರು ನ್ಯಾಯಾಂಗ ನಿಂದನೆ ಮಾಡಿದ್ದಾರೆಂದು ಫೆಬ್ರವರಿ 20ರಂದು ಸುಪ್ರೀಂ ಕೋರ್ಟ್ ತಿಳಿಸಿತ್ತು. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಯಥಾಪ್ರಕಾರ ಧೋರಣೆ ಅವಲಂಭಿಸಿದ್ದಾರೆಂದು ಆದೇಶಿಸಿತ್ತು.
''ಎರಿಕ್ಸನ್ ಇಂಡಿಯಾ ಕಂಪನಿಗೆ ಕೊಡಬೇಕಾಗಿರುವ ಹಣವನ್ನು ಮಾ.19ರೊಳಗೆ ಪಾವತಿಸಬೇಕು. ಇಲ್ಲದೇ ಹೋದರೆ, ಮೂರು ತಿಂಗಳಿನ ಜೈಲು ಶಿಕ್ಷೆ ಎದುರಿಸಬೇಕು,'' ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಖಡಕ್ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ 462 ಕೋಟಿ ರೂ.ಗಳನ್ನು ಅನಿಲ್ ಅಂಬಾನಿ ಕಂಪನಿಯು ಎರಿಕ್ಸನ್ಗೆ ಪಾವತಿಸಿದೆ. ಈಗಾಗಲೇ ರಿಲಯನ್ಸ್ ಗ್ರೂಪ್ 118 ಕೋಟಿ ರೂ.ಗಳನ್ನು ಸುಪ್ರೀಂಕೋರ್ಟ್ನಲ್ಲಿ ಠೇವಣಿ ಇಟ್ಟಿದ್ದು, ಅದನ್ನು ಎರಿಕ್ಸನ್ಗೆ ನೀಡಲಾಗುವುದು. ಅಲ್ಲದೇ, 20 ದಿನಗಳ ಹಿಂದಷ್ಟೇ ಮತ್ತೆ 3 ಕೋಟಿ ರೂ.ಗಳನ್ನು ಪೆನಾಲ್ಟಿ ಬಡ್ಡಿಗಾಗಿ ಠೇವಣಿ ಇಟ್ಟಿತ್ತು. ಒಟ್ಟಾರೆ, ಎರಿಕ್ಸನ್ಗೆ ಪಾವತಿಸಬೇಕಾಗಿದ್ದ 580 ಕೋಟಿ ರೂ. ಸಾಲವನ್ನು ಆರ್ಕಾಮ್ ತೀರಿಸಿದಂತಾಗಿದೆ. ಈ ಮೂಲಕ ಎರಿಕ್ಸನ್ ಮತ್ತು ಆರ್ಕಾಮ್ ನಡುವೆ ಕಳೆದ 18 ತಿಂಗಳಿಂದ ನಡೆಯುತ್ತಿದ್ದ ಕಾನೂನು ಸಮರಕ್ಕೆ ತೆರೆ ಬಿದ್ದಿದೆ.
''ಎರಿಕ್ಸನ್ ಕಂಪನಿಗೆ ಬಡ್ಡಿಯೊಂದಿಗೆ ಸಾಲವು ಪಾವತಿಯಾಗಿದೆ. ಹೀಗಾಗಿ, ದಿವಾಳಿ ಪ್ರಕ್ರಿಯೆಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ವಾಪಸ್ ಪಡೆಯಲಿದ್ದೇವೆ,'' ಎಂದು ಈ ಪ್ರಕರಣದಲ್ಲಿ ಎರಿಕ್ಸನ್ ಅನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅನಿಲ್ ಖೇರ್ ಹೇಳಿದ್ದಾರೆ.
ರಿಲಯನ್ಸ್ ಕಮ್ಯುನಿಕೇಷನ್ಸ್ ಕಂಪನಿ ಉದ್ದೇಶಪೂರ್ವಕವಾಗಿ ಸ್ವೀಡನ್ ಮೂಲದ ಟೆಲಿಕಾಂ ಕಂಪನಿ ಎರಿಕ್ಸ್ನ್ಗೆ ಹಣ ಹಿಂದಿರುಗಿಸಿಲ್ಲ. ಈ ಹಿಂದೆ ಸೂಚನೆ ನೀಡಿದ್ದರು ಅದನ್ನು ಪಾಲಿಸಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ದೂರಿತ್ತು.
''ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್ಗೆ (ಎಡಿಎಜಿ) ರಫೆಲ್ ಜೆಟ್ ಡೀಲ್ನಲ್ಲಿ ಹೂಡಿಕೆ ಮಾಡಲು ದುಡ್ಡಿದೆ. ಆದರೆ ತನಗೆ ಕೊಡಬೇಕಿರುವ 550 ಕೋಟಿ ರೂ. ಬಾಕಿ ನೀಡಲು ಸತಾಯಿಸುತ್ತಿದೆ,'' ಎರಿಕ್ಸನ್ ದೂರಿತ್ತು. ಈ ಪರಿಣಾಮ ಭಾರತದ ಸಿರಿವಂತ ಉದ್ಯಮಿ ಮುಕೇಶ್ ಅಂಬಾನಿ ಅವರ ತಮ್ಮ ಅನಿಲ್ ಅಂಬಾನಿ ಸಂಕಷ್ಟಕ್ಕೀಡಾಗಿದ್ದರು. ಫೋರ್ಬ್ಸ್ ಪ್ರಕಾರ ಅನಿಲ್ ಅಂಬಾನಿಯವರ ಸಂಪತ್ತಿನ ಮೌಲ್ಯ 1.7 ಶತಕೋಟಿ ಡಾಲರ್ (ಅಂದಾಜು 11,900 ಕೋಟಿ ರೂ.) ಆರ್ಕಾಮ್ನ ಅಂದಾಜು ಸಾಲ 42,000 ಕೋಟಿ ರೂ.

Post a Comment